ಆನ್ ಲೈನ್ ಮೂಲಕ ರಾಜ್ಯದಲ್ಲಿ ಅಮೂಲ್ ಉತ್ಪಾದನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ ಆಕ್ಷೇಪಿಸಿದೆ. ಒಂದು ವೇಳೆ ಅಮೂಲ್ ಗೆ ಅವಕಾಶ ಮಾಡಿಕೊಟ್ಟರೆ ಅಮೂಲ್ ಉತ್ಪನ್ನಗಳನ್ನ ಬೀದಿಗೆ ಚೆಲ್ಲುವ ಮೂಲಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯಕ್ಕೆ ಈ ಹಿಂದೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದಾಗ ಅಮೂಲ್ ಉತ್ಪನ್ನಗಳನ್ನ ರಾಜ್ಯದಲ್ಲಿ ಮಾರಾಟಕ್ಕೆ ಅವಕಾಶ ನೀಡುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಶನಿವಾರ ಆನ್ ಲೈನ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಮೂಲ್ ರಾಜ್ಯಕ್ಕೆ ಬಂದರೆ ಒಂದು ಕೋಟಿ ಜನ ರೈತ ಮತ್ತು ರೈತ ಮಹಿಳೆ ಕೆಎಂಎಫ್ ನ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಗ್ಗದ ಬೆಲೆಗೆ ಕೆಎಂಎಫ್ ಉತ್ಪನ್ನಗಳು ಗ್ರಾಹಕರಿಗೆ ಲಭಿಸುತ್ತಿವೆ. ಆದರೆ ಅಮೂಲ್ ರಾಜ್ಯಕ್ಕೆ ಲಗ್ಗೆ ಇಡುವ ಮೂಲಕ ಉದ್ಯೋಗವನ್ನ ಕಿತ್ತುಕೊಳ್ಳುವ ಭಯವಿದೆ ಎಂದು ಆರೋಪಿಸಿದರು.
Related Posts
Add A Comment