ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ಶೀಘ್ರ ಫೈನಲ್?!
– ಸಿ.ಟಿ.ರವಿ, ಬಸನಗೌಡ ಪಾಟೀಲ್, ವಿಜಯೇಂದ್ರ, ಅಶ್ವಥ್ನಾರಾಯಣ ನಾಲ್ವರಲ್ಲಿ ಯಾರಿಗೆ ಹುದ್ದೆ?
NAMMUR EXPRESS NEWS
ಬೆಂಗಳೂರು: ಚುನಾವಣೆ ಕಳೆದು ಹೊಸ ಸರ್ಕಾರ ಬಜೆಟ್ ಮಂಡನೆ ಮಾಡಿದರೂ ಇನ್ನೂ ಕೂಡ ಪ್ರತಿ ಪಕ್ಷ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನಾಗಲಿ, ವಿಪಕ್ಷ ನಾಯಕನನ್ನಾಗಲಿ ಆಯ್ಕೆ ಮಾಡಿಲ್ಲ. ಈ ವಿಷಯ ಇದೀಗ ಕರ್ನಾಟಕ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಈ ಎರಡು ಸ್ಥಾನ ತುಂಬಲು ಹೈಕಮಾಂಡ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಅಧ್ಯಕ್ಷರ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಸಿ.ಟಿ.ರವಿ ಹಾಗೂ ಸುನಿಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಇನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಡಿಸಿಎಂ ಡಾ.ಅಶ್ವಥನಾರಾಯಣ ಪೈಕಿ ಯಾರನ್ನಾದ್ರೂ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.
ಸಿ.ಟಿ.ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಯತ್ನಾಳ್ ಗೆ ವಿಪಕ್ಷ ಸ್ಥಾನ ನೀಡಬೇಕು ಎನ್ನುವ ಸಲಹೆಗಳು ರಾಜ್ಯ ನಾಯಕರಿಂದಲೂ ಬಂದಿವೆ. ಜೊತೆಗೆ ಒಕ್ಕಲಿಗ ರಾಜ್ಯಾಧ್ಯಕ್ಷ, ಲಿಂಗಾಯತ ವಿಪಕ್ಷ ನಾಯಕ ಎಂಬ ಜಾತಿಯ ಲೆಕ್ಕಾಚಾರಗಳು ಇಲ್ಲಿ ಕೆಲಸ ಮಾಡಲಿದೆ ಎನ್ನುವ ಚಿಂತನೆಗಳಿವೆ ಎನ್ನಲಾಗಿದೆ. ಆದರೆ ಇಬ್ಬರು ಕೆಲವೊಮ್ಮೆ ಯರ್ರಾಬಿರ್ರಿ ಮಾತನಾಡ್ತಾರೆ ಎಂಬ ಆರೋಪ ಕೂಡ ಇದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023