ಇನ್ನು 5,8ನೇ ತರಗತಿ ಎಲ್ಲರೂ ಪಾಸಾಗಲ್ಲ!
* 5, 8ನೇ ತರಗತಿಗಳಿಗೆ ಜಾರಿಯಾಯ್ತು ಅನುತ್ತೀರ್ಣ ನಿಯಮ
* ಕೇಂದ್ರ ಸರ್ಕಾರದ ನೂತನ ನಿಯಮ ಜಾರಿಗೆ ಬರುತ್ತಾ?
NAMMUR EXPRESS NEWS
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದಿರುವ 5 ಮತ್ತು 8ನೇ ತರಗತಿ ಮಕ್ಕಳಿಗೆ ‘ಅನುತ್ತೀರ್ಣ’ ಮಾಡಬಹುದೆಂಬ ಹೊಸ ನಿಯಮ ಜಾರಿಯಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, ಎಂಟನೇ ತರಗತಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲಾಗಿದೆ ಎಂಬ ನಿಯಮ ಬದಲಾಗಲಿದೆ.
ಪರಿಷ್ಕೃತ ನಿಯಮದ ಪ್ರಕಾರ, ಎಂದಿನಂತೆ ಮತ್ತು 8 ನೇ ತರಗತಿಯಿಂದ 5 ವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ನಂತರ ಎರಡು ತಿಂಗಳ ತರಬೇತಿ ನೀಡಿ ಮತ್ತೆ ಪರೀಕ್ಷೆ, ಒಂದೊಮ್ಮೆ ಅಲ್ಲಿಯೂ ಕಲಿಕಾ ಗುಣಮಟ್ಟ ಸುಧಾರಿಸುವಲ್ಲಿ ವಿಫಲವಾದರೆ ಅಂತಹ ಮಕ್ಕಳ ಹಿಂದಿನ ತರಗತಿಯಲ್ಲೇ ಮುಂದುವರಿಯುತ್ತದೆ.
* ರಾಜ್ಯದ ಪರಿಸ್ಥಿತಿ ಏನು?
ಕರ್ನಾಟಕದಲ್ಲಿ ಎಂಟನೇ ತರಗತಿಯವರೆಗೆ ಮಕ್ಕಳಿಗೆ ‘ಅನುತೀರ್ಣ’ ಮಾಡುವ ಪದ್ಧತಿ ಇಲ್ಲ. ಇದೀಗ ಹೊಸ ನಿಯಮ ಜಾರಿಯಾಗಲು ಸರ್ಕಾರದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿಚಾರವಾಗಿ ಅವರು ಮಾತನಾಡಿದ್ದಾರೆ, ರಾಜ್ಯದಲ್ಲಿ ಕಳೆದ ವರ್ಷ 5 ಮತ್ತು 8ನೇ ತರಗತಿಗೆ ಯಾರು ಪರೀಕ್ಷೆ ಮಾಡಬೇಕು ಎಂಬುದರ ಕುರಿತು ಚರ್ಚೆಯಾಗಿ ಹೊಸ ಪ್ರಕರಣವನ್ನು ನಡೆಸಲಾಯಿತು. ಪರೀಕ್ಷೆಯನ್ನು ಮಂಡಳಿಯಿಂದ ನಡೆಸಬೇಕೋ ಅಥವಾ ಶಾಲಾ ಹಂತದಲ್ಲಿ ನಡೆಸಬೇಕೋ ಎಂಬುದು ರಾಜ್ಯದ ವಿಚಾರವಾಗಿತ್ತು. ಆದರೆ, ‘ಫೇಲ್’ ಮಾಡುವ ವಿಚಾರವಾಗಿ ರಾಜ್ಯದಲ್ಲಿ ಚರ್ಚೆ ವಿಷಯವಾಗಿರಲಿಲ್ಲ. ಆದರೆ, ಈಗ ಸರ್ಕಾರವು ಕಲಿಕೆಯಲ್ಲಿ ಮಕ್ಕಳ ಕೇಂದ್ರ ಫೇಲ್ ಮಾಡಲು ಹೊರಟಿರುವುದು ಹೊಸ ವಿಷಯವಾಗಿದೆ. ಹೀಗಾಗಿ, ಸರ್ಕಾರದ ಹಂತದಲ್ಲಿಯೇ ನಿರ್ಣಯ ಕೈಗೊಳ್ಳಲಾಯಿತು.
* ರಾಜ್ಯದಲ್ಲಿ ಪರೀಕ್ಷೆ ಪ್ರಹಸನ!
ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸುವ ಮತ್ತು ಎಸ್ಎಸ್ಎಲ್ಸಿ ಪರೀಕ್ಷಾ ಭಯ ಹೋಗಲಾಡಿಸಲು 2022-23ನೇ ಸಾಲಿನಲ್ಲಿ ಮೊದಲ ಬಾರಿಗೆ 5 ಮತ್ತು 8ನೇ ತರಗತಿಯ ತರಗತಿಗಳಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
* ಮುಂದೇನು?
ಕರ್ನಾಟಕದಲ್ಲಿ 2012ರಿಂದ ಆರ್ ಟಿಇ ಜಾರಿಯಲ್ಲಿದೆ. ಆ ಪ್ರಕಾರ, 8ನೇ ತರಗತಿಯವರೆಗೂ ಅನುತ್ತೀರ್ಣ ಎಂಬ ನಿಯಮವನ್ನು ಅನುಷ್ಠಾನಗೊಳಿಸಲಾಗಿದೆ. ಈಗ ಮತ್ತೆ ಅನುತ್ತೀರ್ಣ ನಿಯಮ ಜಾರಿಗೊಳಿಸಲು ರಾಜ್ಯದ ಮಟ್ಟದಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.
* ಎಲ್ಲೆಲ್ಲಿ ಜಾರಿಯಲ್ಲಿದೆ?
2019ರಲ್ಲಿ ಟಿಟಿಐ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಅನುತ್ತೀರ್ಣ ನಿಯಮ ಗುಜರಾತ್, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಸೇರಿದಂತೆ 16 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ.
5, 8ನೇ ತರಗತಿಯಿಂದ ವಾರ್ಷಿಕ ಪರೀಕ್ಷೆ ನಡೆಸಲು ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದು ಮಕ್ಕಳ ಮೇಲೆ ಒತ್ತಡ ತರುವುದು ಅಲ್ಲಿನ ಸರ್ಕಾರದ ವಾದವಾಗಿದೆ.
* ಹೊಸ ನಿಯಮದಲ್ಲಿ ಏನಿದೆ?
ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಮಾಡಲಾಗಿದ್ದು, ಅನುತ್ತೀರ್ಣರಾದವರಿಗೆ 2 ತಿಂಗಳ ತರಬೇತಿ ನಂತರ ಮತ್ತೊಮ್ಮೆ ಪರೀಕ್ಷೆ ಇದೆ ಆಗಲೂ ಅನುತ್ತೀರ್ಣರಾದರೆ ಅದೇ ತರಗತಿ ಗತಿ ಆದರೆ ಮಕ್ಕಳನ್ನು ಶಾಲೆಯಿಂದ ಬಿಡಿಸಲಾಗುತ್ತದೆ.
1 ರಿಂದ 8 ನೇ ತರಗತಿಯವರೆಗೆ ಪುಕ್ಕಟೆ ಪಾಸು, 9 ನೇ ತರಗತಿಯಲ್ಲಿ ಅನುಕಂಪದ ಆಧಾರದಲ್ಲಿ ಪಾಸ್ ಮಾಡಿ 10 ನೇ ತರಗತಿಯಲ್ಲಿ ಮಕ್ಕಳ ಮೇಲೆ ಗದಾಪ್ರಹಾರ ಮಾಡುವುದಕ್ಕೆ ಬದಲಾಗಿ 5 ಮತ್ತು 8 ನೇ ತರಗತಿಯಲ್ಲಿ ಕಲಿಕಾ ಗುಣಮಟ್ಟ ಪರಿಶೀಲಿಸುವುದು ಅಗತ್ಯ.
ಕೂಡಲೇ ರಾಜ್ಯದಲ್ಲೂ ಈ ನಿಯಮವನ್ನು ಅನುಷ್ಠಾನ ಮಾಡಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತೇನೆ ಎಂದು ಡಿ. ಶಶಿಕುಮಾರ್, ಕ್ಯಾಟ್ಸ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.