ಆರಗ ವಿರುದ್ಧ ಗುಡುಗಿದ ಕಿಮ್ಮನೆ!
– ಶಾಸಕ ಸ್ಥಾನ ರದ್ದು ಮಾಡಬೇಕು, ಜ್ಞಾನೇಂದ್ರ ಅವರು ಆಸ್ಪತ್ರೆಗೆ ಸೇರಬೇಕು
– ಖರ್ಗೆ ಅವಮಾನ ಮಾಡಿದರೂ ಬಿಜೆಪಿ ನಾಯಕರು ಏಕೆ ಮಾತನಾಡಲಿಲ್ಲ
– ಜನರಿಗೆ ಮಂಗ ಮಾಡಲು ಆರಗ ಹೋರಾಟ: ಕಿಮ್ಮನೆ
NAMMUR EXPRESS NEWS
ಬೆಂಗಳೂರು: ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖರ್ಗೆ ಇವರ ವಿರುದ್ಧ ಜಾತಿ, ವರ್ಣಭೇದ ಹಾಗೂ ವೈಯಕ್ತಿಕ ನಿಂದನೆ ಮಾಡಿರುವ ಅರಗ ಜ್ಞಾನೇಂದ್ರ ವಿರುದ್ಧ ಸಂವಿಧಾನ ಬದ್ದ ಕಾನೂನು ಜರಗಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಧ್ಯಮಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಇಂತಹ ಅಜ್ಞಾನದ ಹೇಳಿಕೆ ನೀಡುತ್ತಿರುವ ಜ್ಞಾನೇಂದ್ರ ಅವರು ಆಸ್ಪತ್ರೆಗೆ ಸೇರಬೇಕು. ಖರ್ಗೆ ಅವಮಾನ ಬಿಜೆಪಿ ನಾಯಕರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಆರಗ ಜ್ಞಾನೇಂದ್ರ ಅವರು 25 ವರ್ಷ ರಾಜಕಾರಣದಲ್ಲಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಸಂವಿಧಾನವನ್ನು ಬದಲು ಮಾಡೇ ಮಾಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದ್ದರು. ಅವರು ನಮಗೆ ಮುಸ್ಲಿಂ ಅವರು ವೋಟ್ ಕೊಡುವುದು ಬೇಡ ಎನ್ನುವ ಸಂವಿಧಾನ ವಿರೋಧ ಹೇಳಿಕೆಯನ್ನು ನೀಡಿದ್ದರು. ಇದೀಗ ಖರ್ಗೆ ಅವರ ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಅವರ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಕಿಮ್ಮನೆ ಒತ್ತಾಯಿಸಿದರು.
ಕಾರಣ ಇಲ್ಲದೆ ಮೋದಿ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ರಾಹುಲ್ ಗಾಂಧಿಗೆ ಸದಸ್ಯತ್ವವನ್ನು ಆರು ವರ್ಷ ಇಲ್ಲದಿರುವಂತೆ ಮಾಡಬೇಕು ಎನ್ನುವಂತಹ ಆದೇಶ ಏನು ಮಾಡಿದಾರೆ ಅದನ್ನು ಮೋದಿ ಸಮರ್ಥನೆ ಮಾಡುತ್ತಿದ್ದಾರೆ. ಇವರು ಖರ್ಗೆ ಅವರ ಬಗ್ಗೆ ಮತ್ತು ಈಶ್ವರ್ ಅವರ ಬಗ್ಗೆ ಮಾತನಾಡಿರುವಂತಹ ಮಾತನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಜ್ಞಾನೇಂದ್ರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. 6 ವರ್ಷ ಅವರ ಅಧಿಕಾರ ರದ್ದು ಪಡಿಸಬೇಕು ಎಂದರು.
ಮತದಾರರ ಮಂಗ ಮಾಡುತ್ತಿರುವ ಜ್ಞಾನೇಂದ್ರ!
ನಾನು ಜ್ಞಾನೇಂದ್ರ ಅವರಿಗೆ ಹೇಳುವುದು ಒಂದೇ ಕಸ್ತೂರಿ ರಂಗನ್ ವರದಿಯನ್ನು ನೀವು ಒಪ್ಪಿಕೊಂಡಿದ್ದೀರಿ. ರಾಷ್ಟ್ರಮಟ್ಟದಲ್ಲಿ ಅದಕ್ಕೆ ನೀವು ಒಪ್ಪಿಗೆ ಕೊಟ್ಟಿದ್ದೀರಿ. ಇಲ್ಲಿ ಮತದಾರರನ್ನು ಮಂಗ ಮಾಡಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ವಿರೋಧ ಮಾಡುವುದು ಇದ್ದರೆ ಮೋದಿ ಗೌರ್ಮೆಂಟ್ಗೆ ವಿರೋಧ ಮಾಡಬೇಕು, ನೀವು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಅದನ್ನು ಬಿಟ್ಟು ತೀರ್ಥಹಳ್ಳಿಯಲ್ಲಿ ಬಂದು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದು ಅಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅವರ ಸದಸ್ಯತ್ವವನ್ನು ರದ್ದು ಮಾಡಬೇಕು ವಿಧಾನಸಭಾ ಸ್ಪೀಕರ್ ಅವರಿಗೂ ಅರ್ಜಿ ಕೊಡುತ್ತೇವೆ, ಕೋರ್ಟ್ ನಲ್ಲಿ ಕೂಡ ಮಾಡುತ್ತೇವೆ. ಈ ರೀತಿ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.
ದೇಶದಲ್ಲಿರುವ ಎಲ್ಲಾ ಜಾತಿಯ ಜನ ಎಲ್ಲ ಧರ್ಮದ ಜನರನ್ನು ಒಟ್ಟಿಗೆ ತೆಗೆದುಕೊಳ್ಳಬೇಕು ಎನ್ನುವ ಮನೋಭಾವ ಇರಬೇಕು. ಯಾವುದೇ ಕಾರಣಕ್ಕೂ ಜಾತಿ ಅಥವಾ ಧರ್ಮವನ್ನು ದ್ವೇಷ ಮಾಡುವಂತಹ ಗುಣಗಳನ್ನು ನಾವು ಹೊಂದಿರಬಾರದು. ಎಲ್ಲರೂ ಒಂದಾಗಿ ಇರಬೇಕು ಇದಕ್ಕೆ ವಿರುದ್ಧವಾದ ಮನಸ್ಥಿತಿ ಬಿಜೆಪಿಯವರದು ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ನಾಯಕರಾದ ರಾಘವೇಂದ್ರ ಮುಡುಬ, ಅಮರನಾಥ ಶೆಟ್ಟಿ ಇದ್ದರು.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023