ಅಡಕೆ ಅಕ್ರಮ ಆಮದು ನಿಲ್ಲುತ್ತಾ? ದರ ಏರುತ್ತಾ..?
– ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆಪಟ್ಟು
– ಕರಾವಳಿ ಹಾಗೂ ಮಲೆನಾಡು ಸಂಸದರ ಮನವಿ
– ಬಿಜೆಪಿ ಎಂಪಿಗಳ ನಿಯೋಗದಿಂದ ಕೇಂದ್ರ ಕೃಷಿ ಸಚಿವರಿಗೆ ಮನವಿ
NAMMUR EXPRESS NEWS
ಶಿವಮೊಗ್ಗ/ ಮಂಗಳೂರು: ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವಂತೆ ಕರಾವಳಿ ಹಾಗೂ ಮಲೆನಾಡು ಸಂಸದರು ಹಾಗೂ ಅಡಕೆ ಬೆಳೆಗಾರ ಸಂಘಟನೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ ಸಿಗಲಿದೆಯಾಎಂಬ ಕುತೂಹಲ ಮೂಡಿದೆ. ಕೃಷಿ ಭವನದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ ಚೌಟ ಹಾಗೂ ಕೋಟ ಪೂಜಾರಿ ಮುಂದಾಳತ್ವದಲ್ಲಿ ರೈತ ಪ್ರತಿನಿಧಿಗಳಾದ ಸಾಗರದ ಎಚ್.ಎಸ್.ಮಂಜಪ್ಪ ಸೊರಬ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜ್ಸಿಂಗ್ ಚೌವ್ಹಾಣ ಅವರನ್ನು ಭೇಟಿ ಮಾಡಿ ಆಮದು ಕಾರಣ ಆಗುವ ಸಮಸ್ಯೆಗಳ ಬಗ್ಗೆ ಅನಾವರಣ ಮಾಡಿಕೊಟ್ಟರು. ನಿಯೋಗದಲ್ಲಿ ಯು.ಟಿ.ರಾಮಪ್ಪ, ಅನಿಲ ಒಡೆಯರ್, ಮಲ್ಲಿಕಾರ್ಜುನ ಸಾಗರ, ಟಿಎಸ್ಎಸ್ ನರಸಿಂಹ ಹೆಗಡೆ, ನಿರ್ದೇಶಕ ಪ್ರಕಾಶ ಹೆಗಡೆ ಹುಳಗೋಳ, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಸಿ. ಹೆಗಡೆ ಇದ್ದರು.
ಮನವಿಯಲ್ಲಿ ಏನೇನು?
ಅಕ್ರಮವಾಗಿ ಆಮದಾಗುತ್ತಿರುವ ಅಡಕೆಯನ್ನು ತಡೆಯಬೇಕು, ಎಫ್.ಎಸ್.ಎಸ್.ಐ. ಅವರು ಈಗ ನಿರ್ದಿಷ್ಟಪಡಿಸಿದ ಅಡಿಕೆ ತೇವಾಂಶ ಪ್ರಮಾಣ ಶೇ.7 ರಿಂದ ಶೇ. 11ಕ್ಕೆ ಹೆಚ್ಚಿಸುವಂತೆ ಮನವಿ ನೀಡಲಾಯಿತು. ಮೈಲುತುತ್ತದ ಮೇಲೆ ಈಗ ವಿಧಿ ಸುತ್ತಿರುವ ಜಿಎಸ್ಟಿಯನ್ನು ಶೇ.18 ರಿಂದ ಶೇ.5ಕ್ಕೆ ಇಳಿಸಲು ಆಗ್ರಹಿಸಲಾಯಿತು. ಕೃಷಿ ಸಚಿವರು “ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ತೀವ್ರ ಗಮನಹರಿಸುವ ಭರವಸೆ ನೀಡಿದರು.