ನವಜಾತ ಶಿಶು ವಾರ್ಡ್ನಲ್ಲಿ ದಿಢೀರ್ ಬೆಂಕಿ!
– ತಡರಾತ್ರಿ ಆಕಸ್ಮಿಕ ಬೆಂಕಿ, 10 ಶಿಶುಗಳ ಸಾವು!
– 40ಕ್ಕೂ ಹೆಚ್ಚು ಶಿಶುಗಳು ಪಾರು!
– ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತ!
NAMMUR EXPRESS NEWS
ಉತ್ತರ ಪ್ರದೇಶ: ನವಜಾತ ಶಿಶುಗಳ ವಾರ್ಡ್ನಲ್ಲಿ ತಡರಾತ್ರಿ ಆಕಸ್ಮಿಕ ಬೆಂಕಿ ಉಂಟಾಗಿ 10 ಶಿಶುಗಳು ಸುಟ್ಟು ಕರಕಲಾಗಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿರುವ ಮಹಾರಾಣಿ ಲಕ್ಷ್ಮೀ ಬಾಯಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಆಸ್ಪತ್ರೆಯ ವಾರ್ಡ್ ನಲ್ಲಿ 40ಕ್ಕೂ ಹೆಚ್ಚು ಶಿಶುಗಳಿದ್ದು, ಅವರೆಲ್ಲರನ್ನೂ ಪಾರು ಮಾಡಲಾಗಿದೆ. ಆರಂಭದಲ್ಲಿ ವಾರ್ಡ್ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಮಾತ್ರದಲ್ಲಿ ವ್ಯಾಪಿಸಿಕೊಂಡಿತು. ಈ ವೇಳೆಗಾಗಲೇ 10 ಮಂದಿ ಶಿಶುಗಳು ಬೆಂಕಿಗೆ ಆಹುತಿಯಾಗಿದ್ದವು. ಈ ವೇಳೆ ವಾರ್ಡ್ನಲ್ಲಿದ್ದ ಸಿಬ್ಬಂದಿ, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಒಳಗಿನ ಘಟಕದ ಕೆಲವು ಮಕ್ಕಳನ್ನು ಸಹ ರಕ್ಷಿಸಲಾಗಿದೆ, ಇದುವರೆಗೆ 40 ಮಕ್ಕಳನ್ನು ರಕ್ಷಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಾರ್ಡ್ನಲ್ಲಿದ್ದ ಎಲ್ಲರಲ್ಲಿಯೂ ಭೀತಿ ಆವರಿಸಿಕೊಂಡಿತು. ಸಿಬ್ಬಂದಿ, ಮಕ್ಕಳ ಕುಟುಂಬ ವರ್ಗದವರು ಗಾಬರಿಯಿಂದ ಓಡಾಡಲು ಆರಂಭಿಸಿದರು. ಹೀಗಾಗಿ, ಅಲ್ಲಿ ಕಾಲ್ತುಳಿತ ಮಾದರಿಯ ಸ್ಥಿತಿ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.