ಗ್ರಾಮ ಪಂಚಾಯಿತಿ ಆಡಳಿತ ಸ್ತಬ್ದ!
– ಗ್ರಾಪಂ ಕಾರ್ಯದರ್ಶಿಗಳು, ನೌಕರರ ಜಿಲ್ಲೆಯಾದ್ಯಂತ ಧರಣಿ
– ಎಲ್ಲಾ ಜಿಲ್ಲೆಗಳಲ್ಲಿ ಧರಣಿ ಮುಂದುವರಿಸುವ ಸಾಧ್ಯತೆ: ಇತರ ಸೇವೆಗಳೂ ಬಂದ್?
NAMMUR EXPRESS NEWS
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಅಗ್ರಹಿಸಿ ರಾಜ್ಯಾದ್ಯಂತ ಪಂಚಾಯತ್ ಅಭಿವೃದ್ಧಿ (ಪಿಡಿಒ), ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಇತರೆ ನೌಕರರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವ ಇವರು, ಎಲ್ಲ ಜಿಲ್ಲೆಗಳಲ್ಲಿ ಧರಣಿ ಮುಂದುವರಿಸಿದ್ದಾರೆ. ಇದರೊಂದಿಗೆ ಇತರ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ.
ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇತರೆ ನೌಕರರು ಧರಣಿ ನಡೆಸಿದ ಕಾರಣ ಪಂಚಾಯಿತಿಗಳು ಎಲ್ಲ ಸೇವೆಗಳಲ್ಲಿ ಧರಣಿ ನಡೆಸುತ್ತಿದ್ದಾರೆ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಸೇವೆಗಳು ಬಂದ್ ಆಗಲಿದೆ.
ಎರಡು ದಿನ ಮಾತ್ರ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಮಟ್ಟದಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಧರಣಿ ಸ್ಥಳಕ್ಕೆ ಹೆಚ್ಚುವರಿ ಕಾರ್ಯದರ್ಶಿ ಉಮಾ ಧವನ್ ಭೇಟಿ ನೀಡಿ ಮನವಿ ಸ್ವೀಕರಿಸಿದ್ದಾರೆ. ಆದರೂ ಧರಣಿ ಮಂದುವರಿಸುವುದಾಗಿ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರಾಜ್ಯಾಭಿವೃದ್ಧಿ ಸಂಘ ನಿರ್ಧರಿಸಿದೆ.
ಅಕ್ಟೋಬರ್ 10ರಂದು ಸಂಘದ ಅಧ್ಯಕ್ಷರ ಜೊತೆ ಸಭೆ ನಡೆಸುವುದಾಗಿ ಸಚಿವ ರಾಂಕ್ ಖರ್ಗೆ ಅವರು ಸಮಯ ನಿಗದಿ ಮಾಡಿದ್ದಾರೆ. ಆದರೆ, ಸರ್ಕಾರದಿಂದ ಬೇಡಿಕೆಗಳ ಬಗ್ಗೆ ಸ್ಪಷ್ಟ ಆದೇಶ ಬರುವತನಕ ಗ್ರಾಮ ಪಂಚಾಯ್ತಿ, ತಾಲ್ಲೂಕು ಕಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಹೋರಾಟ ಎಂದು ಸಂಘದ ಅಧ್ಯಕ್ಷ ರಾಜು ಹೇಳಿದ್ದಾರೆ. ನೌಕರರ ಈ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಸಾಥ್ ನೀಡಿದರು.ಧರಣಿ ನಡೆಸುತ್ತಿರುವ ನ್ಯಾಯಸಮ್ಮತ ರಾಜ್ಯ ಹೋರಾಟವನ್ನು ಬೆಂಬಲಿಸುತ್ತದೆ ಎಂದು ವಿಜಯೇಂದ್ರ ಹೇಳಿದರು.