ಸ್ವಾತಂತ್ರ್ಯ ದಿನವೇ ಮರಾಠಿ ಭಾಷಿಕ ಪುಂಡರ ಕಿರಿಕ್!
– ತ್ರಿವರ್ಣ ಧ್ವಜದ ಪಕ್ಕ ಭಗವಾ ಧ್ವಜ ಹಾರಿಸಲು ಯತ್ನ
– ಬೆಳಗಾವಿಯ ನಿಪ್ಪಾಣಿಯಲ್ಲಿ ನಡೆದ ಘಟನೆ
– ಮೈಸೂರಲ್ಲಿ ಸುಸ್ತಾಗಿ ಭಾಷಣ ನಿಲ್ಲಿಸಿದ ಸಚಿವ!
NAMMUR EXPRESS NEWS
ನಾಡಿನ ಎಲ್ಲೆಡೆ ನಾಡಿನಾಧ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಡುವೆ ಸ್ವಾತಂತ್ರ್ಯೋತ್ಸವ ದಿನದಂದು ಮರಾಠಿ ಭಾಷಿಕ ಪುಂಡರು ಕಿರಿಕ್ ತೆಗೆದಿದ್ದಾರೆ.ತ್ರಿವರ್ಣ ಧ್ವಜದ ಪಕ್ಕದಲ್ಲೇ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದು, ಇದನ್ನು ಪೊಲೀಸರು ತಡೆದಿದ್ದಾರೆ.ಚಿಕ್ಕೋಡಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ದಿನದಂದು ಮರಾಠಿ ಭಾಷಿಕ ಪುಂಡರು ಕಿರಿಕ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದಾರೆ. ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸ್ಥಳೀಯ ಅಧಿಕಾರಿಗಳಿಂದ ಧ್ವಜಾರೋಹಣದ ಬಳಿಕ ಈ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಬಳಿಕ. ಅದರ ಪಕ್ಕದಲ್ಲೇ ಮರಾಠಿ ಭಾಷಿಕ ನಿಪ್ಪಾಣಿ ನಗರಸಭಾ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ ಸಾಂಗಾವಕರ್ ಅವರು ಭಗವಾ ಧ್ವಜ ಹಾರಿಸಲು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಅದನ್ನು ತಡೆದಿದ್ದು, ಧ್ವಜ ಹಾರಿಸಲು ಬಂದವರನ್ನ ತಡೆದು ತರಾಟೆಗೆ ತೆಗೆದುಕೊಂಡರು. ಈ ಇಬ್ಬರು ಎನ್.ಸಿ.ಪಿ. ಬೆಂಬಲಿತ ನಿಪ್ಪಾಣಿ ನಗರಸಭೆ ಸದಸ್ಯರು ಎಂದು ಹೇಳಲಾಗಿದೆ.
ಬಿಸಿಲಿನ ಝಳಕ್ಕೆ ಸಚಿವರು ಸುಸ್ತು!
ಮೈಸೂರಿನಲ್ಲಿ ಬನ್ನಿ ಮಂಟಪದಲ್ಲಿ ನಡೆದ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಮೈಸೂರು ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ ಸುಸ್ತಾಗಿ ಭಾಷಣ ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ. ಬಳಿಕ ಸುಸ್ತು ನಿವಾರಿಸಿಕೊಂಡು ಕಾರ್ಯಕ್ರಮ ಮುಂದುವರಿಸಿದರು.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023