ಡಿಪ್ಲೋಮಾ, ಪದವೀಧರರಿಗೆ ಶೀಘ್ರದಲ್ಲಿ ಹಣ!
– ಜನವರಿಯಲ್ಲಿ `ಯುವನಿಧಿ’ ಯೋಜನೆ ಜಾರಿ
– ಉದ್ಯೋಗ ಸೃಷ್ಟಿ ಕಡೆಗೂ ಒತ್ತು ನೀಡಲಿ..!
NAMMUR EXPRESS NEWS
ಬೆಂಗಳೂರು : ಡಿಪ್ಲೋಮಾ, ಪದವೀಧರರಿಗೆ 2024 ರ ಜನವರಿಯಲ್ಲಿ `ಯುವನಿಧಿ’ ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರವು ಕೊಟ್ಟ ಭರವಸೆಯಂತೆ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಂದಿನ ವರ್ಷದ ಜನವರಿಯಲ್ಲಿ ಡಿಪ್ಲೋಮಾ, ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಯಾರಿಗೆ ಯೋಜನೆ ಲಾಭ?
2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ, ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
ಉದ್ಯೋಗ ಸೃಷ್ಟಿ ಕಡೆಗೂ ಒತ್ತು ನೀಡಲಿ
ಸರ್ಕಾರ ಉಚಿತವಾಗಿ ಹಣ ಕೊಡುವ ಜತೆಗೆ ಕೌಶಲ್ಯ ಆಧಾರಿತ ಉದ್ಯೋಗ ಸೃಷ್ಟಿ ಮಾಡುವ ನವೋದ್ಯಮಗಳಿಗೆ ಆರ್ಥಿಕತೆ ಮತ್ತು ಇತರೆ ನೆರವು ನೀಡಿದ್ದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ.
ಕರೋನಾ ಬಳಿಕ ಅನೇಕ ಉದ್ಯಮಗಳು ನಷ್ಟದ ಅಂಚಿನಲ್ಲಿವೆ. ನವ ಉದ್ಯಮ ಕಡಿಮೆ ಆಗಿದೆ. ಈ ಬಗ್ಗೆಯೂ ಸರ್ಕಾರಗಳು ಗಮನಿಸಬೇಕಾದ ಅವಶ್ಯಕತೆ ಇದೆ.