ಟಾಪ್ ಕರ್ನಾಟಕ ನ್ಯೂಸ್
ಝೀಕಾ ವೈರಸ್ಗೆ ಮೊದಲ ಬಲಿ!
– ಶಿವಮೊಗ್ಗದಲ್ಲಿ 73 ವರ್ಷದ ವೃದ್ಧರೊಬ್ಬರ ಸಾವು
– ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ ಇಡಲು ಇಲಾಖೆ ಸೂಚನೆ
ಬೆಂಗಳೂರು ರೇಪ್ ಸಂತ್ರಸ್ತೆ ಮೇಲೆ ಕೇಸ್!
– ಪಬ್ ಹೋಗಿ ಕಾರು ಅಪಘಾತ: ದೂರು ದಾಖಲು
– ಬಳಿಕ ಬೈಕ್ ಡ್ರಾಪ್ ತೆಗೆದುಕೊಳ್ಳುವಾಗ ರೇಪ್ ಯತ್ನ
NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಮಾರಕ ಝೀಕಾ ವೈರಸ್ಗೆ ಮೊದಲ ಬಲಿಯಾಗಿದ್ದು, ಶಿವಮೊಗ್ಗದಲ್ಲಿ ಜೀಕಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಝೀಕಾ ವೈರಸ್ ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾರ್ಬಿಟಿಸ್ ಇದ್ದು, ಜೊತೆಗೆ ಝೀಕಾ ವೈರಸ್ ಅಟ್ಯಾಕ್ ಆಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಇದುವರೆಗೂ ಒಟ್ಟು 9 ಜೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗದಲ್ಲಿ 3, ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6 ಜನರಿಗೆ ಜೀಕಾ ವೈರಸ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಜೀಕಾ ವೈರಸ್ ಪತ್ತೆಯಾದವರಲ್ಲಿ ಒಬ್ಬರು ಗರ್ಭಿಣಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.
ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾ ಇಡಲು ಇಲಾಖೆ ಸೂಚನೆ ನೀಡಿದ್ದು, ರೋಗಿಗಳ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸಲು ತಯಾರಿ ನಡೆಸಲಾಗಿದೆ. ಜಿಗಣಿ ಪ್ರದೇಶದ ಸುತ್ತಮುತ್ತ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ.
ಬೆಂಗಳೂರು ರೇಪ್ ಸಂತ್ರಸ್ತೆ ಮೇಲೆ ಕೇಸ್!
ಸಂತ್ರಸ್ತ ಯುವತಿ ಸ್ನೇಹಿತನ ಜೊತೆ ಕೋರಮಂಗಲದ ಪಬ್ಗೆ ಬಂದಿದ್ದಳು. ಊಟ ಮುಗಿಸಿಕೊಂಡು ಸ್ನೇಹಿತನ ಜೊತೆ ಕಾರಿನಲ್ಲಿ ತೆರಳುವಾಗ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಳು. ಈ ವೇಳೆ ಮಂಗಳ ಜಂಕ್ಷನ್ ಬಳಿ ಆಟೋಗಳಿಗೆ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಒಂದಲ್ಲ ಎರಡಲ್ಲ ಮೂರು ವಾಹನಗಳು ಜಖಂ ಆಗಿವೆ
ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಗೆ ಈಗ ಸಂಕಷ್ಟ ಎದುರಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ವಿರುದ್ಧ ಆಟೋ ಚಾಲಕ ಅಜಾಝ್ ದೂರು ನೀಡಿದ್ದು, ದೂರಿನ ಮೇರೆಗೆ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎರಡು ಆಟೋ ಹಾಗೂ ಒಂದು ಬೈಕ್ಗೆ ಡಿಕ್ಕಿ ಹೊಡೆದು ಕಾರನ್ನೂ ನಿಲ್ಲಿಸದೆ ಫೋರಂ ಮಾಲ್ ಕಡೆ ಯುವತಿ ಕಾರು ಚಲಾಯಿಸಿಕೊಂಡು ಹೋಗಿದ್ದಳು. ತಕ್ಷಣವೇ ಜಖಂ ಆಗಿದ್ದ ಎರಡು ಆಟೋಗಳು ಕಾರನ್ನು ಫಾಲೋ ಆಟೊ ರಿಕ್ಷಾ ರಿಪೇರಿ ಮಾಡಿಕೊಡಿ ಎಂದು ಕೇಳಿದ್ದಾರೆ. ಆಗ ಆಕೆ ಸ್ನೇಹಿತ ಚಾಲಕರ ಜೊತೆ ವಾದ ಮಾಡಿ ಪರಿಸ್ಥಿತಿ ನಿಭಾಯಿಸಿದ್ದ. ಈ ವೇಳೆ ಆಡುಗೋಡಿ ಠಾಣೆಯ ಹೊಯ್ಸಳ ವಾಹನ ಸ್ಥಳಕ್ಕೆ ಬಂದಿತ್ತು. ಪೊಲೀಸರು ಬರ್ತಿದ್ದಂತೆ ಅಲ್ಲಿಂದ ಯುವತಿಯನ್ನ ಸ್ನೇಹಿತ ಕಳಿಸಿದ್ದ. ಮುಂದೆ ಹೋದ ಯುವತಿ ಅಪರಿಚಿತ ವ್ಯಕ್ತಿಯ ಬೈಕ್ನಲ್ಲಿ ಡ್ರಾಪ್ ತೆಗೆದುಕೊಂಡಿದ್ದಳು. ಆದರೆ ಡ್ರಾಪ್ ಕೊಡೊ ನೆಪದಲ್ಲಿ ಯುವತಿ ಮೇಲೆ ಬೈಕ್ ಚಾಲಕ ರೇ್ಗೆ ಯತ್ನಿಸಿದ್ದ. ತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಮುಕೇಶ್ವರನ್ನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ.
ಇದೀಗ ಅಜಾಗರೂಕತೆಯಿಂದ ಡ್ರೈವ್ ಮಾಡಿ ಅಪಘಾತ ಮಾಡಿದ್ದ ಸಂತ್ರಸ್ತೆ ಮೇಲೂ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿಯಾದ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆ ಚೇತರಿಕೆಗೊಳ್ತಿದ್ದಂತೆಯೆ ಕೇಸ್ ಸಂಬಂಧ ಪೊಲೀಸರು ವಿಚಾರಣೆ ನಡೆಸಲಿದ್ದಾರೆ