ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್
– ವಾರ್ಷಿಕ ಮಹಾ ಸಭೆಯಲ್ಲಿ ಈರೇಗೋಡು ಶ್ರೀಧರ್ ಮೂರ್ತಿ
– ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ಧನ, ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್ ಎಂದು ಸೊಸೈಟಿ ಅಧ್ಯಕ್ಷರು, ಹಿರಿಯ ಸಹಕಾರಿಗಳಾದ ಈರೇಗೋಡು ಶ್ರೀಧರ್ ಮೂರ್ತಿ ಹೇಳಿದ್ದಾರೆ.
ತೀರ್ಥಹಳ್ಳಿಯ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ಸಹಕಾರಿ ಹೆಚ್.ಎನ್. ವಿಜಯದೇವ್ರವರ ಮೂಲ ಬಂಡವಾಳದಿಂದ ಆರಂಭಿಕ ಸಾಲ ಪಡೆದು ನಂತರ ಡೆಪಾಸಿಟ್ ಕಲೆಕ್ಷನ್ ಮಾಡಿ ಶೇ. 11 ರ ಬಡ್ಡಿಯಲ್ಲಿ ಸಾಲ ಕೊಡಲು ಪ್ರಾರಂಭಿಸಿದೆವು. ಇದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರ ಬ್ಯಾಂಕ್ ಹಣಕಾಸಿನ ಉತ್ತೇಜನ ನೀಡುತ್ತಾ ಬಂದಿದ್ದು, ಇದೀಗ ನಮ್ಮ ಸೊಸೈಟಿ ಬ್ಯಾಂಕ್ ಆಗುವತ್ತ ಹೆಜ್ಜೆ ಇಟ್ಟಿದೆ. ಎಲ್ಲಾ ಸದಸ್ಯರು, ಷೇರುದಾರರ ಸಹಕಾರಕ್ಕೆ ಧನ್ಯವಾದ ಎಂದರು.
ಈವರೆಗೆ ಸುಮಾರು 5 ಕಟಿ ಸಂಗ್ರಹವಾಗಿದೆಯಲ್ಲದೇ, ಉತ್ತರೋತ್ತರವಾಗಿ ಶೀಘ್ರ ಬ್ಯಾಂಕ್ ಆಗಿ ಪರಿವರ್ತನೆಯಾಗಲಿದೆ ಎಂದರು.
ಸಭೆಯನ್ನುದ್ದೇಶಿಸಿ ನಿರ್ದೇಶಕ ಡಿ. ಲಕ್ಷ್ಮಣ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಉಪಾಧ್ಯಕ್ಷ ಚಿಡುವ ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ವಿಶಾಲ್ ಕುಮಾರ್, ಕೆ.ಎಸ್.ಎನ್. ಮೂರ್ತಿ ಕೈನೆಲ್ಲಿ, ಸುಬ್ರಹ್ಮಣ್ಯ ಹಿರೇಬೈಲು,ಈಶ್ವರ್ ನಾಯ್ಕ್, ದಿನೇಶ್ ಮಂಡಗದ್ದೆ, ಶ್ರೀನಿವಾಸ್ ವಳಗೇರಿ, ಪುಟ್ಟಸ್ವಾಮಿ ಕುಪ್ಪಳಿ, ರೂಪಾ ಉಮೇಶ್, ಅನಿತಾ ಶಾಂತಪ್ಪ ಕಿತ್ತನಗದ್ದೆ ಮತ್ತಿತರರಿದ್ದರು. ಸಂಘದ ಸಿಬ್ಬಂದಿಗಳಾದ ಶ್ರೀಮತಿ ಸೌಖ್ಯ, ಕು.ಮಮತ, ಅವಿನಾಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರೋತ್ಸಾಹ ಧನ
ಈಡಿಗ ಸಮಾಜದ ಜತೆಗೆ ಷೇರುದಾರರ ಮಕ್ಕಳು ಪಿಯುಸಿ ಹಾಗೂ ಎಸ್ ಎಸ್ ಎಸ್ ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.