ಅಕ್ರಮ ಒತ್ತುವರಿ ತೆರವಿಗೆ ಸಿದ್ಧವಾಯ್ತು ಪಟ್ಟಿ!
* ತೆರವಿನ ವಿವರ ಚಿತ್ರಸಹಿತ ಕಚೇರಿಗೆ ಒದಗಿಸಬೇಕು!
* ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
NAMMUR EXPRESS NEWS
ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದ್ಯತಾ ಪಟ್ಟಿ ಗೊತ್ತುಪಡಿಸಿದ್ದಾರೆ. ಈ ಮೂಲಕ ಇದೀಗ ಒತ್ತುವರಿ ತೆರವಿಗೆ ಕ್ಷಣಗಣನೆ ಆರಂಭವಾಗಿದೆ.
ಅನಗತ್ಯ ಗೊಂದಲ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿ ತೆರವು ಕಾರ್ಯಾಚರಣೆಗೆ ಅಡೆತಡೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಟಿಪ್ಪಣಿಯೊಂದನ್ನು ಇಲಾಖೆ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ತೆರವು ಕಾರ್ಯಾಚರಣೆಗೆ ಕಾರ್ಯಪಡೆ ರಚಿಸಲಾಗಿದೆ. ಕಳೆದ ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರಸಹಿತ ಕಚೇರಿಗೆ ಒದಗಿಸಬೇಕೆಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ.
3 ಎಕರೆ ಮೇಲೆ ಒತ್ತುವರಿ ತೆರವು
ಅಣ್ಯ ಒತ್ತುವರಿ ಾಗೂ ಒತ್ತುವರಿದಾರನ ಪಟ್ಟಾ ಜಮೀನು ಸೇರಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶಕ್ಕೆ ಒಳಪಟ್ಟು, ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ನಿಯಮಗಳಡಿ ಯಾರೇ ಅರಣ್ಯವಾಸಿ ಅನುಸೂಚಿತ ಬುಡಕಟ್ಟಿನ ವ್ಯಕ್ತಿ ಅಥವಾ ಇತರ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಹಾಕಿದ್ದರೆ, ಸುಪ್ರೀಂಕೋರ್ಟ್ ಆದೇಶದನ್ವಯ ಮರು ಪರಿಶೀಲನೆಗೆ ಬಾಕಿಯಿಲ್ಲದ ಪ್ರಕರಣಗಳನ್ನು ಖಾತ್ರಿಪಡಿಸಿಕೊಂಡು ತೆರವಿಗೆ ಸೂಚಿಸಿದ್ದಾರೆ. ಸಚಿವರ ಪ್ರಕಾರ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್, ಹೋಂ ಸ್ಟೇ, 30 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ, 10 ರಿಂದ 30 ಎಕರೆ ಮತ್ತು ಮೂರರಿಂದ 10 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿ ತೆರವುಗೊಳ್ಳಲಿದೆ. ಜತೆಗೆ 64ಎ ಪ್ರಕ್ರಿಯೆ ಬಾಕಿ ಅಥವಾ ಕೋರ್ಟ್ಗಳಲ್ಲಿ ಪ್ರಕರಣ ಬಾಕಿಯಿದ್ದಲ್ಲಿ ಇವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಂಡು ಒತ್ತುವರಿಗೆ ಕ್ರಮವಹಿಸಬೇಕೆಂದು ಖಂಡ್ರೆ ಸೂಚಿಸಿದ್ದಾರೆ.