ಟಾಪ್ 5 ನ್ಯೂಸ್ ಮಲ್ನಾಡ್
– ಸೊರಬ: ವಾಹನ ಪಲ್ಟಿಯಾಗಿ ಮೂವರ ದುರ್ಮರಣ
– ಸಾಗರ : ಮಾಂಗಲ್ಯ ಸರ ಹಿಂದಿರುಗಿಸಿದ ವಿದ್ಯಾರ್ಥಿನಿ
– ಸಿದ್ದಾಪುರ : ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಮೇಲೆ ಹರಿದ ಕಾರು
– ತೀರ್ಥಹಳ್ಳಿ : ಬೇಗುವಳ್ಳಿ ಬಳಿ ಭೀಕರವಾಗಿ ಎರಡು ಬೈಕ್ಗಳ ನಡುವೆ ಅಪಘಾತ.
– ಶಿವಮೊಗ್ಗ : ಅಡ್ರೆಸ್ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ
NAMMUR EXPRESS NEWS
ಸೊರಬ : ತಾಲೂಕಿನ ಹಿರೆಮಾಗಡಿ ಗ್ರಾಮದ ಬಳಿ ಮಂಗಳವಾರ ಸಂಕ್ರಾಂತಿ ಜಾತ್ರೆಗೆಂದು ತೆರಳುತ್ತಿದ್ದ ಮಹೀಂದ್ರ ಬುಲೇರೊ ವಾಹನ ಚಾಲಕನ ನಿಯಂತ್ರಣ ತಪ್ಪಿ ಮೂವರು ದುರ್ಮರಣ ಹೊಂದಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಸಾಗರದಿಂದ ಮಾಲತೇಶ(38) ಎಂಬಾತ ಚಿಕ್ಕಣ್ಣೂರು ಗ್ರಾಮದ ಜಾತ್ರೆಗೆಂದು ಸಾಗರದಿಂದ ಒಬ್ಬರನ್ನು ಕೂರಿಸಿಕೊಂಡು ತಾಲೂಕಿನ ಕಣಸಗಿ, ತಲ್ಲೂರು, ಚಿಕ್ಕಬೂರು, ಎಸ್.ಎನ್ ಕೊಪ್ಪ ಗ್ರಾಮಗಳಿಂದ ಸಂಬಂಧಿಕರನ್ನು ಕರೆದುಕೊಂಡು ಹೊರಟಿದ್ದಾನೆ. ಆದರೆ ತಾಲೂಕಿನ ಹಿರೇಮಾಗಡಿ ಗ್ರಾಮದ ಕಳ್ಳಂಬಳ್ಳಿ ಹಳ್ಳಕ್ಕೆ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಕಣಸಗಿಯ ರೇಣುಕಮ್ಮ(64) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತಲ್ಲೂರು ಗ್ರಾಮದ ಲಕ್ಷ್ಮವ್ವ (48) ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ, ಚಿಕ್ಕಟ್ಟೂರು ಗ್ರಾಮದ ಹನುಮಂತಪ್ಪ(50) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಚಾಲಕ ಎಸ್.ಎನ್ ಕೊಪ್ಪ ಮೂಲದ ಮಾಲತೇಶ್(38), ಇವರ ಮಕ್ಕಳಾದ ಸಾತ್ವಿಕ್ (6), ಹುಚ್ಚರಾಯ(8) ಹಾಗೂ ಕಣಸಗಿ ಗ್ರಾಮದ ಮಂಜಪ್ಪ(38) ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ವಾಹನ ಚಾಲಕನ ಸ್ಥಿತಿ ಗಂಭೀರವಾಗಿದೆ. ಪಡವಗೋಡು ಗ್ರಾಮದ ಹುಚ್ಚಪ್ಪ(28) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆನವಟ್ಟಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಸಾಗರ : ಮಾಂಗಲ್ಯ ಸರ ಹಿಂದಿರುಗಿಸಿದ ವಿದ್ಯಾರ್ಥಿನಿ
ಸಾಗರ: ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕಳೆದುಕೊಂಡಿದ್ದ 8 ಗ್ರಾಂ ತೂಕದ ಮಾಂಗಲ್ಯ ಸರವನ್ನು ವಿದ್ಯಾರ್ಥಿನಿಯು ಅದರ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ. ಸಾಗರದ ಜೋಸೆಫ್ ನಗರದ ಮೆಹಬೂಬ್ ಸಾಬ್ ಅವರ ಪುತ್ರಿ ರಜಿಯಾ ಎಂಬಾಕೆ ಪ್ರಾಮಾಣಿಕತೆ ತೋರಿದ ವಿದ್ಯಾರ್ಥಿನಿ. ತುಮರಿ ಸಮೀಪದ ಕಾರಣಿ ಗ್ರಾಮದ ನಾಗರಾಜ್ ಅವರ ಪತ್ನಿ ಸಂಗೀತ ಸೋಮವಾರ ತನ್ನ ಮಗುವಿಗೆ ಆರೋಗ್ಯ ಸಮಸ್ಯೆ ಕಾರಣಕ್ಕೆ ವೈದ್ಯರಿಗೆ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು ಈ ವೇಳೆ ಸಂಗೀತ ಅವರ 8 ಗ್ರಾಂ ತೂಕದ ಮಾಂಗಲ್ಯ ಸರ ಕಳೆದುಹೋಗಿತ್ತು. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಾಗರದ ಜೋಸೆಫ್ ನಗರದ ಮೆಹಬೂಬ್ ಸಾಬ್ ಅವರ ಪುತ್ರಿ ರಜಿಯಾಳಿಗೆ ಮಾಂಗಲ್ಯ ಸರ ಸಿಕ್ಕಿತ್ತು. ತಕ್ಷಣ ಅದನ್ನು ವೈದ್ಯರಿಗೆ ಕೊಟ್ಟು ಕಳೆದುಕೊಂಡವರಿಗೆ ಹಿಂದಿರುಗಿಸುವಂತೆ ಕೋರಿದ್ದಳು. ಠಾಣಾಧಿಕಾರಿ ಹುಚ್ಚಪ್ಪ ಅವರ ಸಮ್ಮುಖದಲ್ಲಿ ಮಾಂಗಲ್ಯ ಸರವನ್ನು ವಾರಸುದಾರರಿಗೆ ನೀಡಲಾಯಿತು. ಮುಖ್ಯಪೇದೆ ಹೇಮಂತ್, ವಿದ್ಯಾರ್ಥಿನಿ ರಜಿಯಾ, ಸಖಿ ಕೇಂದ್ರದ ಪ್ರೇಮಾ ಹಾಜರಿದ್ದರು
– ಸಿದ್ದಾಪುರ : ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಮೇಲೆ ಹರಿದ ಕಾರು
ಸಿದ್ದಾಪುರ: ಕಾರು ಚಾಲಕನನ್ನು ಬಂಧಿಸಿದ ಸಿದ್ದಾಪುರ ಪೊಲೀಸರು ಉತ್ತರ ಕನ್ನಡ, ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಜಾತ್ರಗೆ ನುಗ್ಗಿಸಿದ್ದಾನೆ. ಪರಿಣಾಮ ಕಾರು ಭಕ್ತರ ಮೇಲೆ ಹರಿದಿದ್ದು, ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅಯ್ಯಪ್ಪ ದೇಗುಲದ ಬಳಿ ಈ ದುರ್ಘಟನೆ ಸಂಭವಿಸಿದೆ. ಸಿದ್ದಾಪುರದ ಕವಲಕೊಪ್ಪ ನಿವಾಸಿ ದೀಪಾ ರಾಮಗೊಂಡ(21) ಮೃತ ಯುವತಿ. ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ, ಗಜಾನನ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕಲ್ಪನಾ ನಾಯ್ಕ್(5) ಸೇರಿ ಇಬ್ಬರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ರವೀಂದ್ರ ನಗರ ಸರ್ಕಲ್ ಬಳಿಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜಾತ್ರೆ ನಡೆದಿದೆ. ಈ ಜಾತ್ರೆಯಲ್ಲಿ ನೂರಾರು ಜನರು ಸೇರಿದ್ದರು. ಈ ವೇಳೆ ರೋಶನ್ ಫೆರ್ನಾಂಡಿಸ್ ಎನ್ನುವಾತ ಫುಲ್ ಟೈಟ್ ಆಗಿ ತನ್ನ ಇಕೋ ಸ್ಪೋರ್ಟ್ಸ್ ಕಾರನ್ನು ಯರ್ರಾಬಿರ್ರಿ ಚಲಾಯಿಸಿಕೊಂಡು ಬಂದಿದ್ದು, ಏಕಾಏಕಿ ಕಾರು ದೇಗುಲದ ಮಂಟಪಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಭಕ್ತಾದಿಗಳು ಕಾರಿನ ಮೇಲೆ ಕಲ್ಲು ಎಸೆದು ಅಡ್ಡಹಾಕಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
– ತೀರ್ಥಹಳ್ಳಿ : ಬೇಗುವಳ್ಳಿ ಬಳಿ ಭೀಕರವಾಗಿ ಎರಡು ಬೈಕ್ಗಳ ನಡುವೆ ಅಪಘಾತ.
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ಬಳಿ ಭೀಕರ ಅಪಘಾತ ನಡೆದಿದ್ದು ಎರಡು ಬೈಕ್ಗಳ ನಡುವೆ ಡಿಕ್ಕಿಯಾಗಿದ್ದು, ನಾಲ್ಕು ಮಂದಿಗೆ ಗಾಯಗಳಾಗಿದೆ.ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ . ಬೆಜ್ಜವಳ್ಳಿ ಜಾತ್ರೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ಮಂಡಗದ್ದೆ ಸಮೀಪದ ದಂಪತಿಗಳಿದ್ದ ಬೈಕ್ಗೆ ಮೇಲಿನ ತೂದೂರು, ಬೇಗುವಳ್ಳಿ ನಿವಾಸಿಗಳಿದ್ದ ಬೈಕ್ ಹಿಂದಿನಿಂದ ಡಿಕ್ಕಿಯಾಗಿದೆ. ಆದರೆ ಡಿಕ್ಕಿಯಾದ ಇನ್ನೊಂದು ಬೈಕ್ನಲ್ಲಿ ಇಬ್ಬರು ಹುಡುಗರಿಗೆ ಹೆಚ್ಚು ಹೊಡೆತ ಬಿದ್ದಿದ್ದು, ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
– ಶಿವಮೊಗ್ಗ : ಅಡ್ರೆಸ್ ಹೇಳಿದ ವ್ಯಾಪಾರಿಗೆ ನಾಲ್ವರಿಂದ ಹಲ್ಲೆ
ಶಿವಮೊಗ್ಗ: ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ. ನಗರದ ಕಸ್ತೂರಿ ಬಾ ರಸ್ತೆಯಲ್ಲಿ ನಡೆದ ಘಟನೆ, ವ್ಯಾಪಾರ ಕೇಂದ್ರವಾಗಿರುವ ಘಟನೆ ಇಲ್ಲಿ ನಡೆದಿದ್ದು, ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ. ಇಲ್ಲಿನ ಮುರುಡೇಶ್ವರದ ಬಳಿ, ಜನವರಿ 14 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ವರು ಅಂಗಡಿಯೊಂದರ ಬಳಿ ಬಂದು ವಿಳಾಸ ಕೇಳಿದ್ದಾರೆ. ಅಂಗಡಿಯ ಮಾಲೀಕ ಕೇಳಿದ ವಿಳಾಸ ಎಲ್ಲಿದೆ ಎಂದು ತೋರಿಸಿದ್ದಾನೆ. ಅಲ್ಲಿಗೆ ತೆರಳಿದ ನಾಲ್ವರು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊರಕ್ಕೆ ಬಂದು ದೂರದಿಂದಲೇ ವಿಳಾಸ ಹೇಳಿದ ಅಂಗಡಿಯವನಿಗೆ ನಿಂದಿಸಿದ್ದಾರೆ. ಆಗ ಅಂಗಡಿಯಾತ ತನ್ನ ಅಂಗಡಿಯಿಂದ ಹೊರಬಂದು ಯುವಕರನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಯುವಕ ತನ್ನ ಬಳಿ ಇದ್ದ ಮಾರಕಾಸ್ತ್ರ ತೆಗೆದು ಅಂಗಡಿಯಾತನಿಗೆ ಚುಚ್ಚಿದ್ದಾನೆ. ಅದೇ ವೇಳೆ ಉಳಿದ ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಸ್ಥಳೀಯ ವ್ಯಾಪಾರಸ್ಥರು, ಹಲ್ಲೆಗೆ ಮುಂದಾದವರ ಮೇಲೆ ದಾಳಿ ಮಾಡಿ, ಅಂಗಡಿಯಾತನನ್ನ ರಕ್ಷಿಸಿದ್ದಾರೆ. ಈ ನಡುವೆ ಯುವಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೆಟ್ಟು ತಿಂದಿದ್ದಾನೆ. ಹೊಸವರ್ಷದ ಆರಂಭದಿಂದ ಶಿವಮೊಗ್ಗದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ವರದಿಯಾಗುತ್ತಲೇ ಇವೆ. ಪೊಲೀಸ್ ಇಲಾಖೆಯಿಂದ ದಾಟಿ ವಿಚಾರಗಳು ಆಚೆ ಬರುತ್ತಿಲ್ಲ. ಪ್ರಕರಣಗಳು ನಡೆದಾಗ ಅವುಗಳ ವಿಚಾರದಲ್ಲಿ ತೋರುತ್ತಿರುವ ಮೃಧುದೋರಣೆ ಹಾಗೂ ಕ್ರೈಂಗಳ ಮೇಲೆ ಕಡಿಮೆಯಾಗಿರುವ ಇಲಾಖೆಯ ಗಮನಕ್ಕೆ ಈ ಘಟನೆಗಳು ಸಾಕ್ಷಿಯಾಗುತ್ತಿವೆ.