ಟಾಪ್ ನ್ಯೂಸ್ ಮಲ್ನಾಡ್
ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಪ್ಲಾನ್!
– ಪೊಲೀಸರಿಂದ ತನಿಖೆ ಶುರು: ಏನಿದು ಕೇಸ್?
– ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಭೂ ಕುಸಿತ
– ಎನ್.ಆರ್.ಪುರ: ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ
NAMMUR
ಭದ್ರಾವತಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದ ಕುರಿತು ಆರೋಪವಿದೆ. ಶಾಸಕನ ಪುತ್ರ ಬಸವರಾಜ್ ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದ ಕುರಿತು ಆರೋಪವಿದೆ.
ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ನೀಡಿದ್ದ. ಭದ್ರಾವತಿ ಗಾಂಧಿ ಸರಲ್ ಬಳಿ ಬಸವರಾಜ್ ಅವರನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಮುಬಾರಕ್ ಕಳುಹಿಸಿದ್ದ. ಸುಫಾರಿ ಪಡೆದಿದ್ದ ಟಿಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಗುತ್ತಿಗೆದಾರ ಸುನಿಲ್ ಎಂಬವರು ದೂರು ನೀಡಿದ್ದಾರೆ. ಟಿಪ್ಪುವನ್ನು ಗುತ್ತಿಗೆದಾರ ಸುನಿಲ್ ಭೇಟಿಯಾದಾಗ ಆತನಿಗೆ ಕೂಡ ಡಿಚ್ಚಿ ಮುಬಾರಕ್ ಕರೆ ಮಾಡಿದ್ದಾನೆ. ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಮುಬಾರಕ್ ಹೇಳಿದ್ದಾನೆ. ಭದ್ರಾವತಿ ಹಳೆನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಭೂ ಕುಸಿತ!
ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಘಾಟಿಯಲ್ಲಿ ಮತ್ತೆ ಭೂ ಕುಸಿತವಾಗಿದೆ. ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಗುಡ್ಡ ಮತ್ತು ಬಂಡೆಗಳು ಕುಸಿದಿವೆ. ಮಳೆ ನೀರಿನ ಜೊತೆಗೆ ರಸ್ತೆಗೆ ಕಲ್ಲುಗಳು ತೇಲಿಕೊಂಡು ಬಂದಿವೆ.
ಚಾರ್ಮಾಡಿ ಘಾಟಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನ ಸಂಚಾರ ಎಂದಿನಂತೆ ಇದ್ದು, ಯಾವುದೇ ತೊಂದರೆಗಳಾಗಿಲ್ಲ. ಕಳೆದ ಎರಡು ದಿನಗಳಿಂದ ಘಾಟಿಯಲ್ಲಿ ಭಾರೀ ಮಳೆಯಾಗಿದೆ. ರಸ್ತೆಯಲ್ಲೂ ನೀರು ಹರಿಯುತ್ತಿದೆ. ಶಿರಾಡಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿರುವುದರಿಂದ, ಬೆಂಗಳೂರಿಗೆ ಹೋಗುವವರು ಈಗ ಹೆಚ್ಚಾಗಿ ಚಾರ್ಮಾಡಿ ಘಾಟಿಯನ್ನೇ ಅವಲ೦ಬಿಸಿದ್ದಾರೆ. ಅಲ್ಲದೆ, ಚಿಕ್ಕಮಗಳೂರು- ಮಂಗಳೂರು ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆ ಇದಾಗಿದೆ. ಹೀಗಾಗಿ ಇಲ್ಲಿ ವಾಹನ ದಟ್ಟಣೆ ಈಗ ಹೆಚ್ಚಾಗಿದೆ.
ಎನ್.ಆರ್.ಪುರ: ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ
ಎನ್.ಆರ್.ಪುರ: ಸಾಲಭಾದೆಯಿಂದ ಬಸ್ ನಿಲ್ದಾಣದಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್. ಆರ್. ಪುರ ತಾಲೂಕಿನ ಮೆಣಸೂರು ಬಳಿ ನಡೆದಿದೆ. ತಿಮ್ಮಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸ್ವ ಸಹಾಯ ಸಂಘದಲ್ಲಿ 5 ಲಕ್ಷ ಸಾಲ ಮಾಡಿದ್ದು, ಸರಿಯಾಗಿ ಬೆಳೆ ಬಾರದ ಹಿನ್ನೆಲೆ ಮನನೊಂದು ಮೆಣಸೂರು ಬಳಿಯ ಬಸ್ ನಿಲ್ದಾಣದಲ್ಲಿನ ಪಕಾಸಿಗೆ ನೇಣು ಬಿಗಿದುಕೊಂಡು ತ್ಮಹತ್ಯೆ ಮಾಡಿಕೊಂಡಿದ್ದಾರೆ.