ಸೇತುವೆಯಿಂದ ನದಿಗೆ ಬೀಳುವಾಗ 50 ಅಡಿ ಪೈಪನ್ನೇ ಹಿಡಿದು ಜೀವ ಉಳಿಸಿಕೊಂಡ ಬಾಲಕಿ!
– ಮಹಿಳೆಯ ಜೊತೆಗೆ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ತಳ್ಳಿದ ಪ್ರಿಯಕರ
– ಸೆಲ್ಫಿ ತೆಗೆಯೋಣ ಎಂದು ನಿಲ್ಲಿಸಿ ತುಂಬಿದ ನದಿಗೆ ದೂಡಿದ!
NAMMUR EXPRESS NEWS
ಗುಂಟೂರು: ಗಂಡನಿಂದ ದೂರವಾದ ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಆ
ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ತಳ್ಳಿ ಸಾಯಿಸುವ ಪ್ಲಾನ್ ಮಾಡಿದ್ದು ಇದೀಗ 13 ವರ್ಷದ ಬಾಲಕಿ ಸೇತುವೆ ಮೇಲಿಂದ ಬೀಳುವಾಗ ಪ್ಲಾಸ್ಟಿಕ್ ಪೈಪ್ ಹಿಡಿದು ಬದುಕಿ ಬಂದಿದ್ದಾಳೆ.
ಪ್ರಿಯಕರನೇ ಮಹಿಳೆ,ಒಂದು ವರ್ಷದ ಮಗು ಹಾಗೂ ಹದಿಮೂರು ವರ್ಷದ ಬಾಲಕಿಯನ್ನು ಉಪಾಯವಾಗಿ ಕರೆದುಕೊಂಡು ಹೋಗಿ ಸೇತುವೆಯಿಂದ ಕೆಳಕ್ಕೆ ತಳ್ಳಿದ ತಳ್ಳಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ತಾಯಿ ಹಾಗೂ ಒಂದು ವರ್ಷದ ಮಗು ನದಿಯ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.
13 ವರ್ಷದ ಬಾಲಕಿ ನದಿಗೆ ಬೀಳುವ ಸಂಧರ್ಭದಲ್ಲಿ ಸೇತುವೆಗೆ ಅಳವಡಿಸಿದ ಪೈಪನ್ನು ಹಿಡಿದು ಕೊಂಡು ಸಾಕಷ್ಟು ಸಮಯ ನೇತಾಡಿ ಪೋಲಿಸರ ಕಾರ್ಯಚರಣೆಯಿಂದ ಬದುಕುಳಿದಿದ್ದಾಳೆ.
ತಾನು ಒಂದು ಕೈಯಲ್ಲಿ ಪೈಪ್ ಹಿಡಿದುಕೊಂಡು ನೇತಾಡುತ್ತಲೆ ಬಾಲಕಿ ಮತ್ತೊಂದು ಕೈಯಿಂದ ತನ್ನ ಜೇಬಿನಲ್ಲಿದ್ದ ಅಮ್ಮನ ಮೊಬೈಲ್ ಅನ್ನು ಹೊರತೆಗೆದುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಕ್ನಿಕ್ ಎಂದು ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಕರೆದುಕೊಂಡು ಹೋಗಿದ್ದ ಸುರೇಶ್, ಹತ್ಯೆಗೆ ಸ್ಕೆಚ್ ಹಾಕಿದ್ದು ಹಗಲು ಎಲ್ಲಾ ಸುತ್ತಾಡಿಸಿ ತಿನ್ನಿಸಿ ಭಾನುವಾರ ಬೆಳಗಿನ ಜಾವ ಹೋಗುವ ಹಾದಿಯಲ್ಲಿ ಗೋದಾವರಿ ನದಿಯ ಸೇತುವೆ ಮೇಲೆ ಕಾರು ನಿಲ್ಲಿಸಿದ್ದಾನೆ. ಸುರೇಶ ನಾವೆಲ್ಲರೂ ಸೆಲ್ಸಿ ಫೋಟೊ ತೆಗೆದುಕೊಳ್ಳೋಣ ಎಂದಿದ್ದಾನೆ. ಕಾರಿನಿಂದ ಇಳಿದ ಸುಹಾನಿಸಿ ಹಾಗೂ ಇಬ್ಬರು ಮಕ್ಕಳನ್ನು ನಿಲ್ಲಿಸಿ ತಾನು ಫೋಟೋ ತೆಗೆಯುವುದಾಗಿ ಹೇಳಿದ್ದಾನೆ. ಸೇತುವೆಯ ಅಂಚಿನಲ್ಲಿ ಮೂವರನ್ನು ನಿಲ್ಲಿಸಿ ನದಿಗೆ ದೂಡಿದ್ದಾನೆ. ಆರೋಪಿ ಸುರೇಶ್ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೋಲಿಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023