- ಇಬ್ಬರ ಬಂಧನ, 7 ಜಾನುವಾರು ರಕ್ಷಣೆ
- ಮಲೆನಾಡಿನಲ್ಲಿ ಗೋ ಕಳ್ಳ ಸಾಗಣೆ ಅವ್ಯಾಹತ
- ಗೋ ಕಳ್ಳರ ಸ್ವರ್ಗವಾಗುತ್ತಿದೆ ಮಲೆನಾಡು
NAMMUR EXPRESS
ಮೂಡಿಗೆರೆ: ಮಲೆನಾಡು ಭಾಗದಲ್ಲಿ ಗೋವುಗಳನ್ನು ಕದ್ದೊಯ್ಯುವುದು, ಗೋಮಾಂಸ ಸಾಗಣೆ ಅವ್ಯಾಹತವಾಗಿ ಸಾಗುತ್ತಿದ್ದು, ಗೋ ಕಳ್ಳರ ಆಟಾಟೋಪ ಮಿತಿಮೀರುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಕೋಳೂರು ಗ್ರಾಮದ ರಸ್ತೆಯ ಬದಿ ಮಲಗಿರುವ ಜಾನುವಾರುಗಳನ್ನು ವಾಹನಕ್ಕೆ ತುಂಬಿಸುತ್ತಿದ್ದ ಗೋ ಕಳ್ಳರನ್ನು ಬಣಕಲ್ ಪೊಲೀಸರು ಬಂಧಿಸಿದ್ದು, 7 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಬಣಕಲ್ ಹೋಬಳಿಯ ಕೋಳೂರು ಗ್ರಾಮದ ರಸ್ತೆಯ ಬದಿ ಮಲಗಿರುವ ಜಾನುವಾರುಗಳನ್ನು ಇಬ್ಬರು ಅಪರಿಚಿತರು ವಾಹನಕ್ಕೆ ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ನೇತೃತ್ವದ ತಂಡ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ವಾಹನ ಸಮೇತ ಬಂಧಿಸಿದ್ದಾರೆ. ಆರೋಪಿಗಳಾದ ಬೇಲೂರು ತಾಲೂಕಿನ ತೊಳಲು ಗ್ರಾಮದ ಅಹಮದ್ ಹನೀಫ್, ಮತ್ತೊಬ್ಬ ಆರೋಪಿ ಬೇಲೂರಿನ ಹೊಸನಗರ ದೇವರಾಜ್, ಗೋವುಗಳನ್ನು ಕದ್ದು ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲೆನಾಡು ಭಾಗದಲ್ಲಿ ದನ ಸಾಗಣೆ, ಕಳ್ಳತನ ಹಾಗೂ ದನದ ಮಾಂಸ ಮಾರಾಟ ದಂಧೆಗಳು ವ್ಯಾಪಕ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಮಿತಿಮೀರುತ್ತಿರುವ ದನಗಳ್ಳರ ಹಾವಳಿಗೆ ಕಡಿವಾಣ ಹಾಕಲೇಬೇಕೆಂದು ಗೋ ಪ್ರಿಯರು ಎಷ್ಟೇ ಒತ್ತಾಯಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.