ಟಾಪ್ ನ್ಯೂಸ್… ನಮ್ಮೂರ್ ಎಕ್ಸ್ ಪ್ರೆಸ್
– ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ
– ಶಿವಮೊಗ್ಗದಲ್ಲಿ ಬಾಲಕಿ ಮದುವೆ ತಡೆದ ಅಧಿಕಾರಿಗಳು
– ಯುವತಿ ನಗ್ನ ವಿಡಿಯೋ: ದೂರು ದಾಖಲು
– ಕಳಸದಲ್ಲಿ ಮಳೆಗೆ 2 ಗಂಟೆ ಟ್ರಾಫಿಕ್ ಜಾಮ್
– ಹಂಪಿಯಲ್ಲಿ ರಸ್ತೆಯಲ್ಲೇ ಸಿಲಿಂಡರ್ ಸ್ಫೋಟ!
NAMMUR EXPRESS NEWS
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲು ತೂರಲಾಗಿದೆ.
ಬಾಲಕಿಗೆ ಮದುವೆ ವೇಳೆ ಅಧಿಕಾರಿಗಳ ದಾಳಿ!
ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ದೇವಸ್ಥಾನವೊಂದರಲ್ಲಿ ನಡೆದ ಬಾಲ್ಯ ವಿವಾಹವನ್ನು ತಡೆದಿದ್ದಾರೆ. ತಮಿಳುನಾಡು ಮೂಲದವರು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಲು ತಯಾರಿ ಮಾಡಿದ್ದರು. ಅಲ್ಲದೆ ಬಂದ್ ಆಗಿದ್ದ ದೇವಾಲಯದ ಮುಂದೆ ಹಾರ ಬದಲಾಯಿಸಿದ್ದರು. ಅಷ್ಟೊತ್ತಿಗೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದಾವಿಸಿದ್ಧಾರೆ. ಅಲ್ಲದೆ ಬಾಲಕಿಯನ್ನು ಸುರಬಿ ಕೇಂದ್ರಕ್ಕೆ ರವಾನಿಸಿ, 8 ಮಂದಿಯ ವಿರುದ್ದ ಕೇಸ್ ದಾಖಲಿಸಿದ್ಧಾರೆ.
ಯುವತಿಯ ನಗ್ನ ವಿಡಿಯೋ: ಕೇಸ್
ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಯುವತಿ ಉಳಿದುಕೊಂಡಿದ್ದ ಮನೆಯವರು, ಆಕೆಯ ನಗ್ನ ವಿಡಿಯೋವನ್ನು ತೆಗೆದು ಬೆದರಿಕೆ ಹಾಕಿರುವ ಬಗ್ಗೆ ಕೋಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ. ಅಲ್ಲದೆ ಈ ಸಂಬಂಧ ಪ್ರಶ್ನಿಸಿ ವಿಚಾರಿಸಿದ್ದಕ್ಕೆ ಯುವತಿ ಕಡೆಯವರ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ.
ಕಳಸದಲ್ಲಿ ವಾಹನ ಅಪಘಾತ!
ಭಾರೀ ಗಾಳಿ-ಮಳೆ ಹಿನ್ನೆಲೆ ಬೃಹತ್ ಗಾತ್ರದ ಬೀಟೆ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆದ ಘಟನೆ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ನಡೆದಿದೆ.
ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಮರ ತೆರವುಗೊಳಿಸಿದ ಗ್ರಾಮಸ್ಥರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು
ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆಗುರುಳಿದ ಘಟನೆ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಎಂ.ಸ್ಯಾಂಡ್ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮಗುಚಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಸ್ತೆ ಮಧ್ಯ ಸಿಲಿಂಡರ್ ಸ್ಫೋಟ!
ಹಂಪಿಯಲ್ಲಿ ಜಿ-20 ಶೃಂಗಸಭೆ ಸಿದ್ದತಾ ಕಾಮಗಾರಿ ಭಾಗವಾಗಿ ತಾಲೂಕಿನ ಕಡ್ಡಿರಾಂಪುರ ಹೊರವಲಯದಲ್ಲಿ ಮಂಗಳವಾರ ರಸ್ತೆಗೆ ಬಿಳಿ ಪಟ್ಟಿ ಬಳಿಯುವಾಗ ಸಿಲಿಂಡರ್ ಬಿಸಿಯಾಗಿ ಸ್ಫೋಟಗೊಂಡಿದ್ದು, ಬಣ್ಣ ತುಂಬಿದ್ದ ವಾಹನ ಹೊತ್ತಿ ಉರಿದು ಭಸ್ಮವಾಗಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಹಂಪಿಯಲ್ಲಿ ಜುಲೈ ಎರಡನೇ ವಾರ ಜಿ-20 ಶೃಂಗಸಭೆ ನಿಗದಿಯಾಗಿದೆ. ವಿವಿಧ ದೇಶಗಳ ಪ್ರತಿನಿಧಿಗಳು
ಆಗಮಿಸಲಿರುವ ಸಂಪರ್ಕಿಸುವ ಹಿನ್ನೆಲೆ ಹಂಪಿ ರಸ್ತೆಗಳ ಮರು ಡಾಂಬರೀಕರಣ ಮತ್ತು ದುರಸ್ತಿ ಭರದಿಂದ ನಡೆದಿದೆ. ರಸ್ತೆ ಬದಿ ಬಿಳಿ ಪಟ್ಟಿ ಬಳಿಯುವ ವೇಳೆ ಸಿಲಿಂಡರ್ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಫೋಟದ ಶಬ್ದ ಕೇಳುತ್ತಿದ್ದಂತೆ ವಾಹನದ ಚಾಲಕ ಇಳಿದು ದೂರಕ್ಕೆ ತೆರಳಿದ್ದರಿಂದ ಅಪಾಯದಿಂದ ಪಾರಾದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಹಂಪಿ ಪೊಲೀಸರು ಸ್ಥಳಕ್ಕೆ ಹಂಪಿಯಲ್ಲಿ ಮಂಗಳವಾರ ಸಿಲಿಂಡರ್ ಸ್ಫೋಟದಿಂದ ವಾಹನಕ್ಕೆ ತಗುಲಿದ್ದ ಬೆಂಕಿಯನ್ನು ಅಗ್ನಿಶಾವ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023