ಮಲೆನಾಡಲ್ಲಿ ಈಗ ಮದ್ರಾಸ್ ಐ ಕಾಟ!
– ಮಲೆನಾಡಿನಲ್ಲಿ ಕಣ್ಣು ರೋಗ ರೋಗ ಹೆಚ್ಚಳ: ಅರೋಗ್ಯ ಇಲಾಖೆ ಹುಷಾರ್
– ಕಣ್ಣು ಕೆಂಪಾಗುವ ಈ ರೋಗ ನಿರ್ಲಕ್ಷ್ಯ ಮಾಡದಿರಿ
NAMMUR EXPRESS NEWS
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಮದ್ರಾಸ್ ಐ ಕಾಟ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಈ ರೋಗ ಬಾಧೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮದ್ರಾಸ್ ಐ, ಕೋಳಿ ಕಣ್ಣು, ಕಣ್ಣು ಕುಟ್ಲೆ ಹೀಗೆ ಹಲವು ಹೆಸರಿನಿಂದ ಕರೆಯುವ ಈ ಕಣ್ಣು ಕಾಯಲೆ ಈಗ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ನಡುವೆ ಮದ್ರಾಸ್ ಐನ ಆತಂಕ ಹೆಚ್ಚಾಗುತ್ತಿದೆ. ಸಾಗರ, ತೀರ್ಥಹಳ್ಳಿ , ಹೊಸನಗರ ಸೇರಿದಂತೆ ಶಿವಮೊಗ್ಗ ನಗರದಲ್ಲಿ ಮದ್ರಾಸ್ ಐ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಸೋಂಕು ತಗುಲಿದ ವ್ಯಕ್ತಿಗೆ ಐದು ದಿನ ಸಮಸ್ಯೆ ಮಾಡುತ್ತಿದೆ. ಹಲವು ಕಡೆ ಶಾಲೆಗಳಲ್ಲಿ ಮದ್ರಾಸ್ ಐ ಆತಂಕದಿಂದ ರಜೆ ನೀಡಲಾಗುತ್ತಿದೆ. ಮತ್ತು ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ತಿರುವುದು ಪೋಷಕರ ತಲೆಬಿಸಿಗೆ ಕಾರಣವಾಗಿದೆ.
ಏನಿದು ಮದ್ರಾಸ್ ಐ?
ಮಳೆಗಾಲದ ಸಂದರ್ಭದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಕಣ್ಣಿಗೆ ಸಂಬಂಧಿಸಿದ ಸೋಂಕನ್ನು ಮದ್ರಾಸ್ ಐ ಎನ್ನಲಾಗುತ್ತದೆ. ವೈದ್ಯರು ಹೇಳುವ ಪ್ರಕಾರ ಕಣ್ಣುಗಳನ್ನು ಹೆಚ್ಚು ಸಲ ಮುಟ್ಟಿಕೊಳ್ಳುವುದರಿಂದ ಮಕ್ಕಳಲ್ಲಿ ಈ ಸೋಂಕು ಬೇಗ ಕಾಣಿಸಿಕೊಳ್ಳುತ್ತದೆ ಮತ್ತು ವಾತಾವರಣ ತಂಪಾಗಿದ್ದಷ್ಟು ಈ ಸೋಂಕು ಬೇಗ ಹರಡುತ್ತದೆಯಂತೆ. ಹಾಗಂತ ಮದ್ರಾಸ್ ಐನಿಂದ ತುಂಬಾ ಸಮಸ್ಯೆಗಳು ಆಗುವುದಿಲ್ಲ. ಹೆಚ್ಚೆಂದರೆ ಚೂರು ನೋವು ಕೊಟ್ಟು, ನಾಲ್ಕೈದು ದಿನ ರೆಸ್ಟ್ ಕೊಡುತ್ತದೆ. ಎಕೆಂದರೆ ಕಣ್ಣಾಗಿದೆ ಎಂದರೆ, ಹತ್ತಿರವೂ ಬಿಟ್ಟುಕೊಳ್ಳುವುದೇ ಮನೆಯಲ್ಲಿ ಇರಿ ಎಂದು ತಾಕೀತು ಮಾಡುವವರೇ ಹೆಚ್ಚು. ಸಾಮಾನ್ಯವಾಗಿ ಈ ಸೋಂಕು ತಗುಲಿದ್ದಲ್ಲಿ ಸಣ್ಣಗೆ ಜ್ವರ ಬಂದು , ಕಣ್ಣಿನಲ್ಲಿ ಪಿಸುರು ಬರಲು ಆರಂಭವಾಗುತ್ತದೆ , ನಿಧಾನವಾಗಿ ಕಣ್ಣು ಕೆಂಪಾಗುತ್ತದೆ. ಶೀತ, ಜ್ವರ ಕೆಮ್ಮಿನೊಂದಿಗೆ ನಾಲ್ಕೈದು ದಿನಗಳಲ್ಲಿ ಬಾವು ಕಡಿಮೆಯಾಗುತ್ತದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023