ಹಾಸನ: ತಂದೆ ತಾಯಿಯನ್ನೇ ವಿಷ ಹಾಕಿ ಕೊಂದ ಮಗ!
ಮೈಸೂರು: ತಂದೆ-ತಾಯಿ ಸೇರಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ: ಕೊಲೆಯೋ.. ಆತ್ಮಹತ್ಯೆಯೋ?
– ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿ “ಕೊರಗಜ್ಜ ಕೊರಗಜ್ಜ” ಎಂದು ಹುಚ್ಚನಂತೆ ಅಲೆದಾಡಲಿ..!
– ತುಮಕೂರು: ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು!
NAMMUR EXPRESS NEWS
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಿಸಿಲಹಳ್ಳಿಯಲ್ಲಿ ಪುತ್ರನೇ ತಂದೆ ತಾಯಿಗೆ ವಿಷಹಾಕಿ ಕೊಂದ ಘಟನೆ ನಡೆದಿದೆ. ಆಗಸ್ಟ್ 23ರಂದು ತಂದೆ ನಂಜುಂಡಪ್ಪ ತಾಯಿ ಉಮಾ ಮೃತಪಟ್ಟಿದ್ದರು. ಕಲುಷಿತ ಅಹಾರ ಸೇವಿಸಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಮಗನೆ ತಿಂಡಿಯಲ್ಲಿ ಕಳೆನಾಶಕ ಔಷಧ ಬೆರೆಸಿ ತಂದೆ ತಾಯಿಯನ್ನು ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆ ವೇಳೆ ಬಯಲಾಗಿದೆ. ಮಗ ಮಂಜುನಾಥ್ ವಿಧವೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದಕ್ಕೆ ಮಂಜುನಾಥ್ ಅವರ ತಾಯಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಸಹಕಾರ ಸಂಘಗಳಲ್ಲಿ ತಾಯಿ ಪಡೆದಿದ್ದ ಸಾಲದ ಹಣವನ್ನು ಕೂಡ ಮಂಜುನಾಥ್ ದುರುಪಯೋಗ ಮಾಡಿಕೊಂಡಿದ್ದ.
ಅಕ್ರಮ ಸಂಬಂಧಕ್ಕೆ ವಿರೋಧಿಸಿದ್ದ ತಾಯಿಯ ಹತ್ತಿರ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಇದನ್ನು ವಿರೋಧಿಸಿದಕ್ಕೆ ಕೋಪಗೊಂಡು ತಾಯಿಯ ಹತ್ಯೆಗೆ ಸ್ಕೆಚ್ ಹಾಕಿದ್ದ. ಆಗಸ್ಟ್ 15ರಂದು ಮನೆಯಲ್ಲಿ ಬೆಳಗ್ಗೆ ತಾಯಿ ಉಮಾ ಪಲಾವ್ ಮಾಡಿದ್ದರು. ತಂದೆ ತಾಯಿಗಿಂತ ಮೊದಲೇ ಮಂಜುನಾಥ ತಿಂಡಿ ತಿಂದಿದ್ದ. ನಂತರ ಪಲಾವ್ ಗೆ ಕಳೆ ನಾಶಕ ಔಷಧ ಬೆರೆಸಿದ್ದ. ತಂದೆ, ತಾಯಿ ತಿಂಡಿ ತಿಂದ ಬಳಿಕ ಔಷಧಿ ವಾಸನೆ ಬರುತ್ತಿದೆ ಎಂದಿದ್ದ. ಈ ವೇಳೆ ವಾಂತಿ ಮಾಡಿ ನಾಟಕವಾಡಿದ್ದ.
ಆಗಸ್ಟ್ 15 ರಂದು ಮನೆಯಲ್ಲಿ ತಿಂಡಿ ಮಾಡಿದ ಬಳಿಕ ದಂಪತಿ ಅಸ್ವಸ್ಥರಾಗಿದ್ದರು. ಆಗಸ್ಟ್ 23ರಂದು ಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ತಂದೆ, ತಾಯಿ ಏಕಾಏಕಿ ಸಾವನ್ನಪ್ಪಿದ್ದರು. ಸಾವಿನ ಬಗ್ಗೆ ಕಿರಿಯ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಈ ವೇಳೆ ಎರಡನೇ ಪುತ್ರ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಕೊಲೆ ಮಾಡಿರೋ ವಿಷಯ ಬಾಯಿ ಬಿಟ್ಟಿದ್ದಾನೆ.
ತಂದೆ-ತಾಯಿ ಸೇರಿ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ
ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ಮೃತರು ಮಹದೇವಸ್ವಾಮಿ (48), ಅನಿತಾ (35), ಪುತ್ರಿಯರಾದ ಚಂದ್ರಕಲಾ (17), ಧನಲಕ್ಷ್ಮೀ (15) ಎಂದು ತಿಳಿದುಬಂದಿದೆ.
