ಭಾರತೀಯ ಮಾನವ ಹಕ್ಕುಗಳ ಮಂಡಳಿಯ ರಾಜ್ಯ ಮುಖ್ಯ ಕಛೇರಿ ಉದ್ಘಾಟನೆ..
– ರಾಜ್ಯಾಧ್ಯಕ್ಷರು,ಉಪಾಧ್ಯಕ್ಷರಿಂದ ಉದ್ಘಾಟನೆ
– ರಾಜ್ಯದ ವಿವಿಧ ಜಿಲ್ಲೆ,ತಾಲೂಕಿನಿಂದ ಪದಾಧಿಕಾರಿಗಳ ಆಗಮನ
– ಶುಭಾಶಯ ತಿಳಿಸಿದ ಮಂಡಳಿಯ ಕೇಂದ್ರ ಅಧ್ಯಕ್ಷ
NAMMUR EXPRESS NEWS
ಸಾಗರ: ತಾಲೂಕಿನ ಹೊಸನಗರ ರಸ್ತೆಯ ಗಾಂಧೀನಗರದಲ್ಲಿ ಭಾರತೀಯ ಮಾನವ ಹಕ್ಕುಗಳ ಮಂಡಳಿಯ ಕರ್ನಾಟಕದ ಮುಖ್ಯ ರಾಜ್ಯ ಕಛೇರಿಯನ್ನು ಉದ್ಘಾಟಿಸಲಾಯಿತು.
ನೂತನ ಕಛೇರಿಯನ್ನು ರಾಜ್ಯಾಧ್ಯಕ್ಷರಾದ ಡಾ.ನಾರಾಯಣ ಈಳಿಗೇರ ಮತ್ತು ಉಪಾಧ್ಯಕ್ಷರಾದ ಜೆ.ಗಿರಿಧರ್ ಇವರುಗಳು ನಡೆಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಶೃಂಗೇರಿ,ಉಡುಪಿ,ಹಾವೇರಿ,ದಾವಣಗೆರೆ,ಬಾಗಲಕೋಟೆಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮಂಡಳಿಯ ಕೇಂದ್ರ ಅಧ್ಯಕ್ಷರು ನೂತನ ಕಛೇರಿಯ ಉದ್ಘಾಟನೆಗೆ ಶುಭಕೋರಿದರು. ಮಾನವ ಹಕ್ಕುಗಳ ರಕ್ಷಣೆ ಹಾಗೂ ಉಲ್ಲಂಘನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಡಳಿಯು ಇನ್ನೂ ಉತ್ತಮ ಕೆಲಸಗಳನ್ನು ಮಾಡುತ್ತದೆ. ಎಲ್ಲೆ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಧೈರ್ಯವಾಗಿ ಪ್ರಶ್ನಿಸಿ ನ್ಯಾಯ ದೊರಕಿಸುವ ಕೆಲಸ ಮಂಡಳಿಯ ಎಲ್ಲಾ ಸದಸ್ಯರು ಮಾಡಬೇಕು. ಉತ್ತಮ ಸಮಾಜ ನಿರ್ಮಾಣದ ದೃಷ್ಠಿಯಿಂದ ಕಾನೂನಿನಡಿಯಲ್ಲಿ ಮಂಡಳಿಯು ಕಾರ್ಯನಿರ್ವಹಿಸಲಿದೆ ಎಂದು ಮಂಡಳಿಯ ರಾಜ್ಯಾಧ್ಯಕ್ಷರಾದ ಡಾ.ನಾರಯಣ ಈಳಿಗೇರ ಹಾಗೂ ರಾಜ್ಯ ಉಪಾಧ್ಯಕ್ಷರಾದ ಜೆ.ಗಿರಿಧರ್ರವರು ತಿಳಿಸಿದರು.