ಪತ್ತೆಯಾಯ್ತು ಫಾಲ್ಸ್ ಅಲ್ಲಿ ಬಿದ್ದವನ ಶವ!
– 8 ದಿನಗಳ ಬಳಿಕ ಕಲ್ಲಿನ ಕೊರಕಲಲ್ಲಿ ಶವ ಪತ್ತೆ
– ವಿಧಾನ ಸೌಧದ ಮೇಲೆ ಡ್ರೋನ್ ಹಾರಿಸಿದವರ ಅರೆಸ್ಟ್!
– ಭಾರತ ಗಡಿಯಲ್ಲಿ ಯೋಧನ ಅಪಹರಣ!
NAMMUR EXPRESS NEWS
ಕುಂದಾಪುರ: ಜು.23ರಂದು ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿಯ ಶರತ್ ಕುಮಾರ್ ಶವ 8 ದಿನಗಳ ಬಳಿಕ ಶವ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು, ಶರತ್ ಸ್ನೇಹಿತರು ಸೇರಿದಂತೆ ಅನೇಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಡ್ರೋನ್ ಕ್ಯಾಮೆರಾ ಸಹಾಯದ ಮೂಲಕ ಹುಡುಕಾಟ ನಡೆಸಲಾಗಿತ್ತು. ಇದೀಗ ಭಾನುವಾರ ಶವ ಜಲಪಾತದ 400 ಮೀಟರ್ ಮುಂದೆ ಕಲ್ಲಿನ ಕೊರಕಲಲ್ಲಿ ಶವ ಪತ್ತೆಯಾಗಿದೆ.
ಏನಿದು ಘಟನೆ?: ಕೊಲ್ಲೂರು ದೇವಳಕ್ಕೆ ಭದ್ರಾವತಿಯಿಂದ ಬಂದಿದ್ದ ಶರತ್ ಸ್ನೇಹಿತನೊಂದಿಗೆ ಅರಿಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಜಲಪಾತದಲ್ಲಿ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಆಕಸ್ಮಿಕ ಕಾಲು ಜಾರಿ ನೀರುಪಾಲಾಗಿದ್ದರು. ಶರತ್ ಸ್ನೇಹಿತ ಜಲಪಾತದ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಶರತ್ ಬೀಳುವ ದೃಶ್ಯಾವಳಿಯೂ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಶರತ್ ನೀರುಪಾಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವೈರಲ್ ಆಗಿತ್ತು.
ವಿಧಾನ ಸೌಧದ ಮೇಲೆ ಡ್ರೋನ್ ಹಾರಿಸಿದವರ ಅರೆಸ್ಟ್!
ವಿಧಾನಸೌಧದ ಮೇಲ್ಬಾಗ ದಲ್ಲಿ ಕಾನೂನು ಬಾಹಿರವಾಗಿ ಡೋನ್ ಹಾರಾಟ ನಡೆಸಲು ಯತ್ನಿಸಿದ ಆರೋಪದ ಮೇಲೆ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಇಬ್ಬರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದು, ಬಳಿಕ ಅವರನ್ನು ಠಾಣೆಯಿಂದಲೇ ಜಾಮೀನು ಮೂಲಕ ಬಿಡುಗಡೆ ಮಾಡಿದ್ದಾರೆ. ಕಿರುಚಿತ್ರಕ್ಕಾಗಿ ವಿಧಾನಸೌಧದ ದೃಶ್ಯವನ್ನು ಚಿತ್ರೀಕರಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಭಾರತ ಗಡಿಯಲ್ಲಿ ಯೋಧನ ಅಪಹರಣ!
ಮನೆಗೆ ಬಂದಿದ್ದಯೋಧನನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಕಾಶ್ಮೀರದ ಕುಲ್ಲಾಮ್ನಲ್ಲಿ ನಡೆದಿದೆ.
ಜಾವೇದ್ ಅಹ್ಮದ್ ವಾನಿ (25) ಅಪರಹರಣಕ್ಕೊಳಗಾದ ಯೋಧ. ಜಾವೇದ್ ಮನೆಯಿಂದ ಅಂಗಡಿಯೊಂದಕ್ಕೆ ತೆರಳಲು ಹೇಳಿ ಕಾರಿನಲ್ಲಿ ಹೋಗಿದ್ದರು. ಆದರೆ ತುಂಬಾ ಸಮಯದವರೆಗೂ ಅವರು ವಾಪಾಸ್ ಆಗದೇ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಅವರ ಕಾರು ಪರಂಹಾಲ್ ಎಂಬ ಹೆಸರಿನಲ್ಲಿ ಇದೆ. ಕಾರಿನ ಡೋರ್ಗಳು ತೆರೆದಿದ್ದು ಕಾರಿನಲ್ಲಿ ಅವರ ಚಪ್ಪಲಿ ಹಾಗೂ ರಕ್ತದ ಕಲೆಗಳಿವೆ ಎಂದು ಪರೀಕ್ಷಿಸಲಾಯಿತು. ಜಾವೇದ್ ಅವರನ್ನು ಲೇಹ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಪಹರಣಕ್ಕೊಳಗಾದ ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023