ಆಡು ಭಾಷೆಯೇ ಆರಗಗೆ ಕಂಟಕ!?
– ಪದೇ ಪದೇ ವಿವಾದದತ್ತ: ಆರಗ ಹೇಳೋದೇನು?
– ಖರ್ಗೆ ಅವರ ಬಗ್ಗೆ ಗೌರವವಿದೆ: ಆರಗ ಸ್ಪಷ್ಟನೆ
NAMMUR EXPRESS NEWS
ತೀರ್ಥಹಳ್ಳಿ: ( Thirthahalli news ) ತೀರ್ಥಹಳ್ಳಿಯಲ್ಲಿ ಬಿಜೆಪಿ ವತಿಯಿಂದ ನಡೆದ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಆಡಿದ ಮಾತು ಇದೀಗ ಭಾರೀ ವಿವಾದಕ್ಕೆ ಕಾರಣ ಆಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮರ ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ ಮರದ ನೆರಳಿನ ಮಹತ್ವ ಗೊತ್ತಿಲ್ಲ. ಸುಟ್ಟು ಕರ್ಕಲಾದಂತೆ ಇರುತ್ತಾರೆ. ನಮ್ಮ ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತೆ ಪಾಪ, ತಲೆ ಕೂದಲು ಮುಚ್ಚಿಕೊಂಡಿದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದ್ದರಿಂದ ಅವರಿಗೆ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಬದುಕು ಅವರಿಗೆ ಗೊತ್ತಿಲ್ಲ ಎಂದು ಸಭೆಯಲ್ಲಿ ಹೇಳಿದ್ದರು.
ಆದರೆ ಜ್ಞಾನೇಂದ್ರ ಅವರು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಲೆನಾಡಿಗರಿಗೆ ಶಾಪವಾಗಿರುವ ಕಸ್ತೂರಿರಂಗನ್ ವಿಚಾರದ ಮಾತಿನ ಬರದಲ್ಲಿ ಬಾಯಿ ತಪ್ಪಿನಿಂದ ಹೇಳಿದ್ದೇನೆ ಹೊರತು ಖಂಡ್ರೆ ಅವರಿಗಾಗಲಿ ಖರ್ಗೆಯವರಿಗಾಗಲಿ ಗೌರವಕ್ಕೆ ಧಕ್ಕೆ ಆಗುವಂತಹ ಮಾತು ಆಡಿಲ್ಲ, ಮಲ್ಲಿಕಾರ್ಜುನ ಖರ್ಗೆಯವರ ಹಿರಿತನಕ್ಕೆ ಅವರ ಮೇಲೆ ಅಪಾರವಾದ ಗೌರವವಿದೆ ಅನಗತ್ಯ ಈ ವಿಚಾರವನ್ನು ಗೊಂದಲಕ್ಕೆ ಸೃಷ್ಟಿಸಿದ್ದಾರೆ ಎಂಬುದಾಗಿ ಶಾಸಕ ಆರಗ ಜ್ಞಾನೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಸಚಿವರಾಗಿದ್ದಾಗಿನಿಂದ ಒಂದಲ್ಲ ಒಂದು ಗೊಂದಲ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುವ ಆರಗ ಜ್ಞಾನೇಂದ್ರ ಅವರ ಆಡು ಭಾಷೆಯೇ ಅವರಿಗೆ ಕಂಟಕ ಆಗುತ್ತಿದೆ. ಹೇಳಬೇಕು ಎಂದು ಹೇಳುವಷ್ಟು ಕೆಟ್ಟ ವ್ಯಕ್ತಿಯೂ ಜ್ಞಾನೇಂದ್ರ ಅಲ್ಲ, ಆದರೆ ಮಾತಿನ ಭರಾಟೆಯಲ್ಲಿ ಅವರ ಮಾತಿನ ಹಾದಿ ತಪ್ಪಿದೆ. ಶುಕ್ರವಾರ ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಆರಗ ಜ್ಞಾನೇಂದ್ರ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ.
ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು
HOW TO APPLY : NEET-UG COUNSELLING 2023