- ಆಗುಂಬೆ ಪೊಲೀಸರಿಂದ ಪತಿ ವಶಕ್ಕೆ: ವಿಚಾರಣೆ
- ಪತಿಯ ಅನುಮಾನ ಪತ್ನಿ ಪ್ರಾಣ ತೆಗೆಯಿತೇ..?
- ಬೆಜ್ಜವಳ್ಳಿ, ತೀರ್ಥಹಳ್ಳಿಯಲ್ಲಿ ನಡೆದಿತ್ತು ಸಾವು!
ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಠಾಣೆ ವ್ಯಾಪ್ತಿಯ ಕುಂದಾದ್ರಿ ಬಳಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪಟ್ಟೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಮತ್ತು ಮಹಿಳೆ ಕುಟುಂಬದವರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆ ಪತಿಯನ್ನು ಆಗುಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿಗೆರಿಯಲ್ಲಿ ಘಟನೆ ನಡೆದಿದ್ದು,ಜ್ಯೋತಿ(25) ಮೃತಪಟ್ಟ ದುರ್ದೈವಿ. ಆಗುಂಬೆ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್, ವೀರೇಂದ್ರ, ಉಮೇಶ್, ಸುದರ್ಶನ್, ನೇತೃತ್ವದ ಪೊಲೀಸ್ ತಂಡ ವಿಚಾರಣೆ ಕೈಗೊಂಡಿದೆ.
ಪತ್ನಿಯ ಬಗ್ಗೆ ಪದೇ ಪದೇ ಪತಿ ದಯಾನಂದ ಅನುಮಾನ ವ್ಯಕ್ತಪಡಿಸುತ್ತಿದ್ದು ಕೊಲೆಗೆ ಪತಿಯ ಅನುಮಾನವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಕೊಲೆಯಾದ ಜ್ಯೋತಿ ಮೃತದೇಹ ತಾಲೂಕು ಜೆ.ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳಕ್ಕೆ ಶಾಸಕ ಆರಗಜ್ಞಾನೇಂದ್ರ ತಾಲ್ಲೂಕು ದಂಡಾಧಿಕಾರಿ ಡಾ. ಶ್ರೀಪಾದ ಭೇಟಿ ನೀಡಿದ್ದಾರೆ.
ತೀರ್ಥಹಳ್ಳಿ ಸೊಪ್ಪುಗುಡ್ಡೆ ನೀರಿನ ಟ್ಯಾಂಕ್ ಬಳಿ ಮೊನ್ನೆ ತಾನೇ ಒಬ್ಬ ವೃದ್ಧ ಮೃತಪಟ್ಟಿದ್ದರು. ಬೆಜ್ಜವಳ್ಳಿಯ ದಾನಸಾಲೆ ರಸ್ತೆಯಲ್ಲಿ ಯುವಕನೊಬ್ಬ ಮದ್ಯದ ಚಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ.