- ಶಿವಮೊಗ್ಗ 857 ಕೇಸ್, 17 ಮಂದಿ ಬಲಿ
- ಚಿಕ್ಕಮಗಳೂರು 582 ಕೇಸ್, 2 ಸಾವು
- ಉಡುಪಿ ಜಿಲ್ಲೆಯಲ್ಲೂ ಕರೋನಾ ಕಾಟ!
ಮಲೆನಾಡು/ಕರಾವಳಿ: ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ 857 ಪ್ರಕರಣ ದಾಖಲಾಗಿದೆ. 17 ಮಂದಿ ಸಾವನ್ನು ಕಂಡಿದ್ದಾರೆ. ಇದರಿಂದಾಗಿ 495 ಸಾವು ಕಂಡಂತಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 4592 ಸಕ್ರಿಯ ಪ್ರಕರಣ ಇದೆ. ಈ ಪೈಕಿ ಶಿವಮೊಗ್ಗ 256, ಭದ್ರಾವತಿ 34, ಶಿಕಾರಿಪುರ 43, ತೀರ್ಥಹಳ್ಳಿ 129, ಸೊರಬ 62, ಹೊಸನಗರ 111, ಸಾಗರ 192 ಪ್ರಕರಣ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕಾಫಿ ನಾಡಲ್ಲಿ ಅಬ್ಬರ!: ಚಿಕ್ಕಮಗಳೂರಲ್ಲಿ 582 ಪ್ರಕರಣ ವರದಿಯಾಗಿದೆ. ಒಟ್ಟು 4629 ಸಕ್ರಿಯ ಪ್ರಕರಣ ಇವೆ.
ಚಿಕ್ಕಮಗಳೂರು 195, ಕಡೂರು 139, ತರೀಕೆರೆ 130, ಮೂಡಿಗೆರೆ 73, ಎನ್. ಆರ್. ಪುರ 9, ಕೊಪ್ಪ 8, ಶೃಂಗೇರಿ 28 ಪ್ರಕರಣ ದಾಖಲಾಗಿದೆ. 2 ಸಾವು ಸಂಭವಿಸಿದೆ.
ಎನ್. ಆರ್. ಪುರದ ತಾಲೂಕಿನ ಸತ್ಯನಾರಾಯಣ ಎಂಬುವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಸಾವನ್ನು ಕಂಡಿದ್ದಾರೆ.
ಕರಾವಳಿಗೂ ಕರೋನಾ ಕಾಟ!: ಉಡುಪಿ ಜಿಲ್ಲೆಯಲ್ಲಿ ಭಾನುವಾರ 962 ಮಂದಿಗೆ ಕೆರೊನಾ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿಯ 58 ವರ್ಷದ ಇಬ್ಬರು ಪುರುಷರು, ಕುಂದಾಪುರದ 66 ವರ್ಷದ ಪುರುಷ, ಉಡುಪಿಯ 63 ವರ್ಷದ ಪುರುಷ, ಕುಂದಾಪುರದ 67 ವರ್ಷದ ಮಹಿಳೆ ಸಾವನ್ನಪ್ಪಿದ್ದಾ
ಸೋಂಕು ತಗಲಿದವರಲ್ಲಿ 19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 943 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. ಭಾನುವಾರ ವಾರ 2550 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಯಿತು. 543 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6,372 ಪ್ರಕರಣಗಳು ಸಕ್ರಿಯವಾಗಿವೆ.
ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ಎಲ್ಲರಿಗೂ ಶೇರ್ ಮಾಡಿ..!.