ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರದ ಪಲ್ಲಕ್ಕಿ ಬಸ್!
– ಕೆಎಸ್ಆರ್ಟಿಸಿಯ ಪಲ್ಲಕ್ಕಿ ಉತ್ಸವ: 12 ಐಷರಾಮಿ ಬಸ್ ಓಡಾಟ
– ಹೈಟೆಕ್ ಬಸ್ ಅಲ್ಲಿ ಹತ್ತಾರು ವಿಶೇಷತೆಗಳು!
NAMMUR EXPRESS NEWS
ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರದ 12 ಪಲ್ಲಕ್ಕಿ ಬಸ್ಬಂದಿವೆ. ಕೆಎಸ್ಆರ್ಟಿಸಿಯ ಪಲ್ಲಕ್ಕಿ ಉತ್ಸವ ಎಂಬ ಹೆಸರಡಿ 12 ಐಷರಾಮಿ ಬಸ್ ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡಲಿವೆ. ಐರಾವತ, ಅಂಬಾರಿ ರೀತಿಯಲ್ಲೇ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ‘ಪಲ್ಲಕ್ಕಿ ಉತ್ಸವ ಬಸ್ಗಳಿಗೆ ಅಕ್ಟೋಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಕೆಎಸ್ಆರ್ಟಿಸಿ 40 ಬಸ್ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದು, ಇದರಲ್ಲಿ ಮಂಗಳೂರು ವಿಭಾಗಕ್ಕೆ 8 ಮತ್ತು ಪುತ್ತೂರು ವಿಭಾಗಕ್ಕೆ 4 ಬಸ್ಗಳು ಬರಲಿದ್ದು ಹೆಚ್ಚಿನವು ಬೆಂಗಳೂರಿಗೆ ಪ್ರಯಾಣಿಸಲಿವೆ.
ಧರ್ಮಸ್ಥಳ ಮಾರ್ಗಕ್ಕೆ ಸೇವೆ!: ಪುತ್ತೂರು ಮತ್ತು ಧರ್ಮಸ್ಥಳ ಡಿಪೋಗಳಿಗೆ ತಲಾ 2ರಂತೆ ಬಸ್ ಗಳನ್ನು ನೀಡಲಾಗಿದ್ದು ಪುತ್ತೂರು, ಧರ್ಮಸ್ಥಳ ಮತ್ತು ಬೆಳ್ತಂಗಡಿಯಿಂದ ಬೆಂಗಳೂರಿಗೆ ರಾತ್ರಿ ಸಂಚಾರ ನಡೆಸಲಿವೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
9 ಹೊಸ ಸಾಮಾನ್ಯ ಸಾರಿಗೆಯ ಕೆಂಪು ಬಸ್ಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗಕ್ಕೆ ಬರಲಿದ್ದು ಇದರಲ್ಲಿ ಪುತ್ತೂರು, ಬಿ.ಸಿ.ರೋಡ್, ಧರ್ಮಸ್ಥಳ ಮತ್ತು ಮಡಿಕೇರಿ ಡಿಪೋಗಳಿಗೆ ತಲಾ 2 ಮತ್ತು ಸುಳ್ಯಕ್ಕೆ 1 ಬಸ್ ನೀಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಉಚಿತ ಯೋಜನೆ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಸರ್ಕಾರಿ ಬಸ್ ಗಳನ್ನು ಇಳಿಸಲು ಒತ್ತಾಯ ಕೇಳಿಬಂದಿತ್ತು.
ಪಲ್ಲಕ್ಕಿ ಉತ್ಸವ ಬಸ್ ಹೇಗಿರಲಿವೆ?
ಪಲ್ಲಕ್ಕಿ ನಾನ್ ಎ.ಸಿ. ಕ್ಲೀಪರ್ ಬಸ್ ಆಗಿದ್ದು, 30 ಸ್ಲಿಪರ್ ಬರ್ತ್ ಹೊಂದಿದೆ. ಪ್ರತೀ ಸ್ಟೀಪರ್ ನಲ್ಲಿ ಮೊಬೈಲ್ ಹೋಲ್ಡರ್, ಮೊಬೈಲ್ ಚಾರ್ಜರ್, ಪಾದರಕ್ಷೆ ಇಡುವ ವ್ಯವಸ್ಥೆ ಹೊಂದಿದೆ. ಎಮೆರ್ಜೆನಿ ಅಲರ್ಟ್ ವ್ಯವಸ್ಥೆ ಇದೆ. ಆಡಿಯೋ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ಮತ್ತು ಪ್ರಯಾಣಿಕರಿಂದ ಮಾಹಿತಿ ಪಡೆಯುವ ಸೌಕರ್ಯವಿದೆ. ಸೀಟ್ ನಂಬರ್ ಮೇಲೆ ಎಲ್ಇಡಿ ಬೆಳಕು, ಡಿಜಿಟಲ್ ಗಡಿಯಾರ, ಎಲ್ಇಡಿ ಫ್ಲೋರ್ ಮುಂತಾದ ಸವಲತ್ತುಗಳಿವೆ. ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಬ್ಯಾಕ್ ಕ್ಯಾಮೆರಾವೂ ಇದೆ.