ಮೃತರು ಗಂಡ, ಹೆಂಡತಿ, ಇಬ್ಬರು ಹೆಣ್ಣು ಮಕ್ಕಳಾಗಿದ್ದಾರೆ. ಮನೆಯೊಂದರಲ್ಲಿ ಒಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಉಳಿದ ಮೂರು ಶವಗಳು ಮನೆಯಲ್ಲಿ ಪತ್ತೆಯಾಗಿದೆ. ದೊಡ್ಡ ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿತಾ ಮೃತದೇಹ ಕುರ್ಚಿ ಮೇಲೆ, ಚಿಕ್ಕ ಮಗಳು ಕೊಠಡಿಯಲ್ಲಿ ಮತ್ತು ಮಹದೇವ ಸ್ವಾಮಿ ಶವ ಹಾಲ್ನಲ್ಲಿ ಪತ್ತೆಯಾಗಿದೆ. ಮೃತ ಮಹದೇವಸ್ವಾಮಿ ಆರ್ಎಂಸಿಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿ “ಕೊರಗಜ್ಜ ಕೊರಗಜ್ಜ” ಎಂದು ಹುಚ್ಚನಂತೆ ಅಲೆದಾಡಲಿ!
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಕೊರಗಜ್ಜ ಕೊರಗಜ್ಜ ಎಂದು ರಸ್ತೆಯಲ್ಲಿ ಹುಚ್ಚನಂತೆ ಅಲೆದಾಡಲಿ ಅಂತ ಪ್ರಾರ್ಥಿಸಿ ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಉರುಳು ಸೇವೆಯ ಮೂಲಕ ಪೂಜೆ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಂದ ವಿಶೇಷ ಉರುಳು ಸೇವೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಕೊರಗಜ್ಜ ದೈವಸ್ಥಾನದಲ್ಲಿ ಇಂದು ನಡೆಯಿತು. ಮೊದಲು ಪ್ರಾರ್ಥನೆ ಸಲ್ಲಿಸಿದ ನಿತ್ಯಾನಂದ ಒಳಕಾಡು, ಬಳಿಕ ಸೌಜನ್ಯಾಳ ಭಾವ ಚಿತ್ರ ಹಿಡಿದು ಉರುಳು ಸೇವೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೌಜನ್ಯಾಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಪ್ರತಿಭಟನೆಗಳು ನಡೀತಾ ಇದ್ರು. ಸರ್ಕಾರ ಈ ಬಗ್ಗೆ ಮೌನ ವಹಿಸಿದೆ. ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿಗೆ ಕೊರಗಜ್ಜನೇ ಶಿಕ್ಷೆ ಕೊಡಬೇಕು ಇದಕ್ಕಾಗಿ ಉರುಳು ಸೇವೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದೇನೆ. ಆರೋಪಿ ಯಾರೆಂಬುದು ಪತ್ತೆ ಆಗಬೇಕು, ಆರೋಪಿಯೇ ಮುಂದೆ ಬಂದು ತಪೊಪ್ಪಿಕೊಳ್ಳಬೇಕು. ಇಲ್ಲವಾದರೆ ಕೊರಗಜ್ಜ ಕೊರಗಜ್ಜ ಎಂದು ಹುಚ್ಚನಂತೆ ತಿರುಗಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು!
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ ತಾಳಿ ಕಟ್ಟೋ ವೇಳೆ ವಧು ಹಸೆಮಣೆಯಿಂದ ಎದ್ದು, ಮದುವೆ ಬೇಡವೆಂದು ಮಂಟಪದಿಂದ ಹೊರ ನಡೆದಿದ್ದಾಳೆ. ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. ದಿವ್ಯಾ ಬೇರೆ ಹುಡುಗನನ್ನ ಪ್ರೀತಿಸುತ್ತಿದ್ದೇನೆ ಹೀಗಾಗಿ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡಿಕೊಂಡಿದ್ದು, ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ನನ್ ಹಾಲ್ ನಲ್ಲಿ ಮದುವೆ ನಡೆಯುತ್ತಿತ್ತು. ದಿವ್ಯಾ ರಾತ್ರಿ ರಿಸೆಪ್ಪನ್ ನಲ್ಲಿ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದರು, ವೆಂಕಟೇಶ್ ಎಂಬುವವರ ಜೊತೆ ಮದುವೆ ನಡೆಯುತ್ತಿತ್ತು. ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದಿದ್ದಾಳೆ.
ಕುಕ್ಕರ್ನಿಂದ ತಲೆಗೆ ಹೊಡೆದು ಪ್ರಿಯತಮೆ ಹತ್ಯೆಗೈದ ಪ್ರಿಯಕರ
ಬೆಂಗಳೂರಲ್ಲಿ ಪ್ರೇಮಿಯಿಂದಲೇ ಪ್ರಿಯತಮೆಯ ಹತ್ಯೆ ನಡೆದಿದೆ. ಕುಕ್ಕರ್ನಿಂದ ತಲೆಗೆ ಹೊಡೆದು ಪ್ರಿಯತಮೆಯನ್ನು ಕೊಲೆ ಮಾಡಿದ್ದು, ಲಿವಿಂಗ್ ಟುಗೆದರ್ ನಲ್ಲಿದ ದೇವಿ ಎಂಬ ಯುವತಿಯನ್ನು ಯುವಕ ಹತ್ಯೆಗೈದಿದ್ದಾನೆ. ದೇವಿಯನ್ನ ಹತ್ಯೆಗೈದ ಯುವಕ ವೈಷ್ಣವ್ ಆರೋಪಿಯಾಗಿದ್ದು ಬೇಗೂರಿನ ನ್ಯೂ ಮೈಕೋ ಲೇಔಟ್ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಕೇರಳ ಮೂಲದ ಇಬ್ಬರು ಲಿವಿಂಗ್ ಟುಗೆದರ್ನಲ್ಲಿದ್ರು, ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ಮಾಡ್ತಿದ್ರು. 3 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.