ಟಾಪ್ ಕರ್ನಾಟಕ ನ್ಯೂಸ್
ನಡು ರಸ್ತೆಯಲ್ಲಿ ಜನ ಬಿದ್ದು ಸಾಯ್ತಾರೆ!
– ಕೋಡಿಮಠದ ಸ್ವಾಮೀಜಿ ಶಾಕಿಂಗ್ ಭವಿಷ್ಯ
ಮಂಡ್ಯ: 60ರ ಅರ್ಚಕನಿಗೆ 20ರ ಯುವತಿ ಚಾಟಿಂಗ್: ಲಕ್ಷ ವಂಚನೆ
ಹುಬ್ಬಳ್ಳಿ: ಶಾಲಾ ವಿದ್ಯಾರ್ಥಿಗಳ ಬಳಸಿಕೊಂಡು ಮೀಟರ್ ಬಡ್ಡಿ ದಂಧೆ
NAMMUR EXPRESS NEWS
ಬೆಂಗಳೂರು: ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಹಲವಾರು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಇತ್ತ ರೈತರಿಗೆ ಈ ಮಳೆಯ ಕಾರಣದಿಂದ ನಷ್ಟಗಳು ಕೊಡ ಸಂಭವಿಸಲಿದೆ. ಮತ್ತೆ ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ. ಎಂದು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿ ಆಗಿ ಬರಗಾಲ ಅನುಭವಿಸುತ್ತದೆ. ಕರ್ನಾಟಕ ಸಮಸ್ಯೆ ಯಿಂದ ತಪ್ಪಿಸಿಕೊಳ್ಳಲ ಅಿಕಾರದಲ್ಲಿ ಇರುವವರು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಈ ಎಲ್ಲಾ ಸಮಸ್ಯೆ ಯಿಂದ ಪಾರಾಗಬಹುದು ಎಂದು ಹೇಳಿದ್ದಾರೆ.
60 ವರ್ಷದ ಅರ್ಚಕನಿಗೆ 20ರ ಯುವತಿ ಚಾಟಿಂಗ್: ಲಕ್ಷ ಲಕ್ಷ ವಂಚನೆ
60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಯುವತಿ ಮಂಡ್ಯದ ಪಾಂಡವಪುರ ಮೂಲದ ಅರ್ಚಕನಿಗೆ ಲಕ್ಷ ಲಕ್ಷ ಹಣ ಪಂಗನಾಮ ಹಾಕಿದ್ದಾಳೆ. ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಹಣ ಕಳೆದುಕೊಂಡಿದ್ದು, ಇದೀಗ ಪೂಜಾರಪ್ಪ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಡ್ಯ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಸ್ಥಾನದ ಅರ್ಚಕ ವಿಜಯ್ ಕುಮಾರ್ ಕುಟುಂಬದಿಂದ ದೂರವಾಗಿ ಒಬ್ಬರೇ ವಾಸಿಸುತ್ತಿದ್ದು, ಇವರಿಗೆ ಕೆಲ ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ.
ಹೀಗಾಗಿ ಫೇಸ್ಬುಕ್ ಸುಂದರಿ ಸಿರಿ ಜೊತೆ ಪ್ರತಿ ದಿನ ಚಾಟಿಂಗ್ ಮಾಡುತ್ತಿದ್ದರು. ಅರ್ಚಕ ವಿಜಯ್ ಕುಮಾರ್ ಹಿನ್ನಲೆ ತಿಳಿದುಕೊಂಡ ಯುವತಿ ವಸತಿ, ಆರೋಗ್ಯ ಅಂತ ಹೇಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ಹೀಗೆ ಬರೋಬ್ಬರಿ 1 ಲಕ್ಷದ 40 ಸಾವಿರದಷ್ಟು ಹಣವನ್ನು ಲಪಟಾಯಿಸಿದ್ದಾಳೆ.
