10 ಕೆಜಿ ಅಕ್ಕಿ ಕೊಡಲ್ಲಿ 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣಕೊಡುತ್ತೆ ಸರ್ಕಾರ!
– ಏನಿದು ಹೊಸ ನಿಯಮ? ಅಕ್ಕಿ ಸ್ಟಾಕ್ ಇಲ್ಲದಕ್ಕೆ ಹೊಸ ಪ್ಲಾನ್
– 170 ರೂ ಕುಟುಂಬದ ಮುಖ್ಯಸ್ಥನ ಖಾತೆಗೆ
NAMMUR EXPRESS NEWS
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆಯ 5 ಕೆ.ಜಿ ಅಕ್ಕಿ ಕೊಟ್ಟು ಉಳಿದ 5 ಕೆ.ಜಿ ಅಕ್ಕಿಯ ಬದಲು ಅದರ ಹಣವನ್ನು ನೀಡುವುದಾಗಿ ಸರ್ಕಾರ ನಿರ್ಧಾರ ಮಾಡಿದೆ. ಅಕ್ಕಿ ದಾಸ್ತಾನು ಸಿಗದ ಕಾರಣ ಸರ್ಕಾರ ಈ ಹೊಸ ನಿರ್ಧಾರ ಮಾಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಸಚಿವರಾದ ಕೆ.ಹೆಚ್ ಮುನಿಯಪ್ಪ ಹಾಗೂ ಹೆಚ್.ಕೆ ಪಾಟೀಲ್, ಅನ್ನಭಾಗ್ಯ ಯೋಜನೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪ ತಿರಸ್ಕಾರ ಹಾಗೂ ಇತರೆ ರಾಜ್ಯಗಳಿಂದ ಅಕ್ಕಿ ಕೊಳ್ಳುವ ಮುಂದಿನ ನಡೆ ಬಗ್ಗೆ ಸಹ ಚರ್ಚೆ ನಡೆಸಲಾಯಿತು.10 ಕೆ.ಜಿ ಅಕ್ಕಿ ಬದಲಿಗೆ 8 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ/ ಗೋಧಿ ಅಥವಾ ಜೋಳ ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಈ ವೇಳೆ 5 ಕೆ.ಜಿ ಅಕ್ಕಿ ಕೊಟ್ಟು ಇನ್ನೂ 5 ಕೆ.ಜಿ ಅಕ್ಕಿಗೆ ಹಣ ಕೊಡುವುದರ ಬಗ್ಗೆ ನಿರ್ಧಾರ ಮಾಡಲಾಯಿತು ಎಂದಿದ್ದಾರೆ.
ಕೇಂದ್ರದಿಂದ ಅಕ್ಕಿ ಕೊಟ್ಟಿಲ್ಲ!:
ಕೇಂದ್ರ ಸಚಿವರಿಗೆ ಮನವಿ ಮಾಡಿ ಒತ್ತಾಯ ಮಾಡಿದ್ದೆವು. 15 ಲಕ್ಷ ಟನ್ ಅನ್ನು ಓಪನ್ ಟೆಂಡರ್ ಕರೆದು ಕೇಂದ್ರದವರು ಕೊಟ್ಟಿದ್ದಾರೆ. ಆದರೆ ನಮಗೆ ಅಕ್ಕಿ ಕೊಡಲು ನಿರಾಕರಣೆ, ರಾಜಕೀಯ ಮಾಡಿದ್ದಾರೆ. ಎಫ್ ಸಿಐ 34 ರೂ. ದರ ಫಿಕ್ಸ್ ಮಾಡಿದ್ದಾರೆ. ಎಫ್ ಸಿಐ ರೇಟ್ ಗೆ ಬೇರೆ ಸಂಸ್ಥೆಗಳು ಅಕ್ಕಿ ಕೊಡಲು ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ತಯಾರಾಗುವ ತನಕ ಕೆಜಿಗೆ 34 ರೂ. ಹಣವನ್ನ ಕೊಡುತ್ತೇವೆ ಎಂದು ಕೆ.ಹೆಚ್ ಮುನಿಯಪ್ಪ ಹೇಳಿದರು.
ಪ್ರತಿ ಕೆಜಿಗೆ 34 ರೂ ಹಣ ಕೊಡ್ತಾರೆ!
ಪ್ರತಿ ಕಾರ್ಡ್ ಗೆ ಕರ್ನಾಟಕ ಸರ್ಕಾರ ಕೊಡುವ ಅಕ್ಕಿ ಆಧಾರದ ಮೇಲೆ ಕೆ.ಜಿ 34 ರೂ.ಗೆ ಅಕ್ಕಿ ಕೊಡುತ್ತೇವೆ. ಅಕ್ಕಿ ದಾಸ್ತಾನು ಆಗುವ ತನಕ ಹಣ ಕೊಡುತ್ತೇವೆ. ಎಷ್ಟು ಬೇಗ ಅಷ್ಟು ಬೇಗ ಅಕ್ಕಿ ಕೊಡುತ್ತೇವೆ. ಸದ್ಯಕ್ಕೆ ಹಣವನ್ನ ಕೊಡುತ್ತೇವೆ. ಇದಕ್ಕೆ ಈಗ 750 ಕೋಟಿ ಅಥವಾ 800 ಕೋಟಿ ರೂ. ಅಂದಾಜು ಆಗಲಿದೆ. ಹೆಡ್ ಆಫ್ ದಿ ಫ್ಯಾಮಿಲಿ ಸದಸ್ಯರ ಅಕೌಂಟ್ ಗೆ ಹಣ ಹಾಕುತ್ತೇವೆ. 90% ಕಾರ್ಡ್ ಹೊಂದಿರುವವರ ಅಕೌಂಟ್ ಇದೆ, ಆಧಾರ್ ಲಿಂಕ್ ಮಾಡಿದ್ದಾರೆ. ಹಾಗಾಗಿ ಅವರಿಗೆ ಹಣ ಹಾಕುತ್ತೇವೆ ಎಂದು ಸರ್ಕಾರ ಹೇಳಿದೆ.
ಜುಲೈ ಇಂದ ಅಕ್ಕಿ, ಪ್ರತಿ ವ್ಯಕ್ತಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಲು ನಿರ್ಧಾರ ಮಾಡಿದ್ದಾರೆ. 1 ಕೆಜಿ ಅಕ್ಕಿಗೆ 34 ರೂ. ನೀಡಲು ಸಂಪುಟದಲ್ಲಿ ನಿರ್ಧಾರ ಮಾಡಿದ್ದು, ಜುಲೈನಿಂದಲೇ ಫಲಾನುಭವಿಗಳಿಗೆ ಹಣ ನೀಡಲು ನಿರ್ಧಾರ ಮಾಡಿದ್ದಾರೆ.
5 ಕೆಜಿ ಅಕ್ಕಿ ನೀಡುವ ಬದಲು ಹಣ ನೀಡಲು ನಿರ್ಧಾರ ಮಾಡಿದ್ದು, 10 ಕೆಜಿಯಲ್ಲಿ 5 ಕೆಜಿ ಅಕ್ಕಿ ನೀಡಲಿದ್ದಾರೆ. ಇನ್ನುಳಿದ 5 ಕೆಜಿ ಅಕ್ಕಿ ಬದಲು ಹಣ ಕೊಡಲಿದ್ದಾರೆ. ಬಿಪಿಎಲ್ ಕಾರ್ಡ್ದಾರರಿಗೆ ಹಣ ನೀಡುವುದಾಗಿ ನಿರ್ಧಾರ ಮಾಡಿದ್ದಾರೆ.
1 ಕೆಜಿಗೆ 34 ರೂ.ನಂತೆ 5 ಕೆಜಿಗೆ 170 ರೂ. ನೀಡಲಾಗುವುದು, ಕುಟುಂಬದ ಮುಖ್ಯಸ್ಥರಿಗೆ 170 ರೂ. ನೀಡಲಾಗುವುದು. ತಾತ್ಕಾಲಿಕವಾಗಿ ಅಕ್ಕಿ ಬದಲು ಹಣ ನೀಡುತ್ತೇವೆ. ಅಕ್ಕಿ ಸಿಗುತ್ತಿದ್ದಂತೆ ಉಳಿದ 5 ಕೆಜಿ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023