- ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವು
- ಜನರಿಗೆ ಧೈರ್ಯ ತುಂಬಿದ್ದ ಶ್ರೀಗಳು ಇನ್ನಿಲ್ಲ
- ಮಠದಲ್ಲೇ ಅಂತಿಮ ಸಂಸ್ಕಾರ ಸಾಧ್ಯತೆ?
NAMMUR EXPRESS
ತೀರ್ಥಹಳ್ಳಿ: ಭುವನಗಿರಿ ಸಂಸ್ಥಾನ ಕವಲೆದುರ್ಗದ ಡಾ. ಶ್ರೀ ಸಿದ್ದಗಂಗಾ ಶಿವಾಚಾರ್ಯ ಸ್ವಾಮೀಜಿ ಕರೋನಾಕ್ಕೆ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಶೀತ ಸುಸ್ತು ಕಾರಣ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಬಳಿಕ ಅವರಿಗೆ ಪಾಸಿಟಿವ್ ದೃಢವಾಗಿತ್ತು. ಅವರ ಶ್ವಾಸಕೋಶ ಸಂಪೂರ್ಣ ಹಾನಿಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆ 2 ದಿನಗಳ ಹಿಂದೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದ ಹಿಂದೆ ಹಳ್ಳಿಗೆ ಹೋಗಿದ್ದೆ ಎಂದು ಮಾಹಿತಿ ನೀಡಿರುವ ಶ್ರೀಗಳು ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ, ಸಿಬ್ಬಂದಿಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಶ್ರೀಗಳು!: ಕರೋನಾ ಸೋಂಕು ಬಂದ ತಕ್ಷಣ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿ ತಮ್ಮ ಜತೆ ಇದ್ದ ಓರ್ವ ಶಿಷ್ಯನ ಮನೆ ಸೀಲ್ ಡೌನ್ ಮಾಡಿದ್ದು, ಅವರ ಕುಟುಂಬಕ್ಕೆ ಶ್ರೀಗಳು 15 ಸಾವಿರ ಧನ ಸಹಾಯ ಕಳುಹಿಸಿಕೊಟ್ಟು ಮಾದರಿಯಾಗಿದ್ದರು. ಆದ್ರೆ ಇದೀಗ ಅವರೇ ಇಹಲೋಕ ತ್ಯಜಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಠದ ಮತ್ತು ಕರೋನಾ ನಿಯಮದಂತೆ ನಡೆಯಲಿದೆ ಎನ್ನಲಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.