ಬಣ್ಣ ಬಣ್ಣದ ಮಾತುಗಳಿಂದ ಅರ್ಚಕ ವಿಜಯ್ ಕುಮಾರ್ನನ್ನು ಬಲೆ ಹಾಕಿದ ಸುಂದರಿ ಮಾತು ನಂಬಿ ಫೋನ್ ಪೇ ಮೂಲಕ. ಹಣ ಕೊಟ್ಟ ಬಳಿಕ ಭೇಟಿ ಆಗುವಂತೆ ಸುಂದರಿಗೆ ವಿಜಯ್ ಒತ್ತಾಯ ಹೇರಲಾರಂಭಿಸಿದ್ದಾಳೆ. ಆದರ ಇಂದು, ನಾಳೆ ಎಂದು ಫೇಸ್ಬುಕ್ ಬ್ಲಾಕ್ ಮಾಡಿ ಎಸ್ಕೆಪ್ ಆಗಿದ್ದಾಳೆ.
ಹುಬ್ಬಳ್ಳಿ: ಶಾಲಾ ವಿದ್ಯಾರ್ಥಿ ಬಳಸಿಕೊಂಡು ಮೀಟರ್ ಬಡ್ಡಿ ದಂಧೆ
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೀಟರ್ ಬಡ್ಡಿ ವ್ಯವಹಾರ ಹಿನ್ನೆಲೆಯಲ್ಲಿ ರಾತ್ರಿ ಮಹಮ್ಮದ್ ಸೋಫಿಯಾನ್ ಗೆ ಸಲೀಂ ಚಾಕು ಇರಿದಿದ್ದಾನೆ. ಮಹಮ್ಮದ್ಗೆ ಕುತ್ತಿಗೆ ಭಾಗದಲ್ಲಿ ಚಾಕು ಇರಿದ ಪರಿಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಹಲ್ಲೆ ನಡೆಸಿದ 10 ನೇ ತರಗತಿ ವಿದ್ಯಾರ್ಥಿ ಸಲೀಂನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ವಿಚಾರಣೆ ವೇಳೆ ಹತ್ತು ಸಾವಿರ ಸಾಲದ ಬಡ್ಡಿ ವಿಚಾರವಾಗಿ ಹಲ್ಲೆ ನಡೆಸಿರುವ ಭಯಾನಕ ವಿಷಯ ಹೊರಬಿದ್ದಿದೆ. ಈ ಮೊದಲು ಹಲ್ಲೆಗೆ ಒಳಗಾದ ಬಾಲಕ ಮಹಮ್ಮದ್ನನ್ನ 10 ರಿಂದ 12 ಜನರ ಗುಂಪು ಒತ್ತಾಯಪೂರ್ವಕವಾಗಿ ಕರೆದೊಯ್ದು ಮನಬಂದಂತೆ ಥಳಿಸಿ ಬಡ್ಡಿ, ಅಸಲು ಕೊಡುವಂತೆ ಪೀಡಿಸಿದ್ದಾರೆ. ಆ ಬಳಿಕ ಅಪ್ರಾಪ್ತನ ಪೋಷಕರನ್ನು ಕರೆಸಿ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೇ ಬಾಲಕನನ್ನು ಬಿಟ್ಟು ಕಳಿಸಿದ್ದಾರೆ. ನಂತರ ಸ್ವಲ್ಪ ಸಮಯದ ಬಳಿಕ ಪುನಃ ಮಹಮ್ಮದ್ನನ್ನ ಕರೆಸಿಕೊಂಡು ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
65 ವರ್ಷದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ!
ಚಿಕ್ಕಬಳ್ಳಾಪುರ: ಆಸ್ಪತ್ರೆ ಆವರಣದಲ್ಲೇ 65 ವರ್ಷದ ವೃದ್ಧೆಯೊಬ್ಬರ ಮೇಲೆ ಕಾಮಪಿಶಾಚಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಕೃತ್ಯ ನಡೆದಿದ್ದು, ಇರ್ಫಾನ್ (24) ಎಂಬಾತ ವೃದ್ಧೆಯನ್ನೂ ಬಿಡದ ಕಾಮುಕ.ಇರ್ಫಾನ್ ಚಿಂತಾಮಣಿ ನಗರದ ಹೈದರಾಲಿ ನಗರದ ನಿವಾಸಿಯಾಗಿದ್ದು, ಚಿಕಿತ್ಸೆಗೆಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ವೃದ್ಧೆಯ ಮೇಲೆ ಕೃತ್ಯ ಎಸಗಿದ್ದಾನೆ. ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದು, ಈತನನ್ನು ಬಂಧಿಸಲಾಗಿದೆ.