- ಕೆಲವು ಸಾಮಾಜಿಕ ಮಾಧ್ಯಮಗಳಿಂದ ಸುಳ್ಳು ಸುದ್ದಿ ಬಿತ್ತರ ಹಿನ್ನೆಲೆ
- ತೀರ್ಥಹಳ್ಳಿಯಲ್ಲಿ ವಿನಯ್ ಗುರೂಜಿ ಭಕ್ತವೃಂದದಿಂದ ಪೊಲೀಸ್ ಇಲಾಖೆಗೆ ಮನವಿ ಪತ್ರ
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಅವಧೂತ ವಿನಯ್ ಗುರೂಜಿ ಅವರ ಬಗ್ಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಮತ್ತು ಮಠದ, ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ, ಪೊಲೀಸ್ ಇಲಾಖೆಗೆ ತೀರ್ಥಹಳ್ಳಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ ಮನವಿ ಮಾಡಿದೆ.
ತೀರ್ಥಹಳ್ಳಿ ಗುರೂಜಿ ಪ್ರತಿ ದಿನ ಸಾವಿರಾರು ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಅರೋಗ್ಯ, ಶಿಕ್ಷಣ, ಅನಾಥ ಆಶ್ರಮ, ಗೋ ಶಾಲೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಗುರೂಜಿ ಮತ್ತು ಮಠದ ಏಳಿಗೆ ಸಹಿಸಲಾಗದೆ ಈ ಷಡ್ಯಂತ್ರ ಮಾಡಲಾಗುತ್ತಿದೆ. ಆದರೆ
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸುದ್ದಿ ಪ್ರಕಟ ಮಾಡಲಾಗುತ್ತಿದೆ. ಇದರಿಂದಾಗಿ ವಿನಯ್ ಗುರೂಜಿ ಅವರ ಲಕ್ಷಾಂತರ ಭಕ್ತರ ಮನಸಿಗೆ ನೋವು ಉಂಟು ಮಾಡಿದೆ. ಅಲ್ಲದೆ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು.
ವಿನಯ್ ಗುರೂಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಕಾಣದ ಕೈಗಳ ಕೈವಾಡಗಳನ್ನು ತನಿಖೆ ಮಾಡಬೇಕೆಂದು ವಿನಯ್ ಗುರೂಜಿ ಭಕ್ತವೃಂದ ಸರ್ಕಾರಕ್ಕೆ ಆಗ್ರಹಿಸಿದೆ. ತೀರ್ಥಹಳ್ಳಿ ತಹಸೀಲ್ದಾರ್ ಹಾಗೂ ಡಿವೈಎಸ್ಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಲಾಯಿತು.
ಭಕ್ತವೃಂದದ ಬಂಡೆ ವೆಂಕಟೇಶ್, ಅಭಿಲಾಷ್ ಹೆಗ್ಡೆ, ದೀಪಕ್ ಚಿಕ್ಕಳೂರು, , ಶ್ರೀಧರ ಉಡುಪ, ಟಿ. ವಿ.ರಾಘವೇಂದ್ರ ಭಟ್, ವಿಶ್ವನಾಥ ವಡೆಗದ್ದೆ, ತಾರಾ ವಿಶ್ವನಾಥ್, ಮಹೇಶ್ ಮೇಗರವಳ್ಳಿ ಇತರರು ಇದ್ದರು.