- ಒಂದೇ ಕುಟುಂಬದ ಮೂವರ ಕೊರೋನಾ ಸಾವು!
- ಮೆಗ್ಗಾನ್ ನಲ್ಲಿ ಮುಗಿಲು ಮುಟ್ಟಿದ ನೋವಿನ ದನಿ
- ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಳ: ಜನತೆಗೆ ಆತಂಕ
ಶಿವಮೊಗ್ಗ: ದಿನೇ ದಿನೇ ಶಿವಮೊಗ್ಗದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ದಿನ ಹತ್ತಾರು ಮಂದಿ ಸಾಯುತ್ತಿದ್ದಾರೆ. ಇದೀಗ ಒಂದೇ ಕುಟುಂಬದ ಮೂವರು ಸದಸ್ಯರು ಕೊರೋನಾ ಸೋಂಕಿಗೆ ಬಲಿಯಾದ ಹಿನ್ನಲೆಯಲ್ಲಿ ಈಗಲೇ ಶವಗಳನ್ನ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸಾವಿಗೆ ಕುಟಬಸ್ಥರು ಆಕ್ರೋಶ ಹೊರಹಾಕಿದ್ದಾರೆ .
60 ವರ್ಷದ ತಾಯಿ, 40 ವರ್ಷದ ಮಗ ಹಾಗೂ 35 ವರ್ಷದ ಮಗಳು ಸಾವು ಕಂಡಿದ್ದು ತಕ್ಷಣವೇ ಮೃತದೇಹವನ್ನ ಕುಟುಂಬಸ್ಥರಿಗೆ ನೀಡುವಂತೆ ಆಗ್ರಹಿಸಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನ ಸಾವು ಕಂಡಿದ್ದಾರೆ. ಮೃತರು ಶಿವಮೊಗ್ಗದ ಕುಂಬಾರಬೀದಿ ನಿವಾಸಿಗಳಾಗಿದ್ದು , ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ತಾಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದ ಕಾರಣ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಆದರೆ ಅಲ್ಲಿ ಸಾವಿನ ಸಂಖ್ಯೆ ಹೆಚ್ಚಾಗತೊಡಗಿದೆ.
ಶಾಸಕರು, ಸಂಸದರು ಎಲ್ಲಾ ವ್ಯವಸ್ಥೆ ಇದೆ ಎಂದು ಹೇಳುತ್ತಿರುವುದು ಸುಳ್ಳೋ ನಿಜವೋ ಜನತೆಗೆ ತಿಳಿಯದಾಗಿದೆ.
ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ತಾಲೂಕಿನ ಎಲ್ಲರಿಗೂ ಶೇರ್ ಮಾಡಿ..!.