- ಇಬ್ಬರ ಮನೆಗೆ ಎನ್ಐಎ ಅಧಿಕಾರಿಗಳ ಭೇಟಿ, ತನಿಖೆ
- ತೀರ್ಥಹಳ್ಳಿಗೆ ಈ ಕಳಂಕ ಏಕೆ..?
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ಇಬ್ಬರು ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಎನ್ ಐಎ ಅಧಿಕಾರಿಗಳ ತಂಡ ತಲೆಮರೆಸಿಕೊಂಡಿರುವ ಇಬ್ಬರು ಯುವಕರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ತನಿಖೆ ನಡೆದಿತ್ತು.
ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ ಎನ್ ಐಎ ಅಧಿಕಾರಿಗಳು ಕೂಬಿಂಗ್ ನಡೆಸಿದ್ದರು. ಈ ವೇಳೆ ತೀರ್ಥಹಳ್ಳಿಯ ಇಬ್ಬರು ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು. ಆದರೆ ಅಷ್ಟರಲ್ಲಾಗಲೇ ಯುವಕರು ನಾಪತ್ತೆಯಾಗಿದ್ದರು.
ನಂತರ ಕಳೆದ ವರ್ಷ ಮಾರ್ಚ್ 19 ರಂದು ಎನ್ ಐ ಎ ಅಧಿಕಾರಿಗಳು ತೀರ್ಥಹಳ್ಳಿಯ ಯುವಕರ ಮನೆಗೆ ಬಂದು ವಿಚಾರಣೆ ನಡೆಸಿದ್ದರು.
ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ ಭೇಟಿ ನೀಡಿರುವ ಎನ್ಐಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಯುವಕರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ತನಿಖೆಗೆ ನಡೆಸಿದ್ದಾರೆ. ಕಳೆದ ವರ್ಷ ಮಂಗಳೂರಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣದಲ್ಲೂ ತೀರ್ಥಹಳ್ಳಿ ಯುವಕನ ಹೆಸರು ಬಂದಿತ್ತು.
ಎಲ್ಲಾ ಸುದ್ದಿಗಳಿಗೆ ನಮ್ಮೂರ್ ಎಕ್ಸ್ಪ್ರೆಸ್ ವೀಕ್ಷಿಸಿ..!