ಜು.7ಕ್ಕೆ ರಾಜ್ಯ ಬಜೆಟ್!
– ಅಧಿವೇಶನ ಜು.3ರಿಂದ ಶುರು: ಗ್ಯಾರಂಟಿ ಗಲಾಟೆ!
– ಜು.14ರವರೆಗೆ ಅಧಿವೇಶನ: ಬಿಜೆಪಿ, ಜೆಡಿಎಸ್ ಸಜ್ಜು
– ಜುಲೈ 7ರಂದು ದಾಖಲೆಯ 14ನೇ ಬಜೆಟ್
– ವಿಧಾನಸೌಧ ಸುತ್ತಮುತ್ತ ಕರ್ಫ್ಯೂ ವಿಧಿಸಿ ಆದೇಶ
NAMMUR EXPRESS NEWS
ಬೆಂಗಳೂರು: ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಶುರುವಾಗಲಿದ್ದು, ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 14ರವರೆಗೂ ಸದನ ಕಲಾಪ ನಡೆಯಲಿದೆ.
ಅಧಿವೇಶನದಲ್ಲಿ ಗ್ಯಾರಂಟಿ ಅಸ್ತ್ರ ಹಿಡಿದು ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ಸಜ್ಜು ಆಗಿದ್ದು ಉತ್ತರ ಕೊಡಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಸದನದಲ್ಲಿ ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆಗಳ ರದ್ದು ಯುದ್ಧ ನಡೆಯಲಿದೆ. ಜುಲೈ 3ರಿಂದ 14ರವರೆಗೆ ಕಲಾಪ ನಡೆಯಲಿದೆ. ಜು.7ಕ್ಕೆ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ.
ನಿಷೇಧಾಜ್ಞೆ ಜಾರಿ:
ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ದಾಖಲೆಯ 14ನೇ ಬಜೆಟ್ ಮಂಡಿಸಲಿದ್ದು, ಬಿಜೆಪಿಯ ವಿವಾದಾತ್ಮಕ ತಿದ್ದುಪಡಿ ಕಾಯ್ದೆಗಳ ರದ್ದತಿ, 5 ಖಾತ್ರಿ ಯೋಜನೆಗಳ ಅನುಷ್ಠಾನದ ಪ್ರತಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.
ವಿವಾದಾತ್ಮಕ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸುವ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸುವ ಸಾಧ್ಯತೆಯಿದೆ. 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 8 ದಿನಗಳ ಕಾಲ ಪ್ರಶ್ನೋತ್ತರ ಅವಧಿ ನಿಗದಿಯಾಗಿದೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಜುಲೈ 3ರಿಂದ 14ರವರೆಗೆ ವಿಧಾನಸೌಧ ಸುತ್ತಮುತ್ತ ಕರ್ಫ್ಯೂ ವಿಧಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. ಜೂನ್ 3 ರಿಂದ 14 ರವರೆಗೆ ವಿಧಾನಸೌಧದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಮೆರವಣಿಗೆ ಮತ್ತು ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರಗಳು, ಕೋಲುಗಳು, ಕತ್ತಿಗಳು, ಈಟಿಗಳು, ಕೈಬಂದೂಕುಗಳು ಅಥವಾ ಯಾವುದೇ ಸ್ಫೋಟಕಗಳು, ಕಲ್ಲುಗಳು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳು ಅಥವಾ ಉಪಕರಣಗಳನ್ನು ಒಯ್ಯುವುದು ಮತ್ತು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ಜುಲೈ 5ರಿಂದ 7ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಜೂನ್ 8 ಮತ್ತು 9ರಂದು ಸರಕಾರಿ ರಜೆ ಇದ್ದು, 10ರಿಂದ 14ರವರೆಗೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023