- ವಾಟ್ಸಾಪ್ ಸುಳ್ಳು ಸುದ್ದಿ ಜನ ಕಂಗಾಲು
- ದಯವಿಟ್ಟು ಇಂತಹ ಸುಳ್ಳು ಶೇರ್ ಮಾಡಬೇಡಿ!
- ಸುಳ್ಳು ಸುದ್ದಿ ಹರಡಿದ್ರೆ ಕ್ರಮ: ಡಿವೈಎಸ್ಪಿ ಆರ್ಡರ್
- ವಿಷ ಬಾಟಲಿ ಕಚ್ಚಲು ಹೋಗಿ ಬಾಯಿಗೆ ವಿಷ!: ಅಸ್ವಸ್ಥಗೊಂಡಿದ್ದ ಬಾಲಕ ಸಾವು..!
- ಶಿವಮೊಗ್ಗ ಜಿಲ್ಲೆಯ ಕರೋನಾ ರಿಪೋರ್ಟ್
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾಡು ಹಂದಿ ದಾಳಿ ನಡೆಸಿ ನಾಲ್ಕು ಮಂದಿ ಸಾವು ಎಂಬ ಸುಳ್ಳು ಸುದ್ದಿ ಎಲ್ಲೆಡೆ ಕಳೆದ ಮೂರು ನಾಲ್ಕು ದಿನಗಳಿಂದ ವೈರಲ್ ಆಗಿದೆ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಜನ ಇದರಿಂದ ಗೊಂದಲವಾಗಿದ್ದು, ಘಟನೆ ನಡೆದಿದೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮೂರ್ ಎಕ್ಸ್ಪ್ರೆಸ್ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಇದೊಂದು ಸುಳ್ಳು ಮಾಹಿತಿ ಎಂಬುದನ್ನು ಓದುಗರಿಗೆ ಖಚಿತಪಡಿಸುತ್ತದೆ.
ಖಚಿತವಾಗದೆ ಶೇರ್ ಮಾಡಿದ್ರೆ ಕ್ರಮ!: ಯಾವುದೇ ವಿಚಾರದಲ್ಲಿ ತಪ್ಪು ಮಾಹಿತಿ ಶೇರ್ ಮಾಡಿದ್ರೆ ಕ್ರಮ ತೆಗೆದುಕೊಳ್ಳುವುದಾಗಿ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ತಿಳಿಸಿದ್ದಾರೆ.
ತೀರ್ಥಹಳ್ಳಿ: ವಿಷ ಬಾಟಲಿ ಕಚ್ಚಲು ಹೋಗಿ ಬಾಯಿಗೆ ವಿಷ!: ಅಸ್ವಸ್ಥಗೊಂಡಿದ್ದ ಬಾಲಕ ಸಾವು..!
ತೀರ್ಥಹಳ್ಳಿ ಭತ್ತದ ಸಸಿಗೆ ಸಿಂಪಡಿಸುವ ಔಷಧಿ ಬಾಟಲಿಯ ಮುಚ್ಚಳವನ್ನು ಬಾಯಿಯಿಂದ ಕಚ್ಚಿ ತೆರೆಯಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ದೇಹದೊಳಗೆ ವಿಷ ಸೇರಿ ಕಾಲೇಜು ವಿದ್ಯಾರ್ಥಿ ರಾಜೇಶ್ (17) ಮೃತಪಟ್ಟಿರುವ ಘಟನೆ ತಾಲೂಕಿನ ಉಬ್ಬೂರು ಸಮೀಪದ ಶೇಡ್ಗಾರ್ ಗ್ರಾಮದಲ್ಲಿ ನಡೆದಿದೆ. ಉಮೇಶ್ ದಂಪತಿ ಪುತ್ರ ರಾಜೇಶ್ ಮಾಳೂರು ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಆಗಸ್ಟ್ 7ರಂದು ವಿಷ ದೇಹಕ್ಕೆ ಸೇರಿ ತೀವ್ರ ಅಸ್ವಸ್ಥಗೊಂಡಿದ್ದ ರಾಜೇಶ್, ತೀರ್ಥಹಳ್ಳಿ ಪಟ್ಟಣದಲ್ಲಿ ಚಿಕಿತ್ಸೆ ಪಡೆದು ವಾಪಸಾದ ಎರಡು ದಿನದ ನಂತರ ಮತ್ತೆ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಕರೋನಾ ರಿಪೋರ್ಟ್!: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ 45 ಜನರಿಗೆ ಕೊರೋನ ಪಾಸಿಟಿವ್ ಎಂದು ತಿಳಿಸಿದ್ದ ಜಿಲ್ಲಾ ಹೆಲ್ತ್ ಬುಲಿಟಿನ್ ಶುಕ್ರವಾರ 45 ಜನರಿಗೆ ಸೋಂಕು ತಗುಲಿದೆ ಎಂದು ತಿಳಿಸಿದೆ. ಯಾರು ಕೂಡ ಸೋಂಕಿನಿಂದ ಮೃತಪಟ್ಟಿಲ್ಲ . ಕೊರೋನ ಸೋಂಕಿನಿಂದ 36 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಶಿವಮೊಗ್ಗ ತಾಲೂಕು ಮತ್ತು ನಗರದಲ್ಲಿ ಇಂದು- 17 ಜನರಿಗೆ ಪಾಸಿಟಿವ್ ಬಂದಿದೆ. ಭದ್ರಾವತಿಯಲ್ಲಿ – 04 ಶಿಕಾರಿಪುರದಲ್ಲಿ – 01 ತೀರ್ಥಹಳ್ಳಿಯಲ್ಲಿ- 11 ಸೊರಬ- 01 ಹೊಸನಗರ- 01 ಸಾಗರದಲ್ಲಿ 10 ಜನರಲ್ಲಿ ಕೊರೋನ ಪಾಸಿಟಿವ್ ಬಂದಿದೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು