ಕಿರಿಯ ರೈಡರ್ ಶ್ರೇಯಸ್ ರೈಡಿಂಗ್ ವೇಳೆ ಸಾವಿನ ಮನೆಗೆ!
– ಬೆಂಗಳೂರಿನ 13 ವರ್ಷದ ಬಾಲಕ ಸ್ಪರ್ಧೆಯ ವೇಳೆ ಅಪಘಾತ: ಸಾಧಕ ಕ್ರೀಡಾಪಟು ದುರಂತ ಅಂತ್ಯ
– ಮೂಡಿಗೆರೆ: ಆಟ ಆಡಲು ಹೋಗಿದ್ದ ಬಾಲಕ ಗುಂಡಿಗೆ ಬಲಿ
– ಮಂಗಳೂರು: ಯಶಸ್ವಿ ಉದ್ಯಮಿ 8ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ
NAMMUR EXPRESS NEWS
ಚೆನ್ನೈನ ಮದ್ರಾಸ್ ಇಂಟರ್ ನ್ಯಾಶನಲ್ ಸರ್ಕ್ಯೂಟ್ನಲ್ಲಿ ಆಯೋಜಿಸಿದ್ದ ಇಂಡಿಯನ್ ನ್ಯಾಷನಲ್ ಮೋಟಾರು ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಿರಿಯ ರೈಡರ್ ಶ್ರೇಯಸ್ ಹರೀಶ್ ದುರ್ಮರಣಕ್ಕೀಡಾಗಿದ್ದಾರೆ. ಶ್ರೇಯಸ್ ಹರೀಶ್ ಎಂಬ ಬೆಂಗಳೂರಿನ 13 ವರ್ಷದ ಬಾಲಕ ಸ್ಪರ್ಧೆಯಲ್ಲಿ ಮೂರನೇ ಸುತ್ತಿನ ರೈಡಿಂಗ್ ವೇಳೆ ಅಪಘಾತಕ್ಕೆ ಈಡಾಗಿದ್ದು, ತಲೆಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್ ಗಳನ್ನು ರದ್ದುಗೊಳಿಸಿದೆ.
ರಾಷ್ಟ್ರಮಟ್ಟದಲ್ಲಿ ಹಲವಾರು ರೇಸ್ ಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗೆ ಶ್ರೇಯಸ್ ಭಾಜನರಾಗಿದ್ದರು. ಶ್ರೇಯಸ್ ಸಾವಿಗೆ ಪೋಷಕರು ಮಮ್ಮುಲ ಮರುಗಿದ್ದಾರೆ.
ಮೂಡಿಗೆರೆ: ಆಟ ಆಡಲು ಹೋಗಿದ್ದ ಬಾಲಕ ಗುಂಡಿಗೆ ಬಲಿ
ಆಟವಾಡಲು ಹೋದ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿ ಜನ್ನಾಪುರದಲ್ಲಿ ಶವಿವಾರ ನಡೆದಿದೆ. ಸುನೀಲ್ ಎಂಬುವರ ಮಗ ಆಶಿ ಮೃತಪಟ್ಟ ಬಾಲಕ. ಸರಕಾರಿ ಕಟ್ಟಡವೊಂದರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿರ್ಮಾಣ ಮಾಡಿದ್ದ ಗುಂಡಿಯಲ್ಲಿ ನೀರು ತುಂಬಲಾಗಿತ್ತು. ಇಲ್ಲಿಗೆ ಮೂವರು ಬಾಲಕರು ಶನಿವಾರ ಆಟವಾಡಲು ತೆರಳಿದ್ದರು. ಈ ವೇಳೆ ಬಾಲಕ ಆಶಿ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನೆ ಎಂದು ತಿಳಿದು ಬಂದಿದೆ.ಜನ್ನಾಪುರದ ಚಿನ್ನಿಗ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿ ಇತ್ತೀಚಿಗಷ್ಟೇ ಗುದ್ದಲಿಪೂಜೆ ಮಾಡಿ ನೂತನವಾಗಿ ನಿರ್ಮಿಸುತ್ತಿರುವ, ಮುರಾರ್ಜಿ ವಸತಿ ಶಾಲೆ ನೂತನ ಕಟ್ಟಡಕ್ಕೆಂದು ನೀರಿಗೋಸ್ಕರ ತೋಡಿರುವ ತಾತ್ಕಾಲಿಕ ನೀರಿನ ಗುಂಡಿ ತೆಗೆದಿರುತ್ತಾರೆ. ಇದರ ಸುತ್ತಾ ಕಟ್ಟಡದ ಕಾಮಗಾರಿ ಅಧಿಕಾರಿಗಳು ಹಾಗೂ ಇಂಜಿನಿಯರ್ ನಿರ್ಲಕ್ಷತೆಯಿಂದ ಮೆಸ್ ಅಡ್ಡಗಾವಲು ಇಲ್ಲದ ಕಾರಣ ಶಾಲೆಯ ಪಕ್ಕದಲ್ಲಿ ಇರುವ ಸುನಿಲ್ ಎಂಬುವವರ ಮನೆಯ 8 ವರ್ಷದ ಮಗು ಆಟವಾಡಲು ಹೋಗಿ ಬಾವಿಯ ಸುತ್ತ ಏನು ಇಲ್ಲದ ಕಾರಣ ಕಾಲು ಜಾರಿ ನೀರಿಗೆ ಬಿದ್ದು ಕೊನೆಯುಸಿರು ಎಳೆದಿದ್ದಾನೆ.
8ನೇ ಮಹಡಿಯಿಂದ ಬಿದ್ದು ಉದ್ಯಮಿ ಆತ್ಮಹತ್ಯೆ
ಮಂಗಳೂರು: ಯಶಸ್ವಿ ಉದ್ಯಮಿಯೋರ್ವರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಬೆಂದೂವೆಲ್ ಬಳಿ ನಡೆದಿದೆ.
ಮಾಡಿಕೊಂಡ ಘಟನೆ ಮಂಗಳೂರಿನ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಲ್ಡರ್, ಯುವ ಉದ್ಯಮಿ ಮೋಹನ್ ಅಮೀನ್ (48) ಎನ್ನಲಾಗಿದೆ. ಕಟ್ಟಡದ 8ನೇ ಮಹಡಿಯಿಂದ ಭಾನುವಾರ ಮುಂಜಾನೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023