ಡಾ.ಬ್ರೋ ಚೀನಾ ಭೇಟಿ ವಿಡಿಯೋ ವಿವಾದ!
– ಚೀನಾದಲ್ಲಿ ಕಲಿಕೆಗೆ ಪ್ರಾಮುಖ್ಯತೆ, ನಮ್ಮಲ್ಲಿ ಜಾತಿ ಧರ್ಮ ಎಂದು ಕಿತ್ತಾಡುವವರೆ ಹೆಚ್ಚು ಎಂದಿದ್ದ ವಿಡಿಯೋ
NAMMUR EXPRESS NEWS
ಖ್ಯಾತ ಯೂಟ್ಯೂಬರ್ ಡಾ.ಬ್ರೋ ಚೀನಾಗೆ ಭೇಟಿ ನೀಡಿದ್ದು, ಅಲ್ಲಿನ ಶಾಲಾ ಮಕ್ಕಳು, ಅಭಿವೃದ್ಧಿ ವಿಚಾರವಾಗಿ ಪ್ರಸ್ತಾಪಿಸುತ್ತಾ, ನಮ್ಮ ದೇಶದ ಬಗ್ಗೆ ಹೋಲಿಕೆ ಮಾಡಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜನಪ್ರಿಯ ಯೂಟ್ಯೂಬರ್ ಡಾ.ಬ್ರೋ ಇತ್ತೀಚೆಗೆ ಚೀನಾಗೆ ಭೇಟಿ ಕೊಟ್ಟಿದ್ದು, ಚೀನಾದ ಮಕ್ಕಳು ಸ್ಕಿಲ್ ಕಲಿಕೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ನಮ್ಮ ದೇಶದ ಮಕ್ಕಳು ಜಾತಿ-ಧರ್ಮ ಅಂತಾ ಕಿತ್ತಾಡ್ತಾರೆ ಎಂದು ಹೇಳಿದ್ದಾರೆ. ಒಂದು ಜನಸಾಮಾನ್ಯರ, ಪಬ್ಲಿಕ್ ಪಾರ್ಕ್ ನ ಸ್ವಚ್ಛತೆ, ಪಬ್ಲಿಕ್ ಎಸಿ ವಾಶ್ ರೂಂ, ಅಲ್ಲಿನ ಅಭಿವೃದ್ಧಿ ಹಾಗೂ ನಮ್ಮ ದೇಶದಲ್ಲಿನ ಅಭಿವೃದ್ಧಿ ವಿಚಾರವಾಗಿಯೂ ಹೋಲಿಕೆ ಮಾಡಿರುವ ಡಾ.ಬ್ರೋ, ಚೈನಾ ಮಕ್ಕಳೆಲ್ಲ ಚಿಕ್ಕಂದಿನಲ್ಲಿಯೇ ಬೇರೆ ಬೇರೆ ಸ್ಕಿಲ್ ಕಲಿಯಲು ಪ್ರಯತ್ನಿಸುತ್ತಾರೆ.
ಆದರೆ ನಮ್ಮ ಮಕ್ಕಳೆಲ್ಲ ಕಾಲೇಜುಗಳಲ್ಲಿ ಜಾತಿ-ಧರ್ಮ ಅಂತ ಕಿತ್ತಾಡ್ತಾರೆ. ಈ ವಿಷಯ ಹೇಳಲು ಮನಸಿಗೆ ತುಂಬಾ ಭಾರವಾಗುತ್ತೆ. ಆದರೂ ಹೇಳುತ್ತಿದ್ದೇನೆ. ಚೈನಾ ಈಗ ಏನು ಅಭಿವೃದ್ಧಿಯಾಗಿದೆ ಈ ಅಭಿವೃದ್ಧಿಯನ್ನು ನಮ್ಮ ಭಾರತ ಕಾಣಲು ಇನ್ನೂ 70 ವರ್ಷ ಬೇಕು. ಅದು ಕೂಡ ನಮ್ಮ ಬಳಿ ಇರುವ ಬಜೆಟ್ ನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಮಾತ್ರ. ಇದರಿಂದಲೇ ನಾವು ಲೆಕ್ಕ ಹಾಕಬಹುದು ಚೈನಾಗಿಂತ ನಾವು ಅಭಿವೃದ್ಧಿಯಲ್ಲಿ ಎಷ್ಟು ಹಿಂದೆ ಉಳಿದಿದ್ದೇವೆ ಎಂದು.
ಚೈನಾದ ಬೀಝಿಂಗ್ ನ ಯಾವುದೋ ಒಂದು ಗಲ್ಲಿ ರಸ್ತೆಯಲ್ಲಿದ್ದೇನೆ.
ಈ ರಸ್ತೆ ಸಿಕ್ಕಾಪಟ್ಟೆ ಅಭಿವೃದ್ಧಿಯಾಗಿದೆ ಎಂಬುದನ್ನು ಇಲ್ಲಿ ನೋಡಬಹುದು. ಚೈನಾ ರಾಜಕೀಯ ಏನೇ ಇರಲಿ, ಚೈನಾ ಬೇರೆ ದೇಶದ ಮೇಲೆ ಏನೇ ಮಾಡಲಿ. ಆದರೆ ಚೈನಾ ತನ್ನ ದೇಶದ ಜನರ ಅಭಿವೃದ್ಧಿ ಮಾಡುವುದರಲ್ಲಿ ತುಂಬಾ ಸಕ್ರಿಯವಾಗಿದೆ. ವೋಟ್ ಗೋಸ್ಕರ ಜಾತಿ ರಾಜಕೀಯ ಮಾಡಿ ಇಲ್ಲಿನ ಜನಗಳ ಮಧ್ಯೆಯೇ ತಂದಿಡುವಂತಹ ಕೆಲಸ ಚೈನಾ ಮಾಡ್ತಾ ಇಲ್ಲ ಎಂದು ಹೇಳುವ ಮೂಲಕ ನಮ್ಮ ದೇಶದ ರಾಜಕೀಯ ನಾಯಕರಿಗೂ ಟಾಂಗ್ ನೀಡಿದ್ದಾರೆ.
ಈ ವಿಡಿಯೋ ನೋಡಿ ಬಹಳ ಜನ ಬೈಯ್ಯಬಹುದು ಆದರೆ ಇದೇ ಸತ್ಯ. ಇದು ನಾನು ನೋಡಿರುವಂತಹ ಸತ್ಯವಾಗಿದೆ ಎಂದು ಡಾ. ಬ್ರೋ ಹೇಳಿದ್ದಾರೆ. ಚೈನಾದಲ್ಲಿ ನಿಂತು ಭಾರತದ ಅಭಿವೃದ್ಧಿ ವಿಚಾರವಾಗಿ ಹೋಲಿಕೆ ಮಾಡಿ ಮಾತನಾಡಿರುವ ಈ ವಿಡಿಯೋ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.