ಟಾಪ್ 3 ನ್ಯೂಸ್ ಕರ್ನಾಟಕ
ದೇವರ ಪ್ರಸಾದ ಸೇವಿಸಿದ ತಕ್ಷಣ ಮೂವರು ಸಾವು!
– ಇನ್ನು ಮೂವರಿಗೆ ಪ್ರಾಣ ಭಯ: ತುಮಕೂರಲ್ಲಿ ಘಟನೆ
– ಗದ್ದೆ ಉಳುಮೆ ವೇಳೆ ಟ್ರ್ಯಾಕ್ಟರ್ ಪಲ್ಟಿ: ರೈತನ ಸಾವು
– ಪ್ರೇಯಸಿ ಹೆಸರಿಗೆ ಹಣ: ಅರಣ್ಯ ಅಧಿಕಾರಿ ಚಂದನ್ ಅಮಾನತು
NAMMUR EXPRESS NEWS
ತುಮಕೂರು:ತುಮಕೂರಿನ ಮಧುಗಿರಿಯಲ್ಲಿ ದೇವರ ಅನ್ನಪ್ರಸಾದ ಸೇವಿಸಿ ಮೂರು ಮಹಿಳೆಯರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಆರು ಮಂದಿ ತೀವ್ರತೆಯಿಂದ ಬಳಲುತ್ತಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರ ಕಾರ್ಯಕ್ಕೆ ಮಾಡಿದ್ದ ಊಟ ಸೇವನೆ ಮಾಡಿದವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ.
ವಾಂತಿ ಬೇಧಿಯಿಂದ ಮೂರು ಮಹಿಳೆಯರು ಮೃತಪಟ್ಟರೆ, ಆರು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು ಕಾಟಮ್ಮ(45), ಬುಳ್ಳುಸಂದ್ರ ಗ್ರಾಮದಲ್ಲಿ ವೃದ್ದೆ ತಿಮ್ಮಕ್ಕ (85), ಬಳಿಕ ವೃದ್ದೆ ಗಿರಿಯಮ್ಮ(90) ಎಂಬವರು ಮೃತಪಟ್ಟ ಮಹಿಳೆಯರು.
್ರಾಮದಲ್ಲಿ ುತ್ತುರಾಯಸ್ವಾಮಿ, ಕರಿಯಮ್ಮ ದೇವರಿಗೆ ಹರಿಸೇವೆ ಮಾಡಲಾಗಿತ್ತು. ಗ್ರಾಮಸ್ಥರಿಗೆ ಊಟ ಸೇವೆ ನೀಡಿ ಊಟ ಮಾಡಿದ ಬಳಿಕ ಗ್ರಾಮದ ಕೆಲವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿರುವುದು ವಿಪರ್ಯಾಸವೇ ಸರಿ.
ಗದ್ದೆ ಉಳುಮೆ ವೇಳೆ ಟ್ರ್ಯಾಕ್ಟರ್ ಪಲ್ಟಿ: ರೈತನ ಸಾವು
ಚಿಕ್ಕಬಳ್ಳಾಪುರ: ಗದ್ದೆಯಲ್ಲಿ ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್ ಕೆಸರಿನಲ್ಲಿ ಸಿಲುಕಿದ್ದು, ಮೇಲೆತ್ತಲು ಪ್ರಯತ್ನಿಸಿಲು ಹೋದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತನೊಬ್ಬ ಮೃತಪಟ್ಟಿದ್ದಾರೆ.ಚಿಕ್ಕಬಳ್ಳಾಪುರದ ಚೇಳೂರು ತಾಲ್ಲೂಕಿನ ದಿಗವಪ್ಯಯಲವಾರಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ಟ್ರ್ಯಾಕ್ಟರ್ ಚಾಲನೆ ಮಾಡಿ ಗದ್ದೆ ಉಳುಮೆ ಮಾಡುತ್ತಿದ್ದ ವೇಳೆ ಕೆಸರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ ಮೇಲೆತ್ತಲು ಪ್ರಯತ್ನ ಪಟ್ಟಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರ ಅಡಿ ಸಿಲುಕಿ ರೈತನೋರ್ವ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಸ್ಥಳೀಯರು ಜೆಸಿಬಿ ಮೂಲಕ ಟ್ರ್ಯಾಕ್ಟರ್ನಡಿಯಲ್ಲಿದ್ದ ಮೃತ ದೇಹವನನ್ನು ಹೊರತೆಗೆದಿದ್ದಾರೆ.
ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರೇಯಸಿ ಹೆಸರಿಗೆ ಹಣ: ಅರಣ್ಯ ಅಧಿಕಾರಿ ಚಂದನ್ ಅಮಾನತು
ಚಿಕ್ಕಮಗಳೂರು: ಬಲ್ಲರಾಯನದುರ್ಗ ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ನಕಲಿ ಟಿಕೆಟ್ ನೀಡಿ ಆ ಹಣವನ್ನು ತನ್ನ ಪ್ರೇಯಸಿಯ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ಅರಣ್ಯ ಅಧಿಕಾರಿ ಚಂದನ್, ಅಕ್ರಮ ಹೊರಬರುತ್ತಿದ್ದಂತೆಯೇ ಅಮಾನತು ಮಾಡಿ ಆದೇಶಿಸಲಾಗಿದೆ.
ಚಂದನ್ ಪುರಾಣ ಹೊಸತೇನಲ್ಲ! ಈ ಹಿಂದೆಯೂ ಬೇರೊಬ್ಬರ ಪತ್ನಿಯನ್ನು ತನ್ನ ಕ್ವಾರ್ಟರ್ಸ್ ಗೆ ಕರೆದುಕೊಂಡು ಬಂದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದಿದ್ದ ಘಟನೆ ನಡೆದಿತ್ತು.ಮನೆಯ ಮೇಲೆ ಬೀಳುವಂತಿದ್ದ ಒಣಗಿದ ಮರವನ್ನು ಕಡಿದ ತಪ್ಪಿಗೆ ನನ್ನೊಂದಿಗೆ ಸಹಕರಿಸಿದರೆ ಪ್ರಕರಣ ಕ್ಲೋಸ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿ ಹಿಳೆಯೊಬ್ಬರನ್ನು ಮಂಕ್ಕೆ ಕರೆದು ಅಸಭ್ಯವಾಗಿ ವರ್ತಿಸಿದ ಅರಣ್ಯಾಧಿಕಾರಿ ಚಂದನ್ ಗೆ ಈ ಹಿಂದೆ ಗ್ರಾಮಸ್ಥರೇ ಗೂಸಾ ನೀಡಿದ್ದರು. 2020ರಲ್ಲಿ ಈ ಪ್ರಕರಣ ನಡೆದಿದ್ದು ಸ್ವತಃ ಮಹಿಳೆಯ ಪತಿಯೇ ಸ್ಥಳೀಯರೊಂದಿಗೆ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಈ ಬಗ್ಗೆ ಪ್ರತಿಭಟನೆ ನಡೆಸಿ ದೂರು ಸಹ ನೀಡಲಾಗಿದೆ.