- ಬಯೋಮೆಟ್ರಿಕ್ ವ್ಯವಸ್ಥೆಯಿಂದ ಜನರ ಸಾಲು
- 2 ತಿಂಗಳು ನಂಬರ್ ನಮೂದಿಸಿ ರೇಷನ್ ಕೊಡಿ
- ಸರಕಾರದ ಎಡವಟ್ಟು: ಜನತೆಗೆ ಇಕ್ಕಟ್ಟು..!
ಶಿವಮೊಗ್ಗ: ಪಡಿತರ ಅಂಗಡಿಯಲ್ಲಿ ರೇಷನ್ ಪಡೆಯಲು ನೂರಾರು ಜನ ಒಟ್ಟಿಗೆ ಸೇರುವುದರಿಂದ ಕರೋನಾ ಹರಡುವ ಸಾಧ್ಯತೆಗಳು ಹೆಚ್ಚಿದ್ದು ಇದಕ್ಕೆ ಸರಕಾರದ ಬಯೋಮೆಟ್ರಿಕ್ ಕಾನೂನು ಕಾರಣವಾಗಿದೆ.
ಬಯೋಮೆಟ್ರಿಕ್ ಬೆರಳಚ್ಚು ಕೊಡಲು ನೂರಾರು ಜನ ನ್ಯಾಯ ಬೆಲೆ ಅಂಗಡಿಗಳ ಮುಂದೆ ಕಾದು ನಿಂತಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ಇದರಿಂದ ಹಲವೆಡೆ ಕರೋನಾ ಹೆಚ್ಚಿದೆ. ಮೊದಲೇ ಹಳ್ಳಿಗಳಲ್ಲಿ ಕರೋನಾ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದು, ಇದು ಮತ್ತಷ್ಟು ಹರಡಲು ಕಾರಣವಾಗಿದೆ.
ಸರಕಾರ ಪ್ರತಿಯೊಬ್ಬ ಬಿಪಿಲ್ ವ್ಯಕ್ತಿಯ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ಹೆಚ್ಚುವರಿ ನೀಡಲು ನಿರ್ಧಾರ ಮಾಡಿದೆ. ಈ ನಡುವೆ ಬಯೋ ಮೆಟ್ರಿಕ್ ವ್ಯವಸ್ಥೆಯಿಂದ ಜನ ಕೂಡ ಪರದಾಟ ನಡೆಸುವಂತಾಗಿದೆ.
ಕಾರಣ ಏನು..?: ಹಳ್ಳಿಗಳಲ್ಲಿ ಟವರ್, ನೆಟ್ವರ್ಕ್, ವಿದ್ಯುತ್ ಸಮಸ್ಯೆ ಇದೆ. ಇನ್ನೊಂದೆಡೆ ಸರಕಾರದ ಆಹಾರ ಇಲಾಖೆ ಸರ್ವರ್ ಕೂಡ ಸರಿ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ಸರಕಾರ ಸರಳವಾಗಿ ಬಗೆಹರಿಸಬೇಕಾದ ಸಮಸ್ಯೆಯನ್ನು ಮತ್ತಷ್ಟು ಕಠಿಣ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಸರ್ಕಾರ, ಅಧಿಕಾರಿಗಳು, ಜನ ನಾಯಕರು ಕ್ರಮ ತೆಗೆದುಕೊಳ್ಳಬೇಕಿದೆ. ಈ ಸುದ್ದಿ ಎಲ್ಲಾ ನಾಯಕರಿಗೂ ಶೇರ್ ಮಾಡಿರಿ.