ರಾಷ್ಟ್ರಗೀತೆ ಹಾಡುವ ವೇಳೆ ಉಸಿರು ನಿಲ್ಲಿಸಿದ ಬಾಲಕಿ!
– ಹೃದಯಾಘಾತದಿಂದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿ ಸಾವು
– ಹಾಸನದಲ್ಲಿ ರೇವಣ್ಣ ಆತ್ಮೀಯನ ಮರ್ಡರ್
– ಶಿವಮೊಗ್ಗದಲ್ಲಿ ನಟ ಪ್ರಕಾಶ್ ರೈಗೆ ಟಕ್ಕರ್…!
NAMMUR EXPRESS NEWS
ಚಾಮರಾಜ ನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಸಿಎಂಎಸ್ ಅನಾಥಾಲಯದಲ್ಲಿ ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ಬುಧವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ನಿರ್ಮಲ ಕಾನ್ವೆಂಟ್ ನಲ್ಲಿ ಎಸ್ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಪೆಲಿಸಾ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಮೃತ ವಿದ್ಯಾರ್ಥಿನಿ ಫಿಲಿಶ್ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ಪ್ರಭು ಕಳೆದ ಐದಾರು ವರ್ಷಗಳಿಂದ ವ್ಯಾಸಂಗಕ್ಕಾಗಿ ಪಟ್ಟಣದ ಸಿಎಂಎಸ್ ಅನಾಥಾಲಯಕ್ಕೆ ತಂದು ಸೇರಿಸಿದ್ದರು.
ಹಾಸನದಲ್ಲಿ ಅತ್ಯಾಪ್ತನ ಮರ್ಡರ್
ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಗ್ರಾನೈಟ್ ಉದ್ಯಮಿಯೊಬ್ಬರ ಕೊಲೆಯಾಗಿದೆ.
ಕೊಲೆಯಾದ ವ್ಯಕ್ತಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅತ್ಯಾಪ್ತ ಶ್ರೀರಾಮ ಮಾರ್ಬಲ್ಸ್ ಮಾಲೀಕ ಜೆಡಿಎಸ್ ಮುಖಂಡ ಕೃಷ್ಣಗೌಡ (55) ಎಂದು ಹೇಳಲಾಗುತ್ತಿದೆ. ಹೊರವಲಯದ ನಾಗತವಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಇನ್ನೋವಾ ಕಾರಿನಲ್ಲಿ ಬಂದು ಕೊಲೆ ಮಾಡಿ ಹಂತಕರು ಎಸ್ಕೆಪ್ ಆಗಿದ್ದಾರೆ. ಗ್ರಾನೈಟ್ ಫ್ಯಾಕ್ಟರಿಯ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಭದ್ರಾವತಿಯಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಟಕ್ಕರ್
ನಟ ಪ್ರಕಾಶ್ ರಾಜ್ ಭೇಟಿ ಕೊಟ್ಟಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗೋಮೂತ್ರ, ನೀರು ಹಾಕಿ ಶುದ್ದೀಕರಣ ಮಾಡಿರುವುದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಕಾರ್ಯಕ್ರಮಕ್ಕೂ ಮುನ್ನಾ ನಟ ಪ್ರಕಾಶ್ ರಾಜ್ ಆಗಮನ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಬಳಿಕ ನಟ ಓಡಾಡಿದ್ದ ಜಾಗವನ್ನು ಗೋಮೂತ್ರ, ನೀರಿನ ಮೂಲಕ ಶುದ್ದೀಕರಣ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಭದ್ರಾವತಿಯ ಸರ್ ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರಂಗಭೂಮಿ, ಸಿನಿಮಾ ಮತ್ತು ಸಮಾಜ ಎಂಬ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗಿಯಾಗಿದ್ದರು. ಹೀಗಾಗಿ ನಟನ ಆಗಮನ ವಿರೋಧಿಸಿ ವಿದ್ಯಾರ್ಥಿಗಳು ಗೋ ಮೂತ್ರ, ನೀರು ಹಾಕಿ ಶುದ್ದೀಕರಣ ಮಾಡಿದ್ದಾರೆ
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ಹೊರಗಿಟ್ಟು ಕಾರ್ಯಕ್ರಮ ಮಾಡಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಸಾಥ್ ನೀಡಿದರು.
ಪ್ರಕಾಶ್ ರಾಜ್ ಏನಂದರು?
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರನ್ನು ಪ್ರೀತಿಸಬೇಕು. ಭಿನ್ನಾಭಿಪ್ರಾಯಗಳು ಇರಬೇಕು, ಅದನ್ನು ನಾವು ಎದುರಿಸಲೇಬೇಕು. ಕಲಾವಿದನಾಗಿರುವುದು ಕೇವಲ ನನ್ನ ಪ್ರತಿಭೆಯಿಂದಲ್ಲ, ನನ್ನನ್ನು ಪ್ರೀತಿಸಿದ ಪ್ರೇಕ್ಷಕರು ಹಾಗೂ ನಿರ್ದೇಶಕರಿಂದ ನಾನು ಕಲಾವಿದನಾಗಿದ್ದೇನೆ. ನಾನು ಲೆಫ್ಟಿಸ್ಟ್, ರೈಟಿಸ್, ಸೆಂಟರಿಸ್ಟ್ ಅಲ್ಲ. ನಾನು ಕೇವಲ ಮನುಷ್ಯ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು. ಪತ್ರಿಕಾ ಸಂವಾದಲ್ಲಿ ಮಾತನಾಡಿದ ಅವರು, ಮಾನವ ಜೀವನ ತುಳಿಯುವ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಇದೆ. ಯಾವುದೇ ವಿಷಯದ ಬಗ್ಗೆ ಮಾತುಕತೆ, ಸಂವಾದ ಅಗತ್ಯವಿದೆ, ಜಗಳವಲ್ಲ. ಮನುಷ್ಯನ ಮೇಲಾದ ಗಾಯ ವಾಸಿಯಾಗುತ್ತದೆ, ಅದೇ ದೇಶ, ಸಮಾಜಕ್ಕೆ ಆದ ಗಾಯ ಹಾಗೆ ಬಿಟ್ಟರೆ ಹೆಚ್ಚುತ್ತದೆ ಎಂದರು.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023