ಅಬ್ಬಾ…ಟೊಮ್ಯಾಟೊ ದರ ಇಳೀತಿದೆ!
– ಧಾರಣೆ ದಿಢೀರ್ ಅರ್ಧಕ್ಕರ್ಧ ಕುಸಿತ: 50 ರೂ. ನತ್ತ ಬೆಲೆ
– ಮುಂದಿನ ವಾರ ಮತ್ತಷ್ಟು ಇಳಿಕೆ?
NAMMUR EXPRESS NEWS
ಕೋಲಾರ: ಕಳೆದ 15 ದಿನಗಳಿಂದ ಗಗನಮುಖಿಯಾಗಿದ್ದ ಟೊಮ್ಯಾಟೊ ಧಾರಣೆ ಏಕಾಏಕಿಯಾಗಿ ಅರ್ಧಕ್ಕರ್ಧ ಕುಸಿದಿದೆ. ಹೋಲ್ಸೇಲ್ ಮಾರುಕಟ್ಟೆಯಲ್ಲಿ ಎರಡು ದಿನದ ಹಿಂದೆ ಇದ್ದ ಬೆಲೆ ಈಗ ಅರ್ಧಕ್ಕಿಳಿದಿದೆ. ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೋ ಮಾರ್ಕೆಟ್ ಎಂದು ಗುರುತಿಸಲಾದ ಕೋಲಾರದ ಹೋಲ್ಸೇಲ್ ಮಾರ್ಕೆಟ್ನಲ್ಲಿ ಎರಡು ದಿನಗಳ ಹಿಂದೆ 15 ಕೆಜಿಯ ಬಾಕ್ಸ್ 2700 ರೂ.ಗೆ ಮಾರಾಟವಾಗಿತ್ತು. ಶುಕ್ರವಾರ ಅದೇ ಟೊಮ್ಯಾಟೋ 1480 ರೂ.ಗೆ ಹರಾಜಾಗಿದೆ. ಅಂದರೆ 100 ರೂ ಕೆಜಿಗೆ ಬರುತ್ತಿದೆ.
ಕೋಲಾರ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ 2700 ರೂ.ಗೆ ಮಾರಾಟವಾಗಿದ್ದು, ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎಂದು ಗುರುತಿಸಲಾಗಿತ್ತು. ಅಂದರೆ ಒಂದು ಕೆಜಿಗೆ 180 ರೂ.ಗೆ ಮಾರಾಟವಾಗಿತ್ತು. ಇದಕ್ಕೆ ಪ್ರಮುಖ ಗ್ರಾಹಕರೇ ಉತ್ತರ ಭಾರತದವರು. ಉತ್ತರ ಪ್ರದೇಶ, ರಾಜಸ್ಥಾನ, ದಿಲ್ಲಿಯ ಬೇಡಿಕೆಗೆ ಅನುಗುಣವಾಗಿ ಈ ದರ ಒಂದೇ ಸಮನೆ ಏರಿಕೆಯಾಗಿತ್ತು.
ಮಾರುಕಟ್ಟೆಗೆ ಬರುತ್ತಿದ್ದ ಟೊಮ್ಯಾಟೋ ಪ್ರಮಾಣ ತುಂಬ ಕಡಿಮೆ ಇತ್ತು ಬೇಡಿಕೆ ತುಂಬ ಜಾಸ್ತಿ ಇತ್ತು.ಈಗ ಮತ್ತೊಂದು ಬೆಳೆ ಬೆಳೆದು ಮಾರುಕಟ್ಟೆಗೆ ಬರುವ ಹಂತವಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಟೊಮ್ಯಾಟೊ ಮಾರುಕಟ್ಟೆಗೆ ಬರಲು ಸಿದ್ಧರವಾಗಿದೆ. ಅದರಲ್ಲೂ ಮುಖ್ಯವಾಗಿ ಕೋಲಾರದ ಟೊಮ್ಯಾಟೋಗೆ ಭಾರಿ ಬೇಡಿಕೆ ಇದ್ದ ಉತ್ತರ ಭಾರತದಲ್ಲಿ ಕೂಡಾ ಈಗ ಸ್ಥಳೀಯವಾಗಿ ಟೊಮ್ಯಾಟೊ ಲಭ್ಯವಾಗುತ್ತಿದೆ. ಈ ಕಾರಣಕ್ಕಾಗಿ ಟೊಮ್ಯಾಟೊ ಬೆಲೆ ಇಳಿದಿದೆ ಎಂದು ವಿಶ್ಲೇಷಿಸಲಾಗಿದೆ. ಟೊಮ್ಯಾಟೊ ಧಾರಣೆ ಸಾಮಾನ್ಯ ಹಂತಕ್ಕೆ ಬರಲಿದೆ. ಈಗಾಗಲೇ ಸಾಮಾನ್ಯ ಟೊಮ್ಯಾಟೊಗಳ ಬೆಲೆ
ಮಾರುಕಟ್ಟೆಯಲ್ಲಿ 80ರಿಂದ 100 ರೂ. ಇದ್ದು ಇದು ಒಂದು ವಾರದಲ್ಲಿ 50 ರೂ. ಮಟ್ಟಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?
HOW TO APPLY : NEET-UG COUNSELLING 2023