ಬಿಎಸ್ಎನ್ಎಲ್ ಗ್ರಾಹಕರಿಗೆ ಭಾರೀ ಆಫರ್
– 5ಜಿ ಸೇವೆ ನೀಡಲು ಸಕಲ ಸಿದ್ಧತೆ: ಜಿಯೋಗೆ ಸಡ್ಡು
– ಕೇವಲ 397 ರೂ.ಗೆ 5 ತಿಂಗಳು ಸೌಲಭ್ಯ
NAMMUR EXPRESS NEWS
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೇವಲ 397ರೂ.ಗಳಿಗೆ 5 ತಿಂಗಳ ಅನಿಯಮಿತ ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಘೋಷಿಸಿದೆ.
ಜಿಯೋ, ಏರ್ಟೆಲ್, VI ಟೆಲಿಕಾಂ ಸೇವಾ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಅನಿಯಮಿತ ಕರೆಗಳು, ಡೇಟಾ ಮತ್ತು ಇತರ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದೀಗ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸಡ್ಡು ಹೊಡೆಯಲು ಬಿಎಸ್ಎನ್ಎಲ್ ಮುಂದಾಗಿದೆ. ಇದೇ ಕಾರಣದಿಂದಲೇ ಭರ್ಜರಿ ಆಫರ್ ಘೋಷಣೆ ಮಾಡಿದೆ. ಕೇವಲ 397 ರೂಪಾಯಿಗೆ 150 ದಿನ ಅಂದರೆ 5 ತಿಂಗಳ ವ್ಯಾಲಿಡಿಟಿಯನ್ನು ನೀಡಿದೆ. ಇಷ್ಟೇ ಅಲ್ಲ ಅನಿಯಮಿತ ಕರೆಗಳು ಮತ್ತು ಡೇಟಾ ಆಫರ್ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. BSNL ಘೋಷಿಸಿರುವ ರೂ. 397 ಯೋಜನೆಯಲ್ಲಿ ಹಲವು ವಿಶೇಷತೆಗಳಿವೆ. ಮುಖ್ಯವಾಗಿ, BSNL ಸಿಮ್ ಅನ್ನು ಎರಡನೇ ಸಿಮ್ ಆಗಿ ಬಳಸುತ್ತುವ ಗ್ರಾಹಕರಿಗೆ ಈ ಯೋಜನೆಯನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ರೀಚಾರ್ಜ್ ಮಾಡಿದರೆ, ಗ್ರಾಹಕರು ಮೊದಲ 30 ದಿನಗಳವರೆಗೆ ಅನಿಯಮಿತ ಕರೆಗಳನ್ನು ಪಡೆಯುತ್ತಾರೆ.
ಆರಂಭಿಕ 30 ದಿನಗಳವರೆಗೆ ನೀವು ದಿನಕ್ಕೆ 2 GB ಯಂತೆ 60 GB ಡೇಟಾವನ್ನು ಪಡೆಯುತ್ತೀರಿ. ಆರಂಭಿಕ 30 ದಿನಗಳವರೆಗೆ ದಿನಕ್ಕೆ 100 SMS ಉಚಿತವಾಗಿರುತ್ತದೆ. ದೇಶಾದ್ಯಂತ 150 ದಿನಗಳವರೆಗೆ ರೋಮಿಂಗ್ ಶುಲ್ಕವಿಲ್ಲ. 150 ದಿನಗಳ ಮಾನ್ಯತೆಯಿಂದಾಗಿ, ಒಳಬರುವ ಕರೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಅನಿಯಮಿತ ಕರೆಗಳ ಅವಧಿ ಮುಗಿದ ನಂತರ, ಟಾಪ್-ಅಪ್ ಅನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ.
ಕೇಂದ್ರ ಸರ್ಕಾರ ಭಾರಿ ಹೂಡಿಕೆ ಮಾಡಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟೆಲಿಕಾಂ ಸೇವೆಯನ್ನು ಬದಲಾಯಿಸಿದೆ. ಇದೀಗ 5ಜಿ ಸೇವೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಕೆಲವು ವಿಶೇಷ ಕೊಡುಗೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.