- ದೇವಸ್ಥಾನ, ಹಿರಿಯ ನಾಯಕರ ಮನೆಗೆ ಭೇಟಿ
- ಸಂಘದ ಗುರು ವಂದನೆಯಲ್ಲಿ ಹಾಜರ್
- ಮುಂಜಾನೆಯಿಂದ 3000 ಜನರ ಜತೆ ಮಾತು!
NAMMUR EXPRESS
ತೀರ್ಥಹಳ್ಳಿ: ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ತವರು ತೀರ್ಥಹಳ್ಳಿಗೆ ಆಗಮಿಸಿದ್ದು ಸಾವಿರಾರು ಜನರು ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ನಡುವೆ ಆರಗ ಅವರು ತಮ್ಮ ಕುಲದೇವರು ದೇವರಗುಡಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅರುಣಗಿರಿಯ ವೆಂಕಟರಮಣ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದರು. ಬಳಿಕ ರಾಜಕೀಯ ಹಾಗೂ ಬದುಕಿಗೆ ಸಹಾಯ ಮಾಡಿದ ಬಳಿಕ ಅವರ ಗುರುಗಳಾದ , ನಾಗರಾಜ ರಾಯರ ಮನೆಗೆ ಭೇಟಿ ನೀಡಿ ಅವರ ಸಂಬಂಧಿಕರಿಂದ ಸನ್ಮಾನ ಪಡೆದರು.ಅಲ್ಲಿಂದ ತೀರ್ಥಹಳ್ಳಿಯ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್ ಗೆ ಆಗಮಿಸಿ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಲು ಆಗದ ಕಾರಣ ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು. ನಂತರ ತೀರ್ಥಹಳ್ಳಿಯ ಪ್ರೇರಣಕ್ಕೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೆಯಲ್ಲಿ ಭಾಗಿಯಾದರು. ನಂತರ ಅಲ್ಲಿಂದ ಆರ್ಎಸ್ಎಸ್ ನಾಯಕರಾದಂತಹ ತೀರ್ಥಹಳ್ಳಿಯ ಸಂಘದ ಸಂಚಾಲಕರಾದ ಭಾರತೀಪುರ ದಿನೇಶ್ ಭಟ್ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು. ಬಳಿಕ ಬೆಂಗಳೂರು ತೆರಳಿದ ಆರಗ ಜ್ಞಾನೇಂದ್ರ ಅವರು ಸೋಮವಾರ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಆ.15ಕ್ಕೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಚಿಕ್ಕಮಗಳೂರಿನಲ್ಲಿ ಸ್ವತಂತ್ರ್ಯ ದಿನದ ಧ್ವಜಾರೋಹಣ ನಡೆಸಲಿದ್ದಾರೆ. ಅಂದೇ ಸಂಜೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಾಗರೀಕ ಸನ್ಮಾನವನ್ನು ಅವರು ಸ್ವೀಕರಿಸಲಿದ್ದಾರೆ.
ಮನೆಯಲ್ಲಿ ಜನವೋ ಜನ..!
ಗೃಹಸಚಿವರಾಗಿ ಘೋಷಣೆ ಯಾಗುತ್ತಿದ್ದಂತೆ ಶನಿವಾರ ರಾತ್ರಿ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪಂಚಾಯತ್ ಸಭೆ ನಡೆಸಿ, ರಾತ್ರಿ ಎರಡು ಗಂಟೆಗೆ ಮನಗೆ ಬಂದ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಬೆಳಿಗ್ಗೆ ಆರು ಗಂಟೆಗೇ ಸಾವಿರಾರು ಜನ ಸೇರಿತ್ತು. ಪ್ರತಿ ದಿನ ನಡೆಸುತ್ತಿರುವ ಜನತಾ ದರ್ಶನದಲ್ಲಿ ಭಾಗಿಯಾಗಿ ಸುಮಾರು ಮೂರು ಸಾವಿರ ಜನರ ಅಭಿಮಾನವನ್ನು ಜೊತೆಗೆ ಸನ್ಮಾನವನ್ನು ಸ್ವೀಕರಿಸಿದರು. ಅನೇಕ ಸಂಘಟನೆಗಳು, ಸಂಘಸಂಸ್ಥೆಗಳ ನಾಯಕರು ಅವರಿಗೆ ಅಭಿನಂದನೆ ಸಲ್ಲಿಸಿದರು.
ನನ್ನ ಹೆಸರು ಹಾಳು ಮಾಡಬೇಡಿ!: ನಮ್ಮೂರ್ ಎಕ್ಸ್ಪ್ರೆಸ್ ಜತೆ ಮಾತನಾಡಿ, ಗೃಹ ಸಚಿವ ಸ್ಥಾನ ರಾಜ್ಯದ ಎರಡನೇ ಹುದ್ದೆ. ರಾಜ್ಯದ ಜವಾಬ್ದಾರಿ ಕಾರಣ ಕ್ಷೇತ್ರದ ಕಡೆ ಇರಲು ಸಾಧ್ಯವಾಗೋದು ಸಹಜ. ಎಲ್ಲಾ ನಾಯಕರು, ಕಾರ್ಯಕರ್ತರು ಜನರ ಕೆಲಸ ಮಾಡಬೇಕು. ಸರಕಾರಿ ಅಧಿಕಾರಿಗಳು, ನೌಕರರು ಅವರ ಕರ್ತವ್ಯ ಮೆರೆಯಬೇಕು. ನಾನು ಎಂದೂ ಕೆಟ್ಟ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರು, ಮುಖಂಡರು ಕೂಡ ಪಾಲಿಸಬೇಕು ಎಂದರು.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು