ಧಾರವಾಡ – ಬೆಂಗಳೂರು ವಂದೇ ಭಾರತ್ ರೈಲು
– ಜೂ.27ರಂದು ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ
– ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚಾರ
NAMMUR EXPRESS NEWS
ಬೆಂಗಳೂರು-ಧಾರವಾಡ ನಡುವೆ ಸಂಚರಿಸಲಿರುವ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲು ಜೂನ್ 27ರಂದು ಚಾಲನೆಗೊಂಡಿದೆ.
ಬೆಂಗಳೂರು-ಧಾರವಾಡ ಮಧ್ಯೆ ಕೇವಲ ಮೂರು ನಿಲುಗಡೆ ಇದ್ದು, ಕನಿಷ್ಠ ಆರು ನಿಲುಗಡೆಗೆ ಅವಕಾಶ ನೀಡಿದರಷ್ಟೇ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.
ಧಾರವಾಡದಿಂದ ಹೊರಡಲಿರುವ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಜೂ.27ರ ಬೆಳಿಗ್ಗೆ 10ಕ್ಕೆ ವಿಡಿಯೊ ಸಂವಾದದ ಮೂಲಕ ಚಾಲನೆ ನೀಡಿದ್ದಾರೆ. ಉದ್ಘಾಟನೆಯ ದಿನದ ವಿಶೇಷವಾಗಿ ಧಾರವಾಡದಿಂದ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತಲುಪುವ ನಡುವೆ 14 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ವಂದೇಭಾರತ್ ಎಕ್ಸ್ಪ್ರೆಸ್ ರೈಲುಗಳು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಅತ್ಯುತ್ತಮ ಸೀಟುಗಳು, ಗುಣಮಟ್ಟದ ಆಹಾರ, ಶುಚಿತ್ವಕ್ಕೆ ಆದ್ಯತೆ, ಲಗೇಜ್ ಇಡಲು ಅನುಕೂಲಕರ ಸ್ಥಳ ಸೇರಿದಂತೆ ಗುಣಮಟ್ಟದ ಸೇವೆ ನೀಡುತ್ತದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023