ರಾಜ್ಯದಲ್ಲಿ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ..!
- ಮೈಸೂರಲ್ಲಿ ಜಿಟಿಡಿ ನೇತೃತ್ವದಲ್ಲಿ ಚುನಾವಣೆ
- 2023ಕ್ಕೆ ಮಿಷನ್ 123 ಪ್ಲಾನ್ ಮಾಡಿದ ದೇವೇಗೌಡ
- ನಿಖಿಲ್ ಕುಮಾರ್ ಸ್ವಾಮಿ, ಹರೀಶ್ ಗೌಡ ಅವರಿಗೂ ಟಿಕೆಟ್!
NAMMUR EXPRESS NEWS
ಮೈಸೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ 6 ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ತನ್ನ ಮೊದಲ ಪಟ್ಟಿ ಘೋಷಣೆ ಮಾಡಿದೆ.
ಬಿಜೆಪಿ, ಕಾಂಗ್ರೆಸ್ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ನಡುವೆ ಜೆಡಿಎಸ್ ನಾಯಕರು ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿದ್ದು, 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮತ್ತು ಜಿ. ಟಿ. ದೇವೇಗೌಡರು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
2023ಕ್ಕೆ ಮಿಷನ್ 123: 2023ಕ್ಕೆ ಮಿಷನ್ 123 ಶುರು ಮಾಡಿರುವ ಕುಮಾರಸ್ವಾಮಿ ಈಗ 126 ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಇದರಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡ ಪುತ್ರ ಹರೀಶ್ಗೂ ಟಿಕೆಟ್ ಖಚಿತವಾಗಿದೆ.ಈ ಬಾರಿ ಜೆಡಿಎಸ್ಗೆ 30ರಿಂದ 40 ಸ್ಥಾನ ಬಂದರೆ ಅಧಿಕಾರದಿಂದ ದೂರ ಇರುತ್ತೇನೆ. 30ರಿಂದ 40 ಸ್ಥಾನ ಬಂದರೂ ನಾನು ಸಿಎಂ ಆಗುತ್ತೇನೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜಿಟಿಡಿ ನಿವಾಸಕ್ಕೆ ಭೇಟಿ ನೀಡಿದ ಹೆಚ್ಡಿಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲಾ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
- ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ
- ಹುಣಸೂರು – ಜಿ.ಟಿ.ಹರೀಶ್ ಗೌಡ
- ಕೆ. ಆರ್. ನಗರ – ಸಾ. ರಾ. ಮಹೇಶ್
- ಪಿರಿಯಾಪಟ್ಟಣ – ಕೆ. ಮಹದೇವ್
- ಟಿ. ನರಸೀಪುರ – ಅಶ್ವಿನ್
- ಎಚ್. ಡಿ. ಕೋಟೆ – ಜಯಪ್ರಕಾಶ್