- ಕರೋನಾ ಕೇಸ್ ಹೆಚ್ಚಳ: ಬದುಕು ಬರ್ಬಾತ್
- ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶ
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದ ಮುಳಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ನಗರ ಇದೀಗ ಶುಕ್ರವಾರ ಸಂಪೂರ್ಣ ಸೀಲ್ಡೌನ್ ಆಗಿದೆ.
ಕರೋನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ತಾಲೂಕು ಆಡಳಿತ ಸ್ಥಳಕ್ಕೆ ತೆರಳಿ ಲಾಕ್ ಡೌನ್ ಮಾಡಿಸಿದೆ.
ಕೂಲಿ ಕಾರ್ಮಿಕರೇ ಹೆಚ್ಚು!: ತೀರ್ಥಹಳ್ಳಿಯಲ್ಲಿಯೇ ಅತೀ ಹೆಚ್ಚು ಕೂಲಿ ಕಾರ್ಮಿಕರನ್ನು ಹೊಂದಿರುವ ಪ್ರದೇಶ ಇಂದಿರಾ ನಗರ. ಎಲ್ಲರೂ ದಿನದ ಕೂಲಿ ನಂಬಿ ಜೀವನ ಸಾಗಿಸುವವರು. ಇದೀಗ ಸೀಲ್ಡೌನ್ ಮಾಡಿದ್ದರಿಂದ ಬಾಡಿಗೆ ಮನೆ ಮಾಡಿಕೊಂಡು ಕೂಲಿ ಹೋಗುವವರ ಬದುಕು ಹೈರಾಣ ಆಗಲಿದೆ ಎಂದು ಸ್ಥಳೀಯರು ನೋವು ತೋಡಿಕೊಂಡರು. ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಇಲ್ಲಿಗೆ ಕಿಟ್ ವಿತರಣೆ ಮಾಡಬೇಕೆಂದು ಮನವಿ ಮಾಡಿದರು.