ಟಾಪ್ 5 ನ್ಯೂಸ್ ಕರ್ನಾಟಕ
23 ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆ!
– ದಾವಣಗೆರೆ: ಭಾರೀ ಮಳೆಗೆ ಕೊಚ್ಚಿ ಹೋದ ಟೊಮೆಟೊ ಬಾಕ್ಸ್
– ತುಮಕೂರು: ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿ!
– ನೆಲಮಂಗಲ: ತಾಯತ ಕಟ್ಟುವ ವಿಚಾರಕ್ಕೆ ಮಸೀದಿಯಲ್ಲಿ ಹೊಡೆದಾಟ!
– ಮಂಡ್ಯ: ಪತ್ನಿಯ ಅನುಮಾನಾಸ್ಪದ ಸಾವು; ಜನರ ಆಕ್ರೋಶಕ್ಕೆ ಹೆದರಿ ಗಂಡ ಕೂಡ ಆತ್ಮಹತ್ಯೆ
NAMMUR EXPRESS NEWS
ಬೆಂಗಳೂರು: ಕರ್ನಾಟಕದ 23 ಜಿಲ್ಲೆಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸರು, ಶಿವಮಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಾವಣಗೆರೆಯಲ್ಲಿ ಭಾರೀ ಮಳೆ: ನ್ಯಾಮತಿಯಲ್ಲಿ ಕೊಚ್ಚಿ ಹೋದ ಟೊಮೆಟೊ
ದಾವಣಗೆರೆ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಚನ್ನಗಿರಿ ತಾಲೂಕಿನ ಬಿಲ್ಲಳ್ಳಿಯಲ್ಲಿತಡ ರಾತ್ರಿ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತಾಗಿತ್ತು. ನಿರಂತರವಾಗಿ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಗ್ರಾಮದ ಗದ್ದೆ ಹಾಗೂ ಮನೆಗಳು ಜಲಾವೃತವಾಗಿದ್ದು ಮನೆಯಿಂದ ನೀರು ಹೊರ ಹಾಕಲು ಗ್ರಾಮಸ್ಥರು ಪರದಾಡಿದ್ರು. ಇನ್ನು ಮತ್ತೊಂದೆಡೆ ಭಾರಿ ಮಳೆಗೆ ಟೊಮೇಟೊಗಳು ಕೊಚ್ಚಿಕೊಂಡು ಹೋಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದಿಢೀರನೆ ಸುರಿದ ಭಾರಿ ಮಳೆಗೆ ಟೊಮೇಟೊ ಹಣ್ಣುಗಳು ಕೊಚ್ಚಿಕೊಂಡು ಹೋಗಿವೆ. ಆರುಂಡಿ ಗ್ರಾಮದ ಜವಳಿ ಸುರೇಶ್ ಎಂಬುವರಿಗೆ ಸೇರಿದ ಟೊಮೇಟೊಗಳು ನೀರುಪಾಲಾಗಿದ್ದು ರೈತನಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟುವಾಗಿದೆ. ಇನ್ನು ಈ ದೃಶ್ಯವನ್ನು ಕೆಲ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿ!
ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ. ಕಳ್ಳಬಟ್ಟಿ ಸೇವಿಸಿ ಈ ರೀತಿ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಅಸ್ವಸ್ಥಗೊಂಡವರು ಸ್ಥಳೀಯ ಆಸ್ಪತ್ರೆ ಹಾಗೂ ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಸ್ಟ್ 14 ಮತ್ತು 15ರಂದು ಪಾವಗಡ ತಾಲೂಕಿನ ನಾಗೇನಹಳ್ಳಿ ತಾಂಡಾದಲ್ಲಿ ಮದುವೆ ನಡೆದಿತ್ತು. ಮರು ದಿನ ಆಗಸ್ಟ್ 16ರಂದು ಶ್ರೀರಂಗಪುರ ತಾಂಡಾದಲ್ಲಿ ಬೀಗರ ಊಟ ಆಯೋಜಿಸಲಾಗಿತ್ತು. ಊಟ ಮಾಡಿ ವಾಪಸ್ ತೆರಳಿದ ನಾಗೇನಹಳ್ಳಿ ತಾಂಡಾದ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. 24 ಮಂದಿಗೆ ಕಾರ್ಯಕ್ರಮ ನಡೆದ ದಿನದಿದ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದಾರೆ. ಕಳ್ಳಬಟ್ಟಿ ಸೇವನೆಯಿಂದಲೇ ಹೀಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಾಯತ ಕಟ್ಟುವ ವಿಚಾರಕ್ಕೆ ಮಸೀದಿಯಲ್ಲಿ ಹೊಡೆದಾಟ!
ತಾಯತ ಕಟ್ಟುವ ವಿಚಾರಕ್ಕೆ ಮಸೀದಿಯಲ್ಲಿ ಮಾರಾಮಾರಿ ನಡೆದಿದೆ. ನೆಲಮಂಗಲ ತಾಲೂಕಿನ ಆಗಲಗುಪ್ಪೆಯಲ್ಲಿ ಘಟನೆ ನಡೆದಿದೆ. ಮಸೀದಿಯಲ್ಲಿ 2 ಕುಟುಂಬಗಳು ಹೊಡೆದಾಡಿಕೊಂಡಿವೆ. ಒಂದೂವರೆ ವರ್ಷದ ಮಗು ಹಾಗೂ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳೆ, ಮಗು ಮೇಲೆ ಶಫೀಕ್, ಶಾವೀಸ್ & ಆಯಿಶಾ ಅಟ್ಯಾಕ್ ಮಾಡಿದ್ದು ನಮ್ಮ ಬಳಿಯೇ ತಾಯತ ಕಟ್ಟಿಸಿಕೊಳ್ಳಬೇಕೆಂದು ಹಲ್ಲೆ ನಡೆಸಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪತ್ನಿಯ ಅನುಮಾನಾಸ್ಪದ ಸಾವು; ಜನರ ಆಕ್ರೋಶಕ್ಕೆ ಹೆದರಿ ಗಂಡ ಕೂಡ ಆತ್ಮಹತ್ಯೆ!
ಮಂಡ್ಯ: ಗಂಡನ ಮನೆಯಲ್ಲಿ ಗೃಹಿಣಿಯೊಬ್ಬಳ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಇದಾದ ಕೆಲವೇ ಕೆರೆಯಲ್ಲಿ ಪತ್ತೆಯಾಗಿದೆ. ಗಂಡನ ಮನೆಯ ಉಳಿದವರು ನಾಪತ್ತೆಯಾಗಿದ್ದು, ಗೃಹಿಣಿ ಸಾವಿನಿಂದ ಜನರಲ್ಲಿ ಹುಟ್ಟಿಕೊಂಡಿರುವ ಆಕ್ರೋಶದ ಪರಿಣಾಮ ಅಂಜಿ ತಲೆ ಮರೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ವಾತಿ (21) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಗೃಹಿಣಿ. ಮೋಹನ್ (26) ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಪತ್ನಿಯ ಸಾವಿಗೆ ಹೆದರಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸ್ವಾತಿ ಸಾವು ಆತ್ಮಹತ್ಯೆಯೋ ಕೊಲೆಯೋ
ಎಂಬುದು ಖಚಿತವಾಗಿಲ್ಲ. ಇದು ಗಂಡನ ಮನೆಯವರಿಂದ ಆಗಿರುವ ಕೊಲೆ ಎಂದು ಸ್ವಾತಿ ಪೋಷಕರು ಆರೋಪಿಸಿದ್ದಾರೆ. ರಾತ್ರಿ ಯುವತಿಯ ಸಂಬಂಧಿಕರು ಗಂಡನ ಮನೆಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಎಸಗಿದ್ದರು.