- ಜೂ.21ರವರೆಗೆ ಲಾಕ್ ಡೌನ್
- ಕೈಗಾರಿಕೆ, ಕೃಷಿಗೆ ಅನುಮತಿ
NAMMUR EXPRESS
ಬೆಂಗಳೂರು: ಮೈಸೂರು, ಬೆಳಗಾವಿ, ಶಿವಮೊಗ್ಗ, ವಿಜಯಪುರ, ಹಾಸನ, ಮಂಡ್ಯ, ದ.ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಜೂನ್ 21 ವರೆಗೆ ಲಾಕ್ ಡೌನ್ ಮುಂದುವರಿಕೆ ಮಾಡಲಾಗಿದೆ. ಅನೇಕ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದೆ.
ಕರೋನಾ ಸೋಂಕು ಶೇಕಡಾವಾರು 5 ಬರುವವರೆಗೂ ಈ ಜಿಲ್ಲೆಗಳು ಲಾಕ್ ಆಗಲಿದೆ. ಅಗತ್ಯ ವಸ್ತುಗಳು ಹಾಗೂ ವ್ಯಾಪಾರಸ್ತರಿಗೆ, ಕಟ್ಟಡ ನಿರ್ಮಾಣ ಕಾರ್ಯ ಚಟುವಟಿಕೆಗಳನ್ನು ನಡೆಸಲು ಮತ್ತು ಹೆಚ್ಚಿನ ಸಮಯ ನೀಡುವ ವಿನಾಯಿತಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಉಸ್ತುವಾರಿ ಸಚಿವರಿಗೆ ಅಧಿಕಾರ ನೀಡಲಾಗಿದೆ.
22 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮತ್ತು ರಾತ್ರಿ ನಿಷೇಧಾಜ್ಞೆ ಜಾರಿಯಾಗುವ ಸಾಧ್ಯತೆ ಇದೆ. ಜನರ ಓಡಾಟದ ಮೇಲೆ ನಿಗಾ ಮಾಡಲಾಗುತ್ತದೆ. ಆಯಾ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಗಳ ಹೊಣೆ ನೀಡಲಾಗಿದೆ.