ಸಾಮಾಜಿಕ ಜಾಲತಾಣದಲ್ಲಿ ಹಿಂದು ದೇವರು,ದೇವಾಲಯಗಳ ಬಗ್ಗೆ ಅಶ್ಲೀಲ ಬರಹ: ಬೆಂಗಳೂರು,ಕಳಸದಲ್ಲಿ ಕೇಸ್!
– ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಉದ್ದೇಶ ಸೂಕ್ತ ಕ್ರಮಕ್ಕೆ ಆಗ್ರಹ
– ಶೃಂಗೇರಿ, ಹೊರನಾಡು ದೇವಾಲಯದ ಬಗ್ಗೆ ಅವಹೇಳನ
NAMMUR EXPRESS NEWS
ಬೆಂಗಳೂರು/ಕಳಸ: ಸಾಮಾಜಿಕ ಜಾಲತಾಣ ಫೇಸ್ಟುಕ್ನಲ್ಲಿ ಶೃಂಗೇರಿ ಶಾರದೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಹಾಗೂ ದೇವಸ್ಥಾನದ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಭಕ್ತರು ಒತ್ತಾಯಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಿಂದೂ ದೇವಾಲಯಗಳ ಬಗ್ಗೆ ಅಂಜುಮ್ ಶೇಖ್ ಹೆಸರಿನಲ್ಲಿ ಜಾಲತಾಣಗಳಲ್ಲಿ ಪೋಸ್ಟರ್ ಹರಿಬಿಡಲಾಗಿದ್ದು, ಇದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಗಂಭೀರ ಅಪರಾಧವಾಗಿರುತ್ತದೆ. ಫೆಸ್ಟುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಅಶ್ಲೀಲ ಮತ್ತು ಅಸಹ್ಯಕರ ಸಂದೇಶವನ್ನು ನಕಲಿ ಖಾತೆ ಸೃಷ್ಟಿಸಿ ಮಾಡಲಾಗಿದೆಯೇ ಅಥವಾ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ, ಇಂತಹ ನೀಚ ಕೆಲಸ ಮಾಡಿರುವ ವ್ಯಕ್ತಿಯೂ ಯಾವುದೇ ಧರ್ಮಕ್ಕೆ ಸೇರಿದವನಾಗಿದ್ದರೂ ಸರಿ ಅಂತಹವರನ್ನು ಕಂಡು ಹಿಡಿದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಇದು ಹಿಂದೂ ಮತ್ತು ಮುಸ್ಲಿಂಮರ ನಡುವೆ ಕೋಮುದ್ವೇಷವನ್ನು ಹಚ್ಚು ಹಾಕುವ ಉದ್ದೇಶದಿಂದ, ಎರಡು ಪಂಗಡಗಳ ನಡುವೆ ದ್ವೇಷ ಸೃಷ್ಠಿ ಮಾಡುವ ಕಾರಣದಿಂದ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಹೀಗಾಗಿ ಈ ಕೃತ್ಯದ ಹಿಂದೆ ಯಾರೇ ಇದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಭಕ್ತರು ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.