ಮಧ್ಯ ರಾತ್ರಿ ನಿದ್ದೆಕೆಡಿಸಿದ ಮಳೆ, ಗುಡುಗು!
– ಮಲೆನಾಡು ಭಾಗದಲ್ಲಿ ವಿಚಿತ್ರ ಮಳೆ, ಗುಡುಗು
– ಒಂದು ವಾರದಿಂದ ಕಾಣೆಯಾಗಿದ್ದ ಮಳೆ
– ತುಂಗಾ ಸೇರಿ ನದಿ, ಹಳ್ಳಗಳ ನೀರು ಮಾಯ!
NAMMUR EXPRESS NEWS
ಮಲೆನಾಡು: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಕೆಲವೆಡೆ ವಿಪರೀತ ಗಾಳಿಯೊಂದಿಗೆ ಮಳೆಯಾದರೆ, ಇನ್ನೂ ಕೆಲವೆಡೆ ಭಾರೀ ಗುಡುಗು ಸಮೇತ ಧಾರಾಕಾರವಾಗಿ ಮಳೆಯಾಗಿದೆ.
ಮಧ್ಯರಾತ್ರಿ ಗುಡುಗು ಸಿಡಿಲಿನ ಅಬ್ಬರಕ್ಕೆ ಜನ ಭಯಭೀತರಾಗಿದ್ದು ಹಲವೆಡೆ ಕಂಡು ಬಂದಿದೆ. ಮಳೆಯ ಸದ್ದಿಗೆ ರಾತ್ರಿ 2 ಗಂಟೆಗೆ ಎಚ್ಚೆತ್ತ ಜನ ಆತಂಕಗೊಂಡಿದ್ದರು.
ಒಂದು ವಾರದಿಂದ ಕಾಣೆಯಾಗಿದ್ದ ಮಳೆ!
ಮಲೆನಾಡು ಭಾಗದಲ್ಲಿ ಒಂದು ವಾರದಿಂದ ಮಳೆ ಮರೆಯಾಗಿ ಬಿಸಿಲು ಹೆಚ್ಚಾಗಿತ್ತು. ಆ ಕಾರಣ ಜನ ಜೀವನ ಸಹಜ ಸ್ಥಿತಿಗೆ ಬಂದಿತ್ತು. ಆದರೆ ಮಂಗಳವಾರ ರಾತ್ರಿ ಭಾರೀ ಗುಡುಗು ಮಳೆ ಅಚ್ಚರಿ ತಂದಿದೆ.
ನದಿ, ಹಳ್ಳಗಳ ನೀರು ಮಾಯ!
ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ತುಂಗಾ ನದಿ ಒಂದೇ ವಾರದಲ್ಲಿ ನೀರು ಸಂಪೂರ್ಣ ಬತ್ತಿದೆ. ತುಂಬಿ ಭೋರ್ಗರೆಯುತ್ತಿದ್ದ ತುಂಗಾ ನದಿ ನೀರು ಕಾಲು ಪ್ರಮಾಣಕ್ಕೆ ಇಳಿದಿದೆ. ಪ್ರಕೃತಿಯ ಈ ವಿಚಿತ್ರಗಳು ಜನರನ್ನು ಭಯಕ್ಕೆ ತಳ್ಳಿದೆ.