- ತೀರ್ಥಹಳ್ಳಿಯಲ್ಲಿ ಸಂಸದ ರಾಘವೇಂದ್ರ ಚಾಲನೆ
- ಶಾಸಕ ಜ್ಞಾನೇಂದ್ರ ನೇತೃತ್ವದಲ್ಲಿ ವಿಶೇಷ ಯೋಜನೆ
- ಬಡವರಿಗೆ, ಕಾರ್ಮಿಕರಿಗೆ ಸಹಾಯ ಹಸ್ತ..!
- ಮೋದಿ ಇಲ್ಲದಿದ್ದರೆ ದೇಶ ಕಷ್ಟಕ್ಕೆ ಹೋಗುತ್ತಿತ್ತು!
- ಕರೋನಾ ಸೇವಕ ಪತ್ರಕರ್ತರಿಗೂ ವಿಶೇಷ ಕಿಟ್
NAMMUR EXPRESS
ತೀರ್ಥಹಳ್ಳಿ: ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಹಮಾಲಿಗಳು, ಬಡ ಕಾರ್ಮಿಕರು, ಕ್ಷೇತ್ರದ ಬಡವರು ಸೇರಿದಂತೆ ಹಲವರಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಣೆ ನಿರಂತರವಾಗಿ ಸಾಗಿದೆ. ಈ ನಡುವೆ ಗುರುವಾರ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಸುಮಾರು 6000 ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿ ಚಾಲನೆ ನೀಡಿದರು.
ಪ್ರೇರಣಾ ಟ್ರಸ್ಟ್, ಸೇವಾ ಭಾರತಿ ಮತ್ತು ಪರಿವಾರ ಸಂಘಟನೆಗಳ ನೂರಾರು ಕಾರ್ಯಕರ್ತರು ಈ ಕಿಟ್ ಸಿದ್ದಪಡಿಸಿದ್ದಾರೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸೇವಾ ಭಾರತಿ, ಪ್ರೇರಣಾ ಟ್ರಸ್ಟ್, ಪರಿವಾರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಶ್ರಮಿಕ ವರ್ಗದವರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ರಾಘವೇಂದ್ರ ಅವರು,ಪ್ರಧಾನಿ ಮೋದಿ ಅವರು ಇಂತಹ ಸ್ಥಿತಿಯಲ್ಲಿ ಇಲ್ಲದಿದ್ದರೆ ಈ ದೇಶದ ಸ್ಥಿತಿ ಕಷ್ಟ ಇತ್ತು. ವಿಶ್ವದಲ್ಲೇ ಅತೀ ಹೆಚ್ಚು ಜನರಿಗೆ ಲಸಿಕೆ ಕೊಟ್ಟ ದೇಶ ನಮ್ಮದು ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಕರೋನಾ ನಡುವೆಯೂ ಕೇಂದ್ರ ಸರಕಾರ 5000 ಕೋಟಿ ಬಿಡುಗಡೆ ಮಾಡಿದೆ. 350 ಕೋಟಿ ಆಗುಂಬೆ ರಸ್ತೆ ಮಂಜೂರಾಗಿದ್ದು, ಘಾಟಿಯಲ್ಲಿ ಯೋಜನೆ ಬಳಿಕ ಹೆವಿ ವಾಹನಕೂಡ ಓಡಾಡಬಹುದು. ಎಲ್ಲಾ ಸೇರಿ ಕರೋನಾ ವಿರುದ್ಧ ಹೋರಾಟ ಮಾಡೋಣ ಎಂದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಪ್ರತಿಯೊಬ್ಬರೂ ಕಷ್ಟದಲ್ಲಿದ್ದಾರೆ. ಬಹುತೇಕರ ಬದುಕನ್ನು ಕರೋನಾ ಬೀದಿಗೆ ಹಾಕಿದೆ. ಆಟೋ ಚಾಲಕರು, ಬಡವರು, ಕಾರ್ಮಿಕರಿಗೆ ಅನ್ನ ಇಲ್ಲ ಎನ್ನಬಾರದು. ಹೀಗಾಗಿ ಕಿಟ್ ವಿತರಣೆ ಮಾಡಿದ್ದೇವೆ. ತಾಲೂಕಿನ ಜನತೆಗೆ 3 ಲಾರಿ ಲೋಡ್ ದಿನಸಿ ತಂದಿದ್ದೇವೆ. ನಮ್ಮ ಸಹೋದರಿಯರು, ಯುವಕರು ಪ್ಯಾಕ್ ಮಾಡಿದ್ದಾರೆ. ಎಲ್ಲಾ ಸೇರಿ ಈ ಸಮಾಜದ ರಕ್ಷಣೆಗೆ ಮುಂದಾಗಬೇಕಿದೆ.
ಲಸಿಕೆ ಬಗ್ಗೆ ಅಪಪ್ರಚಾರ ಆಯಿತು. ಇದು ಮೋದಿ ವಾಕ್ಸಿನ್. ಲಸಿಕೆ ತಗೊಂಡ್ರೆ ಮಕ್ಕಳು ಆಗುವುದಿಲ್ಲ ಎಂದು ಹೇಳಿದಕ್ಕೆ ಜನ ಹೆದರಿದರು ಎಂದು ಆರೋಪಿಸಿದರು.
ಬಿಜೆಪಿ ನಾಯಕರಾದ ಭಾನುಪ್ರಕಾಶ್ ಮಾತನಾಡಿ, ದೇಶಕ್ಕೆ ಪ್ರಧಾನಿ ಮೋದಿ ಅವರು ಏಕೈಕ ಆಶಾಕಿರಣ. ಎಲ್ಲರೂ ಸೇರಿ ಕರೋನಾ ಓಡಿಸಬೇಕು. ಎಲ್ಲರಿಗೂ ಧೈರ್ಯ ತುಂಬಬೇಕು. ಬಿಜೆಪಿ ಕರೋನಾ ಸೇವೆಯಲ್ಲಿ ಓಟಿನ ಬೇಟೆ ಮಾಡುತ್ತಿಲ್ಲ ಎಂದರು.
ಶಿವಮೊಗ್ಗ ಜಿಲ್ಲಾಧ್ಯಕ್ಷ ಮೇಘರಾಜ್, ತೀರ್ಥಹಳ್ಳಿಯ ನಾಯಕರಾದ ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ,ಗೀತಾ ಶೆಟ್ಟಿ, ಸಿ.ಬಿ.ಈಶ್ವರ್, ನಾಗರಾಜ ಶೆಟ್ಟಿ, ಸಾಲೆಕೊಪ್ಪ ರಾಮಚಂದ್ರ, ಕಾಸರವಳ್ಳಿ ಶ್ರೀನಿವಾಸ್, ಯಶೋಧ ಮಂಜುನಾಥ, ಸಂದೇಶ್ ಜವಳಿ, ಕುಕ್ಕೆ ಪ್ರಶಾಂತ್, ಹೆದ್ದೂರು ನವೀನ್, ಚಂದವಳ್ಳಿ ಸೋಮಶೇಖರ್ ಸೇರಿದಂತೆ ಹಲವರಿದ್ದರು.
ಮಧ್ಯೆ ಕೈಕೊಟ್ಟ ವಿದ್ಯುತ್: ಕಾರ್ಯಕ್ರಮ ನಡೆಯುತ್ತಿರುವಾಗ ಪದೇ ಪದೇ ಕೈಕೊಟ್ಟ ಕಾರಣ ಸಭೆ ಗಲಿಬಿಲಿಗೆ ಕಾರಣವಾಯಿತು.
ಪತ್ರಕರ್ತರಿಗೂ ವಿಶೇಷ ಕಿಟ್!: ಕರೋನಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತೀರ್ಥಹಳ್ಳಿಯ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ದೃಷ್ಟಿಯಿಂದ ಮಾಸ್ಕ್, ಸ್ಟೀಮರ್, ಸ್ಯಾನಿಟೈಸರ್ ಸೇರಿದಂತೆ ಆಹಾರದ ಕಿಟ್ಗಳನ್ನು ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ವಿತರಿಸಿದರು.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.