-ಖಾತೆ ಹಂಚಿಕೆಯಲ್ಲಿ ಬದಲಾವಣೆಯ ನಿರ್ಧಾರ ಕೈಗೊಂಡ ಸಿ.ಎಂ
-ದಿನನಿತ್ಯ ಬದಲಾವಣೆ ತರುತ್ತಿರುವ ಅಸಮಾಧಾನದ ಸ್ಫೋಟ!
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆಯ ಬಗ್ಗೆ ಅಸಮಾಧಾನ ಸ್ಪೋಟಗೊಂಡ ನಂತರ ಹಲವು ಸಚಿವರ ಖಾತೆ ಅದಲು ಬದಲು ಮಾಡಿದ್ದರು. ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿರುವ ಸಿಎಂ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದಂತ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ, ಸುಧಾಕರ್ ಅವರಿಗೆ ನೀಡಿದ್ದಾರೆ.
ಈ ಮೂಲಕ ಸಚಿವ ಸುಧಾಕರ್ ಹೆಗಲಿದೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಜವಾಬ್ದಾರಿ ಹೊರಿಸಿದ್ದು, ಆನಂದ್ ಸಿಂಗ್ ಅವರ ಖಾತೆಯನ್ನು ಕೂಡ ಬದಲು ಮಾಡಿ, ಸಿಎಂ ಯಡಿಯೂರಪ್ಪ ಬಳಿಯಲ್ಲಿದ್ದಂತಹ ಮೂಲ ಸೌಕರ್ಯ ಖಾತೆ ಜೊತೆಗೆ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